ಮಾಹೇಶ್ವರನ ಜ್ಞಾನಿಸ್ಥಲ - ಆತ್ಮಶುದ್ಧಿ
ಅಂಜಿದರಾಗದು, ಅಳುಕಿದರಾಗದು,ವಜ್ರ ಪಂಜರದೊಳಗಿದ್ದರಾಗದು:
ತಪ್ಪದುವೋ ಲಲಾಟಲಿಖಿತ!
ಕಕ್ಕುಲತೆಗೆ ಬಂದರೆ ಆಗದು ನೋಡಾ!
ಧೃತಿಗೆಟ್ಟು, ಮನ ಧಾತುಗೆಟ್ಟರೆ ಅಪ್ಪುದು ತಪ್ಪದು,
ಕೂಡಲಸಂಗಮದೇವಾ.
Transliteration An̄jidarāgadu, aḷukidarāgadu,vajrapan̄jaradoḷagiddarāgadu:
Tappaduvō lalāṭalikhita!
Kakkulatege bandare āgadu nōḍā!
Dhr̥tigeṭṭu, mana dhātugeṭṭare appudu tappadu,
kūḍalasaṅgamadēvā.
Manuscript
English Translation 2 It will not do to fear and tremble
It will not do to be
Within an adamantine cage:
You can't escape
Whatever is written on your brow!
It will not do if you vainly desire
Though you lose courage when your heart grows faint,
What is to be cannot but be,
O Kūḍala Saṅgama Lord!
Translated by: L M A Menezes, S M Angadi
Hindi Translation डरने से नहीं बनता, भय खाने से नहीं बनता,
वज्र-पंजर में रहने से नहीं बनता।
नहीं टलता ललाट-लेख।
देखो, व्याकुल होने से नहीं बनता ।
धृतिहीन होने से, मन धातुशून्य होने से
जो होना हो, मिट नहीं सकता, कूडलसंगमदेव ॥
Translated by: Banakara K Gowdappa
Telugu Translation అదిరినతప్పదు అలిగిన పోదు వజ్రవంజరమున
దాగినా వదలదు తప్పదుతప్పదురా తలరాత !
కక్కూర్తి పడినా కలతపడినా ధృతిచెడినా విఱిగినా
రానున్నది రాకతప్పదురా! కూడల సంగమదేవా!
Translated by: Dr. Badala Ramaiah
Tamil Translation அஞ்சினால் ஆகாது, நடுங்கினால் ஆகாது
வைரக்கூட்டிலிடினும் ஆகாது, தலை எழுத்து தப்புமோ?
கவலை ஏற்படினும் ஆகாது காணாய்
உறுதி கெட்டு, மனம், தாது கெடின்
வருவது தப்புமோ கூடல சங்கமதேவனே.
Translated by: Smt. Kalyani Venkataraman, Chennai
Marathi Translation
घाबरले तरी सोडत नाही, सलले तरी सोडत नाही.
वज्राच्या पिंजऱ्यात राहिला तरी सोडत नाही ललाट लिखीत.
घाबरून विधी लिखित चूकत नाही पहा.
विचलीत झाल्याने नाही चूकणार, जे व्हायचे ते होणार
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಂಜು = ಹೆದರಿಕೊಳ್ಳುವುದು; ಅಪ್ಪದು = ಹೌದು; ಅಳುಕಿ = ಅಂಜು; ಕಕ್ಕುಲತೆ = ಪ್ರೀತಿ; ಧಾತು = ; ಧೃತಿ = ಧೈರ್ಯ; ಪಂಜರ = ; ಲಲಾಟ = ಹಣೆ; ಲಿಖಿತ = ಬರಹ;
ಕನ್ನಡ ವ್ಯಾಖ್ಯಾನ ವಿಧಿವಾದವನ್ನೇ ಕುರಿ(ತಂ)ತಿರುವುದಾದರೂ ಅತ್ಯಂತ ರಸ್ಯವಾದ ಚಾಟುವಚನವಿದು. ಇದರ ಪ್ರಾಸ ಮರುಪ್ರಾಸಗಳು “ವಿಧಿ”ಯ ಅನಿವಾರ್ಯತೆಯನ್ನು ಒತ್ತಿ ಹೇಳುವ ಉಕ್ತಿಗಳಿಗೆ ಮೇಲೆ ಮೇಲೆ ಶ್ರುತಿಗೂಡಿಸುತ್ತವೆ.
ಈ ವಚನ ಬಸವಣ್ಣನವರ ವಚನಗಳಲ್ಲೆಲ್ಲಾ ಅತ್ಯಂತ ಲೌಕಿಕವಾದುದು, ಮತ್ತು ಇದು ಅವರ ಪುರುಷಕಾರ ಪ್ರವೃತ್ತಿಗೆ ವ್ಯತಿರಿಕ್ತವಾದುದೆಂದು ಮೇಲ್ನೋಟಕ್ಕೆ ಕಂಡರೂ-ಭವಿತವ್ಯವನ್ನು ಪೌರುಷದಿಂದಲೇ ಎದುರಿಸಬೇಕೆಂಬಲ್ಲಿ – ಆ ಧೀರ ಬಸವಣ್ಣನವರ ಛಾಪು ನಿಚ್ಚಳವಾಗಿಯೇ ಅಚ್ಚೊತ್ತಿದೆ.
ಯಾವುದು ಆಗಿಯೇ ತೀರುವುದೋ ಅದನ್ನು ಮಾರ್ತಾಗಿಯೇ ಇದುರಿಸಬೇಕು – ಆಗತಾನೇ ಆಗಲಿರುವ ಅನಾಹುತವು ಕನಿಷ್ಠಾಂಶಕ್ಕೆ ಇಳಿಯುತ್ತದೆ –ಮತ್ತು ಜೀವಿಸುವ ಮಣಿಹವನ್ನು ಹೊತ್ತು ಬಂದ ಜೀವಕ್ಕೊಂದು ಬೆನ್ನೆಲುವನ್ನು ಪಡೆದಂತಾಗುತ್ತದೆ. ಅದಿಲ್ಲದೆ ಅಂಜುತ್ತ ಅಳುಕುತ್ತ ನಿಷ್ಕ್ರಿಯವಾದರೆ ನಿಟ್ಟುಸಿರಿಟ್ಟರೆ ವಿಧಿ ದುರ್ವಿಧಿಯಾಗಿ ಮೇಲೆ ಬಿದ್ದು ಮುಖದ ಮೇಲೆ ಉಗಿಯುತ್ತದೆ -ಬಿಡುವುದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು