ಮಾಹೇಶ್ವರನ ಜ್ಞಾನಿಸ್ಥಲ - ಶರಣ
ನಿಸ್ಸೀಮ ಗುಗ್ಗುಳವನಿಕ್ಕಿದವನೊಬ್ಬ ಶರಣ:
'ಉಘೇ, ಚಾಂಗು ಭಲಾ' ಎಂಬ ಹೊಗೆ ಗಗನವ ತೀವೆ.
ಓಹಿಲನ ಮೆರೆದ ಸೌರಾಷ್ಟ್ರವೆಂಬ ಮಂಡಲದಲ್ಲಿ,
ಕೂಡಲಸಂಗಮದೇವ ಭಕ್ತವತ್ಸಲನಾಗಿ.
Transliteration Nis'sīma gugguḷavanikkidavanobba śaraṇa:
'Ughē, cāṅgu bhalā' emba hoge gaganava tīve.
Ōhilana mereda saurāṣṭravembamaṇḍaladalli,
kūḍalasaṅgamadēva bhaktivatsalanāgi.
Manuscript
English Translation 2 A certain Śaraṇa burnt
Bedellium without end:
The smoke of his loud acclamations filled
The entire sky!
Lord Kūḍala Saṅgama,
From tenderness to devotees,
Blazoned Ōhila in the Suraśāstra tract.
Translated by: L M A Menezes, S M Angadi
Hindi Translation एक शरणने निस्सीम गुग्गुल जलाया,
जयजयाकार रूपी धुआँ
गगन में व्याप्त होने पर
भक्तवत्सल कूडलसंगमदेव ने
सौराष्ट्र मंडल में ओहिल का सम्मान किया ॥
Translated by: Banakara K Gowdappa
Telugu Translation ఎనలేని గుగ్గిలము వేసి నొక్క శరణుడు;
ఉఘే, చాంగు; భళాయని పొగడ దివితీగలయ్యె;
వెలిగే ఓహిలుడు సౌరాష్ట్రమండలమున
భక్త వత్సలుడయ్యె మా సంగమదేవుడు.
Translated by: Dr. Badala Ramaiah
Tamil Translation அளவற்ற நறுமணத் தூளை ஈந்தவன் ஒரு சரணன்
“வாழ்க, வளர்க, நல்வரவு” என்னும் முழக்கம் விண்ணை எட்ட
ஒகிலனுடன் ஸௌராஷ்டிரமண்டலத்தில்
கூடல சங்கமதேவன் பக்தியை நயப்பவன் ஐயனே.
Translated by: Smt. Kalyani Venkataraman, Chennai
Marathi Translation
निस्सीम गुग्गळाचा धूप ठेवला एका शरणाने
`उघे चांगूभला` घोषणा रुपी धूर गगनात पसरविला.
ओहिलाची किर्ती पसरविली सौराष्ट्र देशात
कूडलसंगमदेव भक्त वत्सल आहे.
Translated by Shalini Sreeshaila Doddamani
ಶಬ್ದಾರ್ಥಗಳು ಉಘೇ = ; ಓಹಿಲ = ; ಗಗನ = ಆಕಾಶ; ಗುಗ್ಗುಳ = ; ಚಾಂಗು = ; ನಿಸ್ಸೀಮ = ; ಭಲಾ = ; ಮಂಡಲ = ; ವತ್ಸಲ = ವಾತ್ಸಲ್ಯ; ಸೌರಾಷ್ಟç = ;
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಓಹಿಲನೆಂಬ ಸೌರಾಷ್ಟ್ರದ ಶಿವಭಕ್ತನೊಬ್ಬನ ದೇಹತ್ಯಾಗದಂದವನ್ನು ಮನಸಾರ ಮೆಚ್ಚಿಕೊಂಡಾಡಿರುವರು.
ಈ ಓಹಿಲನು ಹದಿನಾರರ ಹರೆಯದ ಒಬ್ಬ ರಾಜಪುತ್ರ. ಸತ್ತ ತಂದೆಯ ದೇಹವನ್ನು ಚಿತೆಯ ಮೇಲಿಟ್ಟು ಬಂಧುಬಳಗವೆಲ್ಲಾ ಗೊಳೋ ಎಂದು ಅಳುತ್ತಿದ್ದಾರೆ-ಸತ್ತವರು ಮರಳಿ ಬಾರರೆಂದೂ, ಬದುಕಿರುವರೆಲ್ಲರೂ ಹೀಗೆ ಸಾಯುವವರೇ ಎಂದೂ, ಈ ಸಾವಿನ ನೋವಿನಿಂದ ತಪ್ಪಿಸಿಕೊಳ್ಳಲಿರುವ ಒಂದೇ ಒಂದು ಉಪಾಯವೆಂದರೆ ದೇವರಿಗೆ ಸರ್ವಸ್ವವನ್ನೂ ಅರ್ಪಿಸಿಕೊಳ್ಳುವುದೇ ಆಗಿದೆಯೆಂದೂ ನಿಶ್ಚಯಿಸಿದ. ಉಟ್ಟ ರೇಷ್ಮೆಯನ್ನೂ ತೊಟ್ಟ ಚಿನ್ನ ಮುತ್ತು ವಜ್ರಗಳನ್ನೂ ಬಿಚ್ಚಿಟ್ಟು ಕೌಪೀನಧಾರಿಯಾಗಿ ಸೌರಾಷ್ಟ್ರ ಸೋಮನಾಥಪುರದ ಕಡೆ ಹೊರಟ.
ಆ ಸೋಮೇಶ್ವರನ ಗುಡಿಯ ಗೋಪುರ ಕಣ್ಣಿಗೆ ಬಿಳುತ್ತಿದ್ದಂತೆಯೇ ಅವನ ಸಂಶಯ ಭಯ ಭ್ರಮೆಗಳೆಲ್ಲಾ ತತ್ತರಿಸಿ ಹೋಗಿ-ಅಂತಃಕರಣದಲ್ಲಿ ತಾನೇ ತಾನಾದೊಂದು ಭಾವ ಆವರಸಿತು.
ಆ ಗುಡಿಯ ಮುಂದೆ ಆ ಬಾಲಕನು ಗುಗ್ಗಳವನ್ನು ಧೂಪಹಾಕುವ, ಆ ಮೂಲಕ ಬಂದ ಭಕ್ತಾದಿಗಳಿಗೆ ಜನ್ಮಜರಾ ಮರಣಾತ್ಮಕವಾದ ದುರ್ವಾಸನೆಯನ್ನು ಸೀಟಿಕಳೆದು ಆತ್ಮನಿರಂಜನ ಪರಿಮಳವನ್ನು ಪೂಸುವ, ನೇಮದ ಕಾಯಕವನ್ನು ಕೈಕೊಂಡನು.
ಇಪ್ಪತ್ತೈದು ವರ್ಷಗಳ ದೀರ್ಘಾವಧಿ ನಡೆಯಿತು ಅವನ ಈ ನೇಮ. ಆ ಅವಧಿಯ ಕೊನೆಗೆ ಒಂದು ಅದ್ಭುತ ನಡೆಯಿತು. ಎಂದಿನ ಗುಗ್ಗುಳಕ್ಕೆ ಬದಲಾಗಿ –ತನ್ನ ದೇಹವನ್ನೇ ಗುಗ್ಗುಳ ಮಾಡಿ ಸೌರಾಷ್ಟ್ರ ಸೋಮನಾಥನ ಭವ್ಯದೇವಾಲಯದ ಮುಂದೆ ನಿಗಿನಿಗಿ ಉರಿಯುತ್ತಿದ್ದ ಅಗ್ನಿಕುಂಡಕ್ಕೆ ಧುಮ್ಮಿಕ್ಕಿದ ಓಹಿಲ.
ಹೊಮ್ಮಿದ ಹೊಗೆ ಒಮ್ಮೆಗೇ ಊರ್ಧ್ವಮುಖಿಯಾಗಿ –ಆದರೂ ಅಕ್ಕಪಕ್ಕವಾಗಿ ಎಲ್ಲೆಡೆಗೂ ಹಬ್ಬುತ್ತ ಗೆದ್ದೆಗೆದ್ದೆನೆಂಬಂತೆ -ಶೂನ್ಯದಲ್ಲಿ ತನ್ನ ಗಂಧವತೀರಸನೆಯಿಂದ –ಚಾಂಗು ಭಲಾ ಎಂದು ಸಾರುವಂತೆ ಅಚ್ಚ ಬಿಳಿಯ ಸುರುಳಿ ಸುರುಳಿಯಾಯಿತು. ಅದಕ್ಕಾಗಿ ಕಾಯುತ್ತಿದ್ದ ವ್ಯೋಮಕೇಶ ಶಿವನು ಅದನ್ನು ತನ್ನ ಜಟಾಜೂಟದಲ್ಲಿ ಧರಿಸಿದ -ಶಿವನು ಭಕ್ತವತ್ಸಲನಲ್ಲವೇ ?
ಹೀಗೆ ಶಿವೈಕ್ಯವಾದಾಗ ಓಹಿಲನಿಗೆ ನಲವತ್ತು ವರ್ಷ. ಕಾಮದ ಬೆಂಕಿ ಹೊತ್ತುವ ಹದಿನಾರರ ಹರೆಯದಿಂದ ಹಿಡಿದು –ಅದು ಧಗಧಗಿಸುವ ನಲವತ್ತರ ಪರ್ಯಂತರ –ಆ ಕಾಮದ ಬೆಂಕಿಗೆ ತರಗುಪುರಲೆಯನ್ನೆಲ್ಲ ಸುರಿದು ಉರಿಸದೆ-ತನ್ನನ್ನೇ ಶಿವಾಗ್ನಿಯಲ್ಲಿ ಬೇಳಿಕೊಂಡನು. ಇದು ಜೀವನು ಮೆರೆಯಬಲ್ಲ ಅತ್ಯುಚ್ಚ ಉರಿಲಿಂಗದ ಅದ್ಭುತಲೀಲೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು