ಮಾಹೇಶ್ವರನ ಜ್ಞಾನಿಸ್ಥಲ - ಭಕ್ತ
ಕಬ್ಬಿನ ಹಣಿದವನಾಡುವರಲ್ಲದೆ, ಕಾಯದ ಹಣಿದವನಾಡುವರೆ?
ಮೇಲೊಡ್ಡವಾಯಿತ್ತೆಂದು, ಕೂಡಲಸಂಗಮದೇವಾ,
ನೀನಿಕ್ಕಿದ ಜೂಜಿಂಗೆ ಹೊಯಿದು ಗೆದ್ದ ಸಿರಿಯಾಳ!
Transliteration Kabbina haṇidavanāḍuvarallade, kāyada haṇidavanāḍuvare?
Mēloḍḍavāyittendu, kūḍalasaṅgamadēvā,
nīnikkida jūjiṅge hoydu gedda siriyāḷa!
Manuscript
English Translation 2 They press the Sugar-cane in the mill:
But, crush not their own body:
It is surely a higher stake for them.
O Kūḍala Saṅgama Lord,Siriyāḷa won
By striking at the stake that you had thrown.
Translated by: L M A Menezes, S M Angadi
Hindi Translation ईख को कोल्हू में पेरते हैं,
काया को पेरते हैं?
दाँव बडा महँगा था, कूडलसंगमदेव ,
तुम्हारे लगाए दाँव में सिरियाळ ने बाजी जीत ली ॥
Translated by: Banakara K Gowdappa
Telugu Translation మాటతో సరిపుచ్చవచ్చునే శబ్దసారుని
మాటతో సరి యనవచ్చునే శరణ సంబంథుని?
సంగయ్య; నంబికి ‘ఓ’ యన్నమాట; అది ఒక
వట్టిమాటబోయని వదలవచ్చునే!
Translated by: Dr. Badala Ramaiah
Tamil Translation கரும்பை அரியும் ஆட்டம் ஆடுவரன்றி
உடலை அரிந்து கொள்ளும் ஆட்டம் ஆடுவரோ?
சிறந்த பந்தயம் என கூடல சங்கமதேவனே
நீ வைத்த பந்தயத்தில் சிறுத்தொண்டர் அரிந்து
வென்றார் அன்றோ!
Translated by: Smt. Kalyani Venkataraman, Chennai
Marathi Translation
ऊस कापण्याची पैज लावतील पण, देह चिरण्याची पैज लावतील का?
कूडलसंगमदेव श्रेष्ठ झाले म्हणूनी
तू लावलेली पैज सिरियाळानेच जिंकली.
Translated by Shalini Sreeshaila Doddamani
ಶಬ್ದಾರ್ಥಗಳು ಕಾಯ = ಕೆಲಸ; ಜೂಜು = ; ಹಣಿ = ;
ಕನ್ನಡ ವ್ಯಾಖ್ಯಾನ ಕಬ್ಬಿನ ಕೋಲನ್ನು ಸಿಬುರೇಳದಂತೆ ಒಂದೇ ಏಟಿಗೆ ಕಚ್ಚನೆ ಕಡಿಯುವ ಪಂದ್ಯದ ಆಟವೊಂದಿದೆ. ಆದರೆ ಈ ದೇಹವೆಂಬ ಕಬ್ಬನ್ನು ದೇಹಗುಣದ ಸಿಬುರೊಂದೂ ಏಳದಂತೆ ಪರಿಚ್ಛೇದಿಸಿಕೊಳ್ಳುವ ಪಂದ್ಯವನ್ನು ಕಟ್ಟಿಗೆಲ್ಲುವುದು ಮಹಾಶಿವಭಕ್ತರಿಗೆ ಮಾತ್ರ ಸಾಧ್ಯವೆನ್ನುತ್ತಿರುವರು ಬಸವಣ್ಣನವರು.
ಹಿಂದೆ ಸಿರಿಯಾಳನೆಂಬ ಶಿವಭಕ್ತನನ್ನು ಕುರಿತು ಶಿವನು ನಿನ್ನ ಕರುಳಕುಡಿಯಾದ ಮಗನನ್ನೇ ಕತ್ತರಿಸಿ ನನಗೆ ಇಡಬಲ್ಲೆಯಾ ಎಂದು ಪಂದ್ಯ ಕಟ್ಟಿದನು. ಆಗ ಸಿರಿಯಾಳನು- “ಇಡದಿದ್ದರೆ ನಾನು ನಿನ್ನ ಕರುಳ ಕುಡಿಯೇ ಅಲ್ಲವೆನ್ನುತ್ತ ಪಣಕಟ್ಟಿ ಹೆತ್ತ ತಾಯಿತಂದೆಗಳಾರೂ ಮಾಡಲಾರದ್ದನ್ನು ಮಾಡಿ ಗೆದ್ದನು. ನಮಗೆ ವಿಪರೀತವೆನಿಸುವ ಸಿರಿಯಾಳನ ಈ ವರ್ತನೆಯನ್ನು ಬಸವಣ್ಣನವರು ಬಹಳ ಮೆಚ್ಚಿಕೊಂಡಿರುವರು –ಅದೇ ವೇಳೆಗೆ ಅದು ತಮ್ಮಿಂದಾಗದೆಂದೂ ಮನಬಿಚ್ಚಿ ಮಾತನಾಡಿರುವರು (ನೋಡಿ ವಚನ 321, 322).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು