•  
  •  
  •  
  •  
Index   ವಚನ - 689    Search  
 
ಮಾಹೇಶ್ವರನ ಜ್ಞಾನಿಸ್ಥಲ - ಕಾಯಕ
ಹುಟ್ಟಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸಿಹೆನೆಂದರೆ ತಪ್ಪದು ನೋಡಯ್ಯಾ. ʼಎನಗಿನ್ನೆಂತೊ, ಎನಗಿನ್ನೆಂತೊ, ಎನಗಿನ್ನೆಂತೋʼ ಎಂದೆನಬೇಡ. "ನಾಭೋಕ್ತಾ ಕ್ರಿಯತೇ ಕರ್ಮ" ಎಂಬ ಶ್ರುತಿ ತಪ್ಪದು, ಕೂಡಲಸಂಗಮದೇವಾ.
Transliteration Huṭṭida baḷika koṭṭa bhōgaṅgaḷa tappisihenendare tappadu nōḍayya. ʼenaginnentō, enaginnentō, enaginnentōʼ endenabēḍa. "Nābhōktā kṣiyatē karma" emba śruti tappadu, kūḍalasaṅgamadēvā.
Manuscript
English Translation 2 Look you, it is futility to hope You can escape your destined lot Once you are born: so do not say 'How then for me, how then, how then?' O Kūḍala Saṅgama Lord, One can't escape the text that says, 'Do not do aught Whose fruit you can't enjoy.' Translated by: L M A Menezes, S M Angadi
Hindi Translation जन्म लेने के पश्चात् प्राप्त भोगों से मुक्त होना चाहो, तो नहीं हो सकता । मत कहो, आगे मेरा क्या होगा? आगे मेरा क्या होगा? आगे मेरा क्या होगा? ‘न भुक्तं क्षीयते कर्म’ यह श्रुति वचन टल नहीं सकता, कूडलसंगमदेव॥ Translated by: Banakara K Gowdappa
Telugu Translation పుట్టిన వెనుక పెట్టిన భోగములు వలదనినా వదలవు ఎటులో యికనా కెటులో యని విలపింపకురా; ‘‘నా భోక్తా క్రియతే కర్మా’’ యను శ్రుతి తప్పదు తప్పదురా కూడల సంగమదేవా! Translated by: Dr. Badala Ramaiah
Tamil Translation பிறந்த பிறகு, அளித்த இன்ப துன்பத்தை மறுப்பின் தப்பாது காணாய் என் கதி என்ன? என் கதி என்ன என் கதி என்ன எனக் கூறாதீர் “நா புக்தம் க்ஷீயதே கர்ம” என்னும் சுருதியானது தவறுமோ கூடல சங்கமதேவனே. Translated by: Smt. Kalyani Venkataraman, Chennai
Marathi Translation जन्मा आलियाने, भोग भोगावे कैसे ते टाळावे, कर्म भोग कैसे ते भोगू, कोठवरी भोगावे ऐसे न म्हणावे, शिवशरणाने “ना मुक्तं क्षियते कर्म "" कर्माचा तो क्षय, नाही भोगाविण श्रुतिचे वचन सत्य होय कूडलसंगमदेवा ! अटळ कर्म भोग कैसे ऐक्य योग, तयाविण अर्थ - पूर्व कर्मयोग भोगल्याविण भक्तास सदगती प्राप्त होत नसते. भक्ताने त्यास भिऊन चालत नसते माझे कर्मयोग कुठवर व कसे असे म्हणणे हीच कायरता होय. वरील श्रुति वचनही यासच दुजारा देणारे आहेत. हे कूडलसंगमदेवा ! (परशिवा) कर्म भोग संपल्याविण ऐक्याचा योग प्राप्त होत नसतो. म्हणून त्याकडे लक्ष न देता जगावे. Translated by Rajendra Jirobe, Published by V B Patil, Hirabaug, Chembur, Mumbai, 1983 जन्म घेतल्यावर आलेले भोग चुकविता येत नाहीत. ते भोगलेच पाहिजे. कसे भोगू? किती भोगू ? कुठेपर्यंत भोगू? असे म्हणू नको देवा. कूडलसंगमदेवा, `ना मुक्त क्षीयते कर्म` ही श्रुती असत्य होत नाही. Translated by Shalini Sreeshaila Doddamani
ಶಬ್ದಾರ್ಥಗಳು ಕರ್ಮ = ಕೆಲಸ; ಕ್ಷೀಯ = ; ನಾಭುಕ್ತಿ = ; ಭೋಗ = ಆಸೆ; ಶ್ರುತಿ = ವೇದ;
ಕನ್ನಡ ವ್ಯಾಖ್ಯಾನ ಅರ್ಜುನನು ಕುರುಕ್ಷೇತ್ರದಲ್ಲಿ ಕರ್ಣನನ್ನು ಎದುರಿಸಿ ಮೂದಲಿಸುತ್ತಾನೆ. ಆ ವೇಳೆಗಾಗಲೇ ಕರ್ಣನ ಮಗ ವೃಷಷೇಣ ಯುದ್ಧದಲ್ಲಿ ಮಡಿದಿರುತ್ತಾನೆ. ಆ ವಿಷಾದಪೂರ್ಣ ಹಿನ್ನೆಲೆಯಲ್ಲಿ ಕರ್ಣನು ಹೇಳುವ ಮಾತು-ಬಸವಣ್ಣನವರ ಈ ವಚನವನ್ನು ಬಹ್ವಂಶ ಹೋಲುತ್ತದೆ : “ಬಿದಿವಸದಿಂದೆ ಪುಟ್ಟುವುದು, ಪುಟ್ಟಿಸುವಂ ಬಿದಿ, ಪುಟ್ಟಿದಂದಿವಂ | ಗಿದು ಬಿಯಮೊಳ್ಪಿ(ಳ್ಪು, ಇ)ವಂಗಿದು ವಿನೋದಮಿ(ಮ್,ಇ)ವಂಗಿದು ಸಾವ ಪಾಂಗಿ(ಗು, ಇ)ವಂ| ಗಿದು ಪಡೆಮಾತಿ(ತು, ಇ)ವಂಗಿದು ಪರಾಕ್ರಮವೆಂಬುದನೆಲ್ಲ ಮಾಳ್ಕೆಯಿಂ | ಬಿದಿ ಸಮಕಟ್ಟಿ ಕೊಟ್ಟೊಡೆಡೆಯೊಳ್ ಕಿಡಿಸಲ್ ಕುಡಿಸಲ್ ಸಮರ್ಥರಾರ್” (ಪಂಪಭಾರತ 12-182). ಹುಟ್ಟುವುದು ವಿಧಿಯ ಅನುಸಾರವೆ, ಹುಟ್ಟಿಸುವವನೂ ಆ ವಿಧಿಯೇ. ಒಬ್ಬನು ಹುಟ್ಟಿದಾಗ –ಅವನಿಗಿದು ಜೀವನಾಂಶ, ಅವನಿಗಿದು ಸುಖಸಂತೋಷ, ಈ ರೀತಿ ಅವನು ಸಾಯುವುದು ಎಂಬುದನ್ನೆಲ್ಲ –ಅವನು ಹುಟ್ಟುವ ಮೊದಲೇ ಆ ವಿಧಿ ಕಟ್ಟಳೆ ಮಾಡಿರುತ್ತಾನೆ, ಅಂದ ಮೇಲೆ –ಯಾವನ ಜೀವಿತದಲ್ಲಿಯಾಗಲಿ ಯಾವನೂ ಏನನ್ನೂ ಮಧ್ಯಂತರದಲ್ಲಿ ತಪ್ಪಿಸಲೂ ಸಾಧ್ಯವಿಲ್ಲ, ಒದಗಿಸಲೂ ಸಾಧ್ಯವಿಲ್ಲ” – ಇದು ಮೇಲೆ ಉಲ್ಲೇಖಿಸಿರುವ ಪಂಪನ ಪದ್ಯದ ತಿರುಳು. ಬಸವಣ್ಣನವರಾದರೂ ಹೇಳುತ್ತಿರುವುದು ಇದನ್ನೇ –ಈ ಜನ್ಮಕ್ಕೆ ಪಡೆದು ಬಂದುದನ್ನು ಪರಿಹರಿಸುವೆನೆಂದರೆ ಪರಿಹಾರವಾಗುವುದಿಲ್ಲವಾಗಿ -ನನಗಿನ್ನೇನು ಗತಿಯೆಂದು ಗೊಣಗುತ್ತ ವಿಕ್ಷಿಪ್ತವಾಗುವುದು ತರವಲ್ಲ. ದುರ್ವಿಧಿಯ ಎದುರಲ್ಲೂ ಆತ್ಮ ತನ್ನ ಘನತೆಯನ್ನು ಉಳಿಸಿಕೊಳ್ಳುವುದು ಹೀಗೆ ! ಪಡೆದು ಬಂದದ್ದೆಂದರೆ –ಅದು ತಾನು ಮಾಡಿದ ಕರ್ಮಕ್ಕೆ ಅನುಗುಣವಾಗಿಯೇ ಇರುವುದು. ಆದ್ದರಿಂದಲೇ ತನ್ನ ಪಾಲಿನ ಸಂಸಾರವೆಲ್ಲಕ್ಕೂ ಮೂಲವಾದ ಈ ಕರ್ಮವನ್ನು ಮಾನವನು ಎದೆಗೆಡದೆ ಸವಾಲೆಸದು ಕರೆದು ಹುಣ್ಣಿಗೆ ಹುಣ್ಣು ತಾಕಿ ನೀಸಬೇಕು. ಹಾಗಲ್ಲದೆ ಮಾಡಿದ ಕರ್ಮ ಸವೆಯದು. ಮಾಡಿದ್ದುಣ್ಣೋ ಮಾರಾಯ ಎಂಬ ಜಾನಪದ ವೇದವಾಕ್ಯ ಸುಳ್ಳಾಗುವುದೇ ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು