•  
  •  
  •  
  •  
Index   ವಚನ - 686    Search  
 
ಮಾಹೇಶ್ವರನ ಜ್ಞಾನಿಸ್ಥಲ - ಭಕ್ತ
ಶಿವಭಕ್ತನಾಗಿ ತನ್ನ ಹಿಡಿದಿಹೆನೆಂದು ಹೋದರೆ ನುಗ್ಗು ಮಾಡುವ, ನುಸಿಯ ಮಾಡುವ, ಮಣ್ಣ ಮಾಡುವ, ಮಸಿಯ ಮಾಡುವ: ಕೂಡಲಸಂಗಮದೇವರ ನೆರೆ ನಂಬಿದನಾದರೆ ಕಡೆಗೆ ತನ್ನಂತೆ ಮಾಡುವ.
Transliteration Śivabhaktanāgi tanna hiḍidahenendu hōdare nuggu māḍuva, nusiya māḍuva, maṇṇa māḍuva, masiya māḍuva: Kūḍalasaṅgamadēvara nere nambidanādare kaḍege tannante māḍuva.
Manuscript
English Translation 2 If, as a devotee Of Śiva, you should try to catch Him, He will reduce you To crumbs, to powder, to dust, to soot; But then if you believe In Lord Kūḍala Saṅgama with all your heart, He'll make you as Himself at last! Translated by: L M A Menezes, S M Angadi
Hindi Translation शिवभक्त के नाते उन्हें पकडने जाओ, तो तुम्हारे टुकडे-टुकडे करेंगे, चूर्ण करेंगे; धूलि बनायेंगे, काजल बनायेंगे कूडलसंगमदेव पर संपूर्ण विश्वास रखो, तो अंत में स्वसमान बनायेंगे ॥ Translated by: Banakara K Gowdappa
Telugu Translation శివభక్తుడై తన్ను పట్టబోవ మన్ను చేయు, మసి చేయు; నుగ్గుచేయు, సుసిచేయు నా సంగయ్యనే నెఱనమ్మినచో కడకు తనయంతవానిని చేయునయ్యా! Translated by: Dr. Badala Ramaiah
Tamil Translation சிவபக்தனாக தன்னைத் தரித்தவன் எனின் பொடிப்பான், கரியாக்குவான் மண்ணாக்குவான், கரியாக்குவான் கூடல சங்கமதேவனை முற்றிலும் நயந்தானெனின் இறுதியில் தன்னைப் போலச் செய்து விடுவான் Translated by: Smt. Kalyani Venkataraman, Chennai
Marathi Translation शिवभक्त, साक्षात्कारी, म्हणविती हो जे कोणी तैसा दांभीकाची वाणी ऐकवेन देवा दंडितो तयासि देवा, मिळवितो मातीत माती जाळी दांभिकाची कुमती, खचित संगमदेव कूडलसंगमदेवावरती, पूर्ण भाव जे ठेवितो श्रद्धायुक्त विश्वासिती, आपुलकी तयाशी अर्थ – दांभिक लोक स्वत:ला व परमेश्वराला पूर्णपणे न ओळखल्यामुळे लोकेशनार्थ स्वतःस शिवभक्त म्हणून घेतात व मला देव दिसला, मी देव पाहिला, मला साक्षात्कार घडला असे म्हणतात. हा शुद्ध दांभिकपणा होय अशांना माझा कूडलसंगमदेव (परशिव) कडक शासन करील व त्याला मातीत मिळविल. आणि जे त्यांच्यावर पूर्णपणे विश्वास करतील व सहजभावे वागतील त्याच्यावर प्रसन्न होऊन त्याला तो निश्चित आपलेसे करील. Translated by Rajendra Jirobe, Published by V B Patil, Hirabaug, Chembur, Mumbai, 1983 शिवभक्त म्हणून मला शिवाने आपलेसे केले पाहिजे म्हणता तुकडे करील, चूर-चूर करील, मातीत मिसळतील, कूडलसंगमदेवावर विश्वास ठेवला तर शेवटी आपल्यासम बनवितील. Translated by Shalini Sreeshaila Doddamani
ಶಬ್ದಾರ್ಥಗಳು ನುಗ್ಗು = ; ನುಸಿ = ; ನೆರೆ = ಸೇರು; ಮಸಿ = ;
ಕನ್ನಡ ವ್ಯಾಖ್ಯಾನ (ಲಿಂಗಕಟ್ಟಿ) ಶಿವಭಕ್ತನಾಗಿಯೂ ಶಿವನನ್ನು ಹಿಡಿಯುವುದು ಸುಲಭವಲ್ಲ-ಶಿವನು ಅವನನ್ನು ಪರೀಕ್ಷಿಸಿದೆ ಸ್ವೀಕರಿಸುವುದಿಲ್ಲ. ಮೊದಮೊದಲಲ್ಲಿ ಭಕ್ತನಿಗೆ ಶಿವನು ನಾನಾವಿಧವಾದ ಕಷ್ಟಗಳನ್ನು ಕೊಟ್ಟು ಪರೀಕ್ಷೆಗೆ ಒಳಪಡಿಸುವನು. ಎಂಬುದನ್ನೇ ಬಸವಣ್ಣನವರು-“ನುಗ್ಗು ಮಾಡುವ, ನುಸಿಯ ಮಾಡುವ ; ಮಣ್ಣ ಮಾಡುವ ಮಸಿಯ ಮಾಡುವ” ಎಂದಿರುವರು. ಅಂದರೆ -ನಾವು ದೈಹಿಕವಾಗಿ ಜರ್ಝರಿತರಾಗಬಹುದು, ಮಾನಸಿಕವಾಗಿ ನಿಸ್ತೇಜಗೊಳ್ಳಬಹುದು –ಮತ್ತೆಯೂ ನಾವು ಶಿವನಲ್ಲಿಟ್ಟಿರುವ ನಂಬಿಕೆಯನ್ನು ಮಾತ್ರ ಸದೃಢವಾಗಿ ರಕ್ಷಿಸಿಕೊಂಡಿದ್ದರೆ –ಕಡೆಗೆ ನಮಗೆ ಆ ಶಿವನು ಸುಪ್ರಸನ್ನನಾಗಿಯೇ ತೀರುವನೆನ್ನುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು