ಮಾಹೇಶ್ವರನ ಜ್ಞಾನಿಸ್ಥಲ - ಭಕ್ತ
ಅರ್ಥಪ್ರಾಣಾಭಿಮಾನವ ಕೊಟ್ಟೆನೆಂಬವರಲ್ಲದೆ
ಕೊಟ್ಟ ಭಕ್ತರನಾರನೂ ಕಂಡುದಿಲ್ಲ.
ದಾಸ ತನ್ನ ವಸ್ತ್ರವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ;
ಬಲ್ಲಾಳ ತನ್ನ ವಧುವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ;
ಸಿರಿಯಾಳ ತನ್ನ ಮಗನ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ!
ಇವೆಲ್ಲ ಹೊರಗಣ ಮಾತು:
ಕೂಡಲಸಂಗಮದೇವರಲ್ಲಿ ತನ್ನ ಕೊಟ್ಟ ಸಿಂಧುಮರಾಳ!
Transliteration Arthaprāṇābhimānava koṭṭenembavarallade
koṭṭa bhaktaranāranū kaṇḍudilla.
Dāsa tanna vastrava koṭṭanallade tanna koṭṭudilla;
ballāḷa tanna vadhuva koṭṭanallade tanna koṭṭudilla;
siriyāḷa tanna magana koṭṭanallade tanna koṭṭudilla!
Ivella horagaṇa mātu:
Kūḍalasaṅgamadēvaralli tanna koṭṭa sindhumarāḷa!
Manuscript
English Translation 2 There are men who say
They'll give their honour, life and wealth;
But I see no devotee
Who has actually given them!
Dāsa gave his cloth, but not himself;
Ballāḷa gave his cloth, but not himself;
Siriyāḷa gave his son, but not himself;
It was all an outward thing:
Sindhumarala alone did give himself
To Lord Kūḍala Saṅgama!
Translated by: L M A Menezes, S M Angadi
Hindi Translation कहते हैं हमने अर्थप्राणाभिमान अर्पित किया,
किंतु अर्पित करनेवाले भक्तों को नहीं देखा ।
दासने अपना वस्त्र दिया, अपने को नहीं;
बल्लाळ ने अपनी पत्नी को दिया, अपने को नहीं;
सिरियाळ ने अपने पुत्र को दिया, अपने को नहीं;
ये सब बाहरी बातें हैं!
सिंधुमराळ ने कूडलसंगमदेव के हाथ
अपने को अर्पित किया ॥
Translated by: Banakara K Gowdappa
Telugu Translation అర్ధ ప్రాణాభిమానముల నిత్తుమనువా రేగాని
ఇచ్చిన భక్తుల నెవ్వరినీ చూడలేదు;
దాసయ్య తన వస్త్రమిచ్చెనేగాని తన్నిచ్చుకొనలేదు;
బల్లాళుడు తన వధువు నిచ్చెనేగాని తన్నిచ్చుకొనలేదు;
ఇవి యంతా పై పై మాటలేగాని సంగనికి
సింధుమరాళు డొక్కడే తన్ను తానిచ్చుకొనెనయ్యా!
Translated by: Dr. Badala Ramaiah
Tamil Translation செல்வம், உயிர், அபிமானத்தை அளித்தேன் என்பரே தவிர
அளித்த பக்தர் யாரையும் கண்டதில்லை.
தாசன் தன்னாடையை ஈந்தனனன்றி தன்னை ஈயவில்லை
சிறுத்தொண்டன் தன்மகனை ஈந்தனனன்றித் தன்னை ஈயவில்லை
வல்லாளன் தன் மனைவியை ஈந்தனனன்றித் தன்னை ஈயவில்லை
இவ்வனைத்தும் புறப்பேச்சு
கூடல சங்கம தேவரிடத்தில் சிந்துமராளன் தன்னை ஈந்தான்!
Translated by: Smt. Kalyani Venkataraman, Chennai
Marathi Translation
अर्थ, प्राण, अभिमान अर्पण केला म्हणून बोलतात.
स्वतःला अर्पण करणारा भक्त पाहिला नाही.
दासय्याने आपले वस्त्र दिले, स्वतःला दिले नाही.
श्रीयाळाने आपल्या मुलाला दिले, स्वतःला दिले नाही.
बल्लाळाने आपल्या वधूला दिले, स्वतःला दिले नाही.
या सगळ्या बाह्य उपचाराच्या गोष्टी.
कूडलसंगमदेवाला स्वतःला अर्पण केले सिंधू मराळाने.
Translated by Shalini Sreeshaila Doddamani
ಶಬ್ದಾರ್ಥಗಳು ಅಭಿಮಾನ = ಹೆಂಡರು ಮಕ್ಕಳಲ್ಲಿ ಇರುವ ಮಮತೆ; ಅರ್ಥ = ಹಣ; ದಾಸ = ; ಪ್ರಾಣ = ; ವಧು = ; ಸಿಂಧು = ;
ಕನ್ನಡ ವ್ಯಾಖ್ಯಾನ ಸಿಂಧುಮರಾಳನೆಂಬವನೊಬ್ಬ ರಾಜನೆಂಬ ಮಾತು ಹಾಗಿರಲಿ -ಅವನು ತನ್ನ ಅರ್ಥ-ಪ್ರಾಣ-ಅಭಿಮಾನಗಳನ್ನೆಲ್ಲ ಜಂಗಮ(ಶಿವಕಾರ್ಯ)ಕ್ಕೆ ತೆತ್ತುಕೊಂಡವನು. ಒಮ್ಮೆ ಪರೀಕ್ಷಾರ್ಥವಾಗಿ ಶಿವನು ಜಂಗಮರೂಪಿಯಾಗಿ ಬಂದು -ನಿನ್ನ ಅರ್ಥ ಪ್ರಾಣ ಅಭಿಮಾನ ನಮ್ಮದೆಂದ ಮೇಲಿನ್ನು ನೀನಿಲ್ಲಿರಬೇಡ –ರಾಜ್ಯಬಿಟ್ಟು ಹೋಗು ಎಂದನು, ಸಿಂಧುಬಲ್ಲಾಳನಿಗೆ ಆ ಮಾತು ಅಸದಳವೆನಿಸಲಿಲ್ಲ. ಹೆಂಡತಿ ಮಕ್ಕಳನ್ನೂ ದೇಶಕೋಶವನ್ನೂ ಬಿಟ್ಟು ರಾಜ್ಯದಿಂದ ಹೊರಹೊರಟನು.
ಆಗ ಆ ಶಿವಜಂಗಮನು ದಾರಿಯಲ್ಲಿ ಸಿಂಧುಮರಾಳನಿಗೆ ಮರಳಿ ಕಾಣಿಸಿಕೊಂಡು -ನಿನ್ನ ಅರ್ಥ ನನ್ನದೆಂದೆ, ನಿನ್ನ ಅಭಿಮಾನ ನನ್ನದೆಂದೆ –ಇನ್ನು ನಿನ್ನ ಪ್ರಾಣವೂ ನನ್ನದೆಂದೆ –ಅಂದ ಮೇಲೆ ಈ ನಿನ್ನ ದೇಹವೂ ನನ್ನದಲ್ಲವೆ ? ಅದರ ಬಲಭಾಗವನ್ನು ನನಗೆ ಕೊಡು ಎಂದನು. ಆ ಮಾತಿನಿಂದ ಪುಳಕಿತಗೊಂಡ ಸಿಂಧು ಮರಾಳನು –ಕೊಟ್ಟೆ ಎಂದನು.
ಶಿವಜಂಗಮನಾದರೋ ಕರಗಸದಿಂದ ಸಿಂಧುಮರಾಳನ ದೇಹವನ್ನು ಎರಡಾಗಿ ಸೀಳುತ್ತಿದ್ದರೆ –ರಾಜನ ಎಡಗಣ್ಣಿಂದ ಕಂಬನಿ ದಳದಳ ಸುರಿದುದನ್ನು ಕಂಡು -ನೀನು ಕೊಟ್ಟು ಪರಿತಪಿಸುತ್ತಿರುವೆ -ನಿನ್ನ ಈ ದೇಹ ನನಗೆ ಬೇಡವೆನ್ನುವನು. ವಾಸ್ತವವಾಗಿ ಸಿಂಧುಮರಾಳನ ಎಡಗಣ್ಣಲ್ಲಿ ನೀರು ಬಂದುದು -ಬಲಭಾಗ ಮಾತ್ರ ಶಿವಾರ್ಪಿತವಾಯಿತು,ಎಡಭಾಗ(ಶರಣಸತಿಸ್ಥಾನ) ವ್ಯರ್ಥವಾಯಿತಲ್ಲಾ ಎಂಬ ನೋವಿನಿಂದಲೇ ಹೊರತು ಕೊಟ್ಟ ವ್ಯಥೆಯಿಂದಲ್ಲ. ಅವನ ದೇಹದ ಬಲಭಾಗದಲ್ಲಿ ಎದ್ದ ರೋಮಾಂಚನ ಅದನ್ನು ಸ್ಪಷ್ಟಪಡಿಸುತ್ತಲೂ ಇತ್ತು. ಅದನ್ನು ಗಮನಿಸಿದ ಶಿವನು ತುಂಬಿದ ಎದೆಯಿಂದ ಸಿಂಧುಮರಾಳನನ್ನು ತಬ್ಬಿಹಿಡಿದು ಕೈಲಾಸಕ್ಕೆ ಕರೆದೊಯ್ದನು.
ಶಿವನಿಗೆ ದೇವರ ದಾಸಿಮಯ್ಯನು ತನ್ನ ಉಟ್ಟ ಪೀತಾಂಬರವನ್ನೇ ಬಿಚ್ಚಿಕೊಟ್ಟನು, ಬಲ್ಲಾಳನು ತನ್ನ ಪ್ರಿಯತಮೆಯನ್ನೇ ಬಿಟ್ಟುಕೊಟ್ಟನು, ಸಿರಿಯಾಳನು ತನ್ನ ಮುದ್ದುಮಗನನ್ನೇ ಒಪ್ಪಿಸಿಕೊಟ್ಟನು ಆದರೆ ಅವರಿಗೆಲ್ಲಾ ತನ್ನನ್ನೇ ಕೊಡುವುದು ಸಾಧ್ಯವಾಗಲಿಲ್ಲ. ಅದು ಶಿವನಿಗೂ ತಮಗೂ ಭಿನ್ನವರಿಯದವರಿಗೆ ಮಾತ್ರ ಸಾಧ್ಯ.
ಈ ವಚನದ ಇಂಗಿತವೆಂದರೆ -ಬಿಟ್ಟೇನೆಂದರೂ ಬಿಡಲಾಗದ ಈ ದೇಹ ವ್ಯಾಮೋಹವನ್ನು ಬಿಟ್ಟವನೇ ಭಕ್ತನು. ಭಕ್ತನ ಅಂಗವು ಲಿಂಗವಾಗಬೇಕೆಂಬ ಬಸವಸಿದ್ಧಾಂತವೂ ಇದನ್ನೇ ದೃಢೀಕರಿಸುತ್ತಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು