ಮಾಹೇಶ್ವರನ ಜ್ಞಾನಿಸ್ಥಲ - ನಿರ್ಭೀತಿ
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆಯೊಂದಾಗಿರದ
ನಚ್ಚು ಮಚ್ಚು ಪಾರವೈದುವುದೆ?
ಶಿರ ಹರಿದರೇನು, ಕರುಳು ಕುಪ್ಪಳಿಸಿದರೇನು?
ಇಂತಪ್ಪ ಸಮಸ್ತವಸ್ತುವೆಲ್ಲವೂ ಹೋದರೇನು?
ಚಿತ್ತ ಮನ ಬುದ್ಧಿ ಒಂದಾದ ಮಚ್ಚು, ಬಿಚ್ಚಿ ಬೇರಾಗದಿದ್ದರೆ
ಮೆಚ್ಚುವ ನಮ್ಮ ಕೂಡಲಸಂಗಮದೇವ.
Transliteration Manakke mana ondāgi, dhanakke dhana ondāgi
naccida maccu accottidantirabēku.
Prāṇakke prāṇa ondāgi, śubhasūcaneyondāgirada
naccu maccu paravaidude?
Śira haridārenu, karuḍu kuppaḷisidarenu?
Intappa samastavastuvellavū hōdarēnu?
Siṭṭa mana bud'dhi ondāda maccu, bisi bēragiddāre
meccuva nam'ma kuḍalasaṅgamadava.
Manuscript
English Translation 2 When heart and heart are one,
When wealth and wealth are one, your love
Must on the one you love be stamped.
When life and life are one,
Does your love reach the goal
Without auspicious sign?
What if your head be torn, your guts laid bare,
What if all objects of this order go?
Our Lord Kūḍala Saṅgama approves
A love wherein mind, reason, consciousness
Are indissolubly one.
Translated by: L M A Menezes, S M Angadi
Hindi Translation मन से मन एक होकर,
धन से धन एक होकर ....
विश्वस्त प्रेम साँचे में ढला हुआ सा होना चाहिए ।
प्राण से प्राण एक होकर शुभ-सूचना एक न हो,
तो विश्वास और प्रेम पार लगेंगे?
सिर कटने से क्या? आंत गिरने से क्या?
ऐसी समस्त वस्तुएँ जाने पर भी क्या?
चित्त, मन, बुद्धि से एकत्र प्रेम
पृथक न हो, तो कूडलसंगमदेव प्रसन्न होंगे ॥
Translated by: Banakara K Gowdappa
Telugu Translation మనసున మనసై ధనమున ధనమై,
మెచ్చిన మెప్పు అచ్చొత్తినట్లుండవలె;
ప్రాణమునకు ప్రాణ మై శుభము సూచింపకున్న
వలచిన వలపు తుదిముట్టునే? సిరిచెడనీ.
పేగులు కుప్పగా కూలనీ; సమస్త వస్తుభండారమే
తరుగనీ; మనోబుద్ది చిత్తము లేకమై
వేఱుగాకున్న సంగయ్య మెచ్చునయ్యా!
Translated by: Dr. Badala Ramaiah
Tamil Translation மனத்துடன் மனமிணைந்து, செல்வம் செல்வத்துடனிணைந்து
அன்பு அழுத்தமாக இருத்தல் வேண்டும்
உயிருடன் உயிரிணைந்து நன்மை பெருகாதிருப்பின்
கரையைக் கடக்க வியலுமோ
உருண்டால் என்ன? குடல் கிழிந்தால் என்ன?
அனைத்துப் பொருளும் அகன்றாலென்ன?
சித்தம், மனம், அறிவுடன் இணைந்த அன்பு
பிய்ந்து அகலாமல் இருப்பின்
நம் கூடல சங்கமதேவன் மெச்சுவான்.
Translated by: Smt. Kalyani Venkataraman, Chennai
Marathi Translation
मनात मन एक होऊन, धनात धन एक होऊन
देवावर अढळ विश्वास ठेवला पाहिजे.
प्राणात प्राण एक होऊन, शुभ शकून होऊन,
अढळ विश्वासाने मुक्ती मिळेल ?
शिर गेले तरी, आतडे तुटले तरी पर्वा नाही
सर्व वैभव नष्ट झाले तरी चालेल
चित्त, मन, बुध्दी एक होऊन अविचल राहिली तर
प्रसन्न होईल आमचा कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಅಚ್ಟೊತ್ತು = ಸ್ಪಟ್ಟವಾಗಿ ಕಾಣುವುದು; ಕರುಳ = ; ಕುಪ್ಪಳಿಸು = ; ಚಿತ್ತ = ಮನಸ್ಸು; ನಚ್ಚಿದ = ನಂಬಿದ; ಪಾರ = ; ಪ್ರಾಣ = ಜೀವ; ಮಚ್ಚು = ; ವೈದುವ = ; ಶುಭ = ಮಂಗಳ;
ಕನ್ನಡ ವ್ಯಾಖ್ಯಾನ ಪ್ರೇಮಿಸಿದವರೆಂದರೆ ಇಬ್ಬರ ಮನಸ್ಸೂ ಏಕವಾಗಿರಬೇಕು. ಸುಖ ದುಃಖವೆಂಬ ಎರಡರ ದಂಡೆಹಿಡಿದು ಸಂಗಮಸಾಗರದವರೆಗೆ ಏಕವಾಗಿ ಹರಿಯಬೇಕು. ತೋರಿದ ಶುಭಶಕುನದಲ್ಲಿ ಭರವಸೆಯಿಟ್ಟು ಒಬ್ಬರ ಪ್ರಾಣ ಇನ್ನೊಬ್ಬರ ಪ್ರಾಣದಲ್ಲಿ ಹೆಣೆದುಕೊಂಡಿರಬೇಕು. ಹಾಗಲ್ಲದೆ ಮಾಡಿದ ಪ್ರೇಮ ನೆರವೇರುವುದೇನು ?
ಶಿವನೊಡತಣ ಶರಣನ ಭಕ್ತಿಯೂ ಅಡಸಿದ ಎಡರು ತೊಡರುಗಳಿಂದ ಕಿಂಚಿತ್ತೂ ಕುಗ್ಗಬಾರದು. ತಲೆ ಕಡಿದು ಕೆಳಗೆ ಬಿದ್ದರೂ, ಬಗಿದ ಹೊಟ್ಟೆಯಿಂದ ಕರುಳು ಸುರಿದರೂ –ವೀರನು ತಾನು ಹಿಡಿದ ಖಡ್ಗವನ್ನು ಸಡಿಲಬಿಡದೆ ಶತ್ರುವಿನ ಮೇಲೆ ಎರಗುವಂತೆ ಕಡೆಯುಸಿರು ಇರುವವರೆಗೆ ಶಿವದ ಕಡೆಗೇ ನಡೆಯಬೇಕು. ಶಿವನಲ್ಲಿ ನಟ್ಟ ಪ್ರೇಮದೃಷ್ಟಿ ಅತ್ತಿತ್ತ ಚದುರಿಹೋಗದಂತೆ ಚಿತ್ತ ಮನ ಬುದ್ಧಿಯನ್ನು ಹುರಿಮಾಡಿರಬೇಕು. ಆಗ ಮೆಚ್ಚುವನು ಶಿವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು