•  
  •  
  •  
  •  
Index   ವಚನ - 690    Search  
 
ಮಾಹೇಶ್ವರನ ಜ್ಞಾನಿಸ್ಥಲ - ನಿರ್ಭೀತಿ
ಆಯುಷ್ಯ ತೀರಿದಲ್ಲದೆ ಮರಣವಿಲ್ಲ: ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ. ಅಂಜಲದೇಕೊ ಲೋಕ ವಿಗುರ್ಭಣೆಗೆ, ಅಂಜಲದೇಕೊ, ಕೂಡಲಸಂಗಮದೇವಾ ನಿಮ್ಮಾಳಾಗಿ?
Transliteration Āyuṣya tīridallade maraṇavilla: Tappidallade dāridryavilla bhāṣe. An̄jaladēko lōka vigurbhaṇege, an̄jaladēko, kūḍalasaṅgamadēvā nim'māḷāgi?
Manuscript
English Translation 2 There is no death unless your life Comes to an end: no poverty Unless your pledge is broken... Why should I fear the public slander, Why fear, O Lord Kūḍala Saṅgama, Being Thy servant-man? Translated by: L M A Menezes, S M Angadi
Hindi Translation आयु समाप्त हुए बिना मृत्यु नहीं, वचन-भ्रष्ट हुए बिना दारिद्र्य नहीं, लोक की भीषणता से क्यों डरते हो? हे कूडलसंगमदेव, तव भ्रुत्य होकर क्यों भयभीत होऊँ ॥ Translated by: Banakara K Gowdappa
Telugu Translation ఆయువు తీఱకే మరణము లేదు; మాట తప్పకే లేమిరాదు; భయ’మేటికయ్యా లోకనిందకు? నీ భటుడై మతి భయపడనేటికో ప్రభూ! Translated by: Dr. Badala Ramaiah
Tamil Translation ஆயுள் முடிந்தாலன்றி மரணம் இல்லை சபதம் தவறினாலன்றி வறுமையில்லை உலகினரீயும் தொல்லைகளுக்கு அஞ்சுவது ஏன்? கூடல சங்கமதேவன் உன்னிடம் உறையும்பொழுது எதற்கு அஞ்சவேண்டும் ஐயனே. Translated by: Smt. Kalyani Venkataraman, Chennai
Marathi Translation आयु असे तव तो, मृत्यू येत नाही मिथ्या वाणी येई, दारिद्रय ते कूडलसंगमदेवा !! सेवका न भीती निंदा कायसी ती, शिवभक्ता अर्थ:- आयुष्य असेपर्यंत जसा मृत्यु येवू शकत नाही अगदी त्याचप्रमाणे वचन भंग झाल्याशिवाय दारिद्र्य येऊच शकत नाही. म्हणून शिवशरण निर्भय असतात आणि लोकनिंदेस, लोक अपवादास भीक घालीत नसतात म्हणून तर ते वीरशैव म्हणवितात. Translated by Rajendra Jirobe, Published by V B Patil, Hirabaug, Chembur, Mumbai, 1983 आयुष्य सरल्याशिवाय मृत्यू नाही. वचनभंग झाल्याविना दारिद्र्य नाही. घाबरायचे का लोकनिंदेला? घाबरु कशाला कूडलसंगाचा सेवक झाल्यावर. Translated by Shalini Sreeshaila Doddamani
ಶಬ್ದಾರ್ಥಗಳು ಅಂಜು = ಹೆದರು; ಆಯುಷ್ಯ = ಹಣೆಬರಹ; ದಾರಿದ್ರ್ಯ = ಬಡೆತನ; ಭಾಷೆ = ನುಡಿ, ಸೊಲ್ಲು, ವಚನ; ವಿಗರ್ಭ = ;
ಕನ್ನಡ ವ್ಯಾಖ್ಯಾನ ಸಾವು ಬಂದರೆ ದೇವರು ಕೊಟ್ಟ ಆಯುಷ್ಯ ತೀರಿತೆನ್ನಬೇಕು. ಹಾಗೆಯೇ ಬಡತನ ಬಂದರೆ ದೇವರು ಕೊಟ್ಟ ವರ ಮುಗಿಯಿತೆನ್ನಬೇಕು. ಆ ರೀತಿ ಅಲಕ್ನಿರಂಜನವಾಗಿರಬೇಕಲ್ಲದೆ-ಶಿವನಿಗೆ ದಾಸನಾದ ಮೇಲೆ ಈ ಯಾವುದಕ್ಕೂ ಹೆದರುವುದು ಶೋಭೆಯಲ್ಲ, ಹೇಡಿಗಳು ವೀರರನ್ನು ಕುರಿತು ಹಗುರವಾಗಿ ಆಡಿಕೊಳ್ಳುವಂತೆ-ಕೃಪಣರು ದಾಸೋಹದಾನಿಗಳನ್ನು ಕುರಿತು-“ತಿರುಪೆಯವರಿಗೆಲ್ಲ ತಿನಿಸಿ ತಾನೇ ತಿನಲಿಲ್ಲದ ತಿರುಪೆಯಾದ”ನೆಂದು ಮುಂತಾಗಿ ಜರಿಯಬಹುದು. ಅದಕ್ಕೇಕೆ ಹೆದರಬೇಕು ? ನಾವು ದೆವ್ವದ ಭಕ್ತರಲ್ಲ –ಕೂಡಲ ಸಂಗಮದೇವರ ಸದ್ಭಕ್ತರು ಎಂದು ನೆನಪು ಮಾಡಿಕೊಂಡು -ನೀಡಿ ಬಡವರಾದ ದಾಸೋಹಿಗಳನ್ನು ಹುರಿದುಂಬಿಸುತ್ತಿರುವರು ಬಸವಣ್ಣನವರು. “ಶರಣರಿಗೆ ಮಾಡಿ ಮಾಡಿ ಧನ ಸವೆದು ಬಡವಾದರೆ ಆ ಭಕ್ತನು ಆ ಲಿಂಗಕ್ಕೆ ಪೂಜೆಯಹನು” (ನೋಡಿ ವಚನ 151)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು