•  
  •  
  •  
  •  
Index   ವಚನ - 687    Search  
 
ಮಾಹೇಶ್ವರನ ಜ್ಞಾನಿಸ್ಥಲ - ಭಕ್ತಿಮಾರ್ಗ
ಅರೆವನಯ್ಯಾ ಸಣ್ಣವಹನ್ನಕ್ಕ, ಒರೆವನಯ್ಯಾ ಬಣ್ಣಗಾಣ್ಬನಕ್ಕ. ಅರೆದರೆ ಸಣ್ಣವಾಗಿ, ಒರೆದರೆ ಬಣ್ಣವಾದರೆ ಕೂಡಲಸಂಗಮದೇವನೊಲಿದು ಸಲಹುವನು.
Transliteration Arevanayyā saṇṇavahannakka, orevanayyā baṇṇagāṇbanakka. Aredare saṇṇavāgi, oredare baṇṇavādare kūḍalasaṅgamadēvanolidu salahuvanu.
Manuscript
English Translation 2 He'll grind till you're fine and small. He'll file till your colour shows. If your grain grows fine in the grinding, if you show colour. in the filing, then our lord of the meeting rivers will love you and look after you.

Translated by: A K Ramanujan
Book Name: Speaking Of Siva
Publisher: Penguin Books
----------------------------------
He'll crush you into tiny shape; He'll rub you till the gold-hue shows: If you, on grinding, become small, If you, on rubbing, become gold, Lord Kūḍala Saṅgama Will hide you in His heart of love! Translated by: L M A Menezes, S M Angadi

Hindi Translation पीसेंगे चूर्ण होने तक, कसेंगे रंग दीखने तक, पीसने से क्षीण होकर कसने से स्वर्ण हो, तो कूडलसंगमदेव प्रसन्न होकर पालेंगे ॥ Translated by: Banakara K Gowdappa
Tamil Translation நுண்மையாகும் வரையில் அரைப்பான் ஐயனே வண்ணம் வரும்வரை உரைப்பான் ஐயனே. நுண்மையாக அரைபடின் உரைத்து வண்ணம் தென்படின் கூடல சங்கமதேவன் அன்புடன் அருள்வான் ஐயனே Translated by: Smt. Kalyani Venkataraman, Chennai
Marathi Translation घासून घेतो बारीक चूर होईपर्यंत, पिसून घेतो रंग येईपर्यंत, घासून चूर झाल्यावर, पिसून रंग आल्यावर कूडलसंगमदेव प्रसन्न होऊन रक्षण करील. Translated by Shalini Sreeshaila Doddamani
ಶಬ್ದಾರ್ಥಗಳು ಅರೆ = ; ಒರೆ = ಹೇಳು; ಗಾಬನ = ; ಸಲಹು = ಕಾಪಾಡು;
ಕನ್ನಡ ವ್ಯಾಖ್ಯಾನ ಚಿತ್ರಕಾರನು ಗೈರಿಕಾದಿ ಧಾತುಗಳನ್ನು ತಂದು ಪುಡಿಮಾಡಿ ಬಳಿದು ಚಿತ್ರವನ್ನು ನಿರ್ಮಿಸುವ ಒಂದು ಪ್ರತಿಮೆಯನ್ನು ಈ ವಚನದಲ್ಲಿ ಬಳಸಿಕೊಳ್ಳಲಾಗಿದೆ. ಮೇಲೆ ಹೇಳಿರುವ ಧಾತುಗಳು ಪ್ರಕೃತಿ ರೂಪದಲ್ಲಿ ಬಳಿಯಲು ಬರುವುದಿಲ್ಲ. ಅವನ್ನು ಒಡೆದು ಚಚ್ಚಿ ಕುಟ್ಟಿ ನುಣ್ಣಗೆ ಮಾಡಿಕೊಳ್ಳಬೇಕು –ಆಮೇಲೆ ಅವು ಚಿತ್ರಕಾರನ ಲೇಪನ ಕಾರ್ಯಕ್ಕೆ ಒದಗುತ್ತವೆ. ಹಾಗೆಯೇ ಶಿವನೊಬ್ಬ ಚಿತ್ರಕಾರನಾದರೆ –ಅವನು ತನ್ನ ಲೀಲೆಯ ಅಭಿವ್ಯಕ್ತಿಗೆ ಅನುವಾಗುವಂತೆ ಶಿವಭಕ್ತರನ್ನು ಕಠಿಣವೆನ್ನಬಹುದಾದ ರೀತಿಗಳಲ್ಲಿ ಶಿಕ್ಷಿಸಿ ಪರಿಷ್ಕರಿಸಿಕೊಳ್ಳುವನು. ಅವರ ಮೂಲಕ ಹಲವು ಆದರ್ಶಗಳನ್ನು ಸ್ಥಾಪಿಸಿ -ತನ್ನ ಲೀಲೆಯನ್ನು ಪೂರೈಸುವನು. ಈ ಉದ್ದೇಶಕ್ಕೆ ಒಗ್ಗಿಬರುವ ಜೀವರನ್ನು ಮಾತ್ರ ಶಿವನು ರಕ್ಷಿಸಿಟ್ಟುಕೊಳ್ಳುವನು –ಉಳಿದವರನ್ನು ಜನ್ಮಜರಾಮರಣ ಚಕ್ರಕ್ಕೆ ಬಿಸಾಡುವನು. ಒಬ್ಬ ಚಿತ್ರಕಾರನಾದರೂ –ತನ್ನ ಕಲ್ಪನೆಗೆ ಮೈಗೊಡುವ ಒಳ್ಳೆಯ ಬಣ್ಣಗಳನ್ನು ಜೋಪಾನಮಾಡುವನು –ಉಳಿದುವನ್ನು ಕಸದ ಬುಟ್ಟಿಗೆ ಎಸೆಯುವನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು