•  
  •  
  •  
  •  
Index   ವಚನ - 685    Search  
 
ಮಾಹೇಶ್ವರನ ಜ್ಞಾನಿಸ್ಥಲ - ಲಿಂಗನಿಷ್ಥೆ
ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು: ಲಿಂಗವಂತರು ತಾವು ಅಂಜಲೇಕೆ, ಲಿಂಗವಿರಿಸಿದಂತಿಪ್ಪುದಲ್ಲದೆ- ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ!
Transliteration Liṅgavaśadinda banda naḍegaḷu, liṅgavaśadinda banda nuḍigaḷu: Liṅgavantaru tāvu an̄jalēke, liṅgavirisidantippudallade- kūḍalasaṅgamadēva bhaktarābhimāna tannadembanāgi!
Manuscript
English Translation 2 From being Liṅga 's captive came Your words and deeds. A Liṅgavanta should be As Liṅga makes him be; Wherefore, then, should he fear, When Lord Kūḍala Saṅgama Declares a bhakta's honour is His own? Translated by: L M A Menezes, S M Angadi
Hindi Translation लिंग-वश से आगत आचरण हैं, लिंग-वश से आगत वचन हैं, लिंगवंत भयाभीत क्यों हो? जैसे लिंग रखता है वैसे रहना है । कूडलसंगमदेव का कथन है, भक्तों का अभिमान मेरा है ॥ Translated by: Banakara K Gowdappa
Tamil Translation இலிங்கத்தால் ஏற்பட்ட இயல்புகள் இலிங்கத்தால் ஏற்பட்ட சொற்கோவைகள் இலிங்கம் தரித்தவர் எதற்கு அஞ்சவேண்டும்? இலிங்கம் இருத்திய வண்ணம் இருப்பரன்றி கூடல சங்கமதேவன் பக்தரின் அபிமானம் தன்னுடையதென இயம்புவானன்றோ. Translated by: Smt. Kalyani Venkataraman, Chennai
Marathi Translation लिंगवंशाने आलेले वागणे, लिंगवंशाने आलेले बोलणे, लिंगवंतांनी कशाला घाबरावे? लिंगदेव ठेवेल तसे राहिले पाहिजे. कूडलसंगमदेवाच्या हाती भक्ताचा अभिमान आहे. Translated by Shalini Sreeshaila Doddamani
ಶಬ್ದಾರ್ಥಗಳು ಅಂಜು = ಹೆದರಿಕೊಳ್ಳುವುದು; ಅಭಿಮಾನ = ಪ್ರೀತಿ, ಗೌರವ; ಇಪ್ಪು = ; ವಶ = ಕೈವಶ;
ಕನ್ನಡ ವ್ಯಾಖ್ಯಾನ ಶಿವನೆಂದಿಗೂ ತನ್ನ ಪರವಾಗಿ ಮಾತನಾಡುವ, ತನ್ನ ಆಜ್ಞಾನುಸಾರವಾಗಿ ಕೆಲಸಮಾಡುವ ಜೀವರನ್ನು ಬಿಟ್ಟುಕೊಡುವುದಿಲ್ಲವಾಗಿ –ಆ ಶಿವಭಕ್ತರು ತಮ್ಮ ಶಿವಾನಂದದಲ್ಲಿ ಸ್ಫುರಿಸಿದ್ದನ್ನು ಮಾತನಾಡಬೇಕು. ಅದೇ ಶಿವಾನಂದ. ಸ್ಫೂರ್ತಿಯಿಂದ ತಕ್ಕ ಕಾರ್ಯಗಳನ್ನು ಮಾಡಬೇಕು –ಅವರೆಂದಿಗೂ ಲೋಗರಿಗೆ ಅಂಜಬೇಕಾಗಿಲ್ಲ. ಶಿವಸಂಗವಿಲ್ಲದೆ ಅಂಗಕ್ಕೆ ಪಕ್ಷವುಂಟು, ಪಕ್ಷಪಾತವುಂಟು. ಇಂಥ ಅಂಗಧಾರಿಯಾದ ದುರ್ಬಲ ಜೀವನು ರಾಗದ್ವೇಷಗಳಿಂದ ಸದಾಕಾಲಕ್ಕೂ ಹಿಗ್ಗಾಮುಗ್ಗಾ ಎಳೆಯಲ್ಪಡುತ್ತಿರುವನು : ಈಗ ಪ್ರೀತಿಸಿದ್ದನ್ನು ಮರುಘಳಿಗೆಯಲ್ಲಿ ದ್ವೇಷಿಸುವನು-ಇದರ ತಿರುಗು ಮುರುಗೂ ಉಂಟು. ಅವನ ಪ್ರೀತಿಗಾಗಲಿ ದ್ವೇಷಕ್ಕಾಗಲಿ ತನ್ನ ಕ್ಷುದ್ರವಲ್ಲದೆ ಅನ್ಯವೇನೂ ಆಧಾರವಿರುವುದಿಲ್ಲ. ಆದುದರಿಂದಲೇ ಅವನಲ್ಲಿ ಈ ಕ್ಷಣಚಿತ್ತದ-ಕ್ಷಣಪಿತ್ತದ ಧೋರಣೆ. ಆದರೆ ಈ ಅಂಗಗುಣವನ್ನು ಯಾರು ಸಂಯಮಿಸಿ ತಾಮಸವನ್ನು ರಾಜಸಕ್ಕೂ, ರಾಜಸವನ್ನು ಸಾತ್ವಿಕಕ್ಕೂ ತಿರುಗಿಸಿ ಸಮಯೋಚಿತ ಸಪ್ರಮಾಣದಲ್ಲಿ ತೂಗಿಸಬಲ್ಲರೋ –ಅವರಿಗೆಲ್ಲಿರುವುದು ಪಕ್ಷಪಾತ? ಅಂಥವರು ಅಂಗಧಾರಿಯಾಗಿರುವುದರಿಂದ –ತಮ್ಮ ಸುತ್ತಲೂ ನಡೆಯುವುದನ್ನೆಲ್ಲ ರಾಗದ್ವೇಷ ರಹಿತವಾಗಿ ಸಮೀಕ್ಷಿಸುತ್ತ -ಹಾಗೆಂದು ಕೇವಲ ತಟಸ್ಥ ಸಾಕ್ಷಿಯಾಗಿರದೆ -ನ್ಯಾಯದ ಕಡೆ ಸಕ್ರಿಯವಾಗಿ ಎರಗುವರು. ಅಂಥವರು ತಮ್ಮ ನಡೆನುಡಿ ಸತ್ಯಶುದ್ಧವಾಗಿರುವುದರಿಂದ -ಫಲಿತಾಂಶಗಳ ಬಗ್ಗೆ ಎದೆಗೆಡುವುದಿಲ್ಲ -ಬದಲಾಗಿ ಪರಿಸ್ಥಿತಿಗಳನ್ನು ನ್ಯೂನಾತಿರೇಕವಿಲ್ಲದೆ ಎದುರಿಸಲು ಬದ್ಧರೂ ಪ್ರಬುದ್ಧರೂ ಆಗಿರುವರು. ಈ ಆಶಯವೇ ಬಸವಣ್ಣನವರ ಭಕ್ತಿಭಾಷೆಯಲ್ಲಿ –“ಲಿಂಗವಂತರು ಅಂಜಲದೇಕೆ ಲಿಂಗವಿರಿಸಿದಂತಿಪ್ಪುದಲ್ಲದೆ –ಕೂಡಲ ಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ”? –ಎಂದು ಉಕ್ತಿಗೊಂಡಿದೆ. ಯಾರಾದರೂ ಭಕ್ತರ ವಿರುದ್ಧವಾಗಿ ನಿಂತರೆ –ಅದಾಗುವುದು ಶಿವನಿಗೇ ಷಡ್ಡು ಹೊಡೆದಂತೆ –ಮಣ್ಣಾಟಕ್ಕಿಳಿದ ತನ್ನ ಮಗುವನ್ನು ಶಿವನು ಆಕಾಶವೇ ಕಣ್ಣಾಗಿ ನೋಡಿಕೊಳ್ಳುತ್ತಲೇ ಇರುವನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು