•  
  •  
  •  
  •  
Index   ವಚನ - 692    Search  
 
ಮಾಹೇಶ್ವರನ ಮಾಹೇಶ್ವರಸ್ಥಲ - ಸತ್ವಪರೀಕ್ಷೆ
ಎನಿಸೆನಿಸೆಂದೊಡೆ ನಾ ಧೃತಿಗೆಡೆನಯ್ಯಾ: ಎಲುದೋರಿದರೆ, ನರ ಹರಿದರೆ, ಕರುಳು ಕುಪ್ಪಳಿಸಿದರೆ ನಾ ಧೃತಿಗೆಡೆನಯ್ಯಾ. ಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದರೆ ನಾಲಗೆ ʼಕೂಡಲಸಂಗಾ, ಶರಣೆʼನುತ್ತಿದ್ದೀತಯ್ಯಾ?
Transliteration Enisenisendoḍe nā dhr̥tigeḍenayyā: Ēḷudōridare, nara haridare, karuḷu kuppaḷisidare nā dhr̥tigeḍenayyā. Śiraharidu aṭṭe nelakke biddare nālage ʼkūḍalasaṅga, śaraṇeʼnuttiddītayyā?
Manuscript
Music Courtesy:
English Translation 2 However much be said, I will not lose my courage, Lord; Even though my bones lie bare, my nerves are torn, My guts fall out, I will not lose my courage, Lord. Even though my head is torn, and though My headless trunk drop down to earth, My tongue will go on saying, Lord, 'O Kūḍala Saṅga, I bow Thee!' Translated by: L M A Menezes, S M Angadi
Hindi Translation प्रभो, कितना कहने पर भी मैं धृतिहीन न होऊँगा; अस्तियाँ दीखने पर भी, स्नायु कट जाने पर भी आँते बाहर आने पर भी मैं धृतिहीन न होऊँगा । सिर कटकर रुंड भूमि पर गिर जाने पर भी मेरी जीभ कहती रहेगी ‘कूडलसंगमदेव तुम्हें प्रणाम’ ॥ Translated by: Banakara K Gowdappa
Telugu Translation ఎంతెంత చేసినా నాధృతి చెడదయ్యా ఎముకలు వెలిjైునా; నరాలు తెగినా ‘‘ పేగులు కుప్పబడినా; నా ధృతి చెడదయ్యా తలతెగి నిలువున కూలినా నేల: నా నాలుక సంగా శరణు శరణను చుండునయ్యా Translated by: Dr. Badala Ramaiah
Tamil Translation எத்தனை துன்பங்கள் வரினும் நான் உறுதி கெடேன் ஐயனே எலும்பு விளங்கின், நரம்பு அறுபடின், குடல் சரியின் நான் உறுதி கெடேன் ஐயனே. தலை அறுந்து முண்டம் நிலத்தில் வீழினும் நாக்கு கூடல சங்கமதேவனே, தஞ்சனம் என இயம்பும் ஐயனே. Translated by: Smt. Kalyani Venkataraman, Chennai
Marathi Translation सहज स्वभावे, राहीन मी सदा आधि व्याधि आपदा, येवो काही तुटो हे मस्तक, पड़ो हे शीर नच सोडी धीर, तरी देवा धरतीवरी पडो, मस्तक हे माझे जिव्हेवरी तुझे, शरण नाम कूडलसंगमदेवा ! जिव्हा जपे नाम हाचि तिचा धर्म, सहजेचा अर्थ - हे प्रभो ! मी कसल्याही संकटाची पर्वा न करता सहज स्वभावे तुझ्या चिंतनात प्रसन्न राहीन. माझे मस्तक तुटले किंवा शरीर धरणीवर पडले तरीही मी धीर खचू देणार नाही. हे कूडलसंगमदेवा धरतीवर माझे शिर पडले तरीही माझ्या शिराच्या जिव्हेतून सतत ""तुझा शरण, तुझा शरण” असा ध्वनी निघेल. Translated by Rajendra Jirobe, Published by V B Patil, Hirabaug, Chembur, Mumbai, 1983 पाहिजे ते बोल मी घाबरणार नाही. हाडे दिसू दे, नस तुटू दे, आतडे तुटू दे मी घाबरणार नाही देवा. शिर तुटून, धड धरतीवर पडले तरी जीभ कूडलसंगाचे स्मरण करील देवा. Translated by Shalini Sreeshaila Doddamani
ಶಬ್ದಾರ್ಥಗಳು ಅಟ್ಟೆ = ತಲೆ ಇಲ್ಲದ ದೇಹ, ಮುಂಡ; ಎನಿಸು = ಎಷ್ಟು; ಎಲು = ಎಲುಬು; ಕರುಳು = ; ಕುಪ್ಪಳಿಸು = ; ಧೃತಿ = ಧೈರ್ಯ; ನರ = ಮನುಷ್ಯ; ಹರಿ = ವಿಷ್ಣು;
ಕನ್ನಡ ವ್ಯಾಖ್ಯಾನ (ಎನಿಸು ಎನಿಸು ಎಂದರೂ) ಏನೇ ಅಪವಾದ ಬರಲಿ ಅವಮಾನವಾಗಲಿ ನಾನು ಧೈರ್ಯಗೆಡುವುದಿಲ್ಲ. ಸಮರಾಂಗಣದಲ್ಲಿ ಶತ್ರು ಅಣಕವಾಡಿ-ಬಾಣವನ್ನು ಬಿಡು, ಕಿವಿಯವರೆಗೆಳೆದು ಬಿಡು ಎಂದು ಬಾಣನಟ್ಟ ನನ್ನನ್ನು ಎದೆಗುಂದಿಸಿದರೂ ನಾನು ಹೋರಾಟವನ್ನು ಮುಂದುವರಿಸುವೆನು. ಮೇಲೆ ಮೇಲೆ ತಾಗುವ ಶರಾಘಾತದಿಂದ ಮೂಳೆ ಕಾಣುವವರೆಗೆ ಮಾಂಸ ಕೊಚ್ಚಿಹೋದರೂ ನರ ಕತ್ತರಿಸಿ ಹೋದರೂ, ಕರುಳು ಕುಪ್ಪಳಿಸಿ ಹೊರಬಂದರೂ ನಾನು ಎದೆಗುಂದುವುದಿಲ್ಲ. ತಲೆ ಕತ್ತರಿಸಿ ಕೆಳಗುರುಳಿದರೂ ನಾಲಗೆಯಿಂದ ಶಿವ ನಾಮವನ್ನು ಜಪಿಸುತ್ತಿರುವೆನು –ಎಂದು ಬಸವಣ್ಣನವರು ಯುದ್ಧಪ್ರತಿಮೆಯ ಅಚ್ಚಿನಲ್ಲಿ ತಮ್ಮ ಭಕ್ತಿಯ ಬಿಸಿರಸವನ್ನು ಎರಕ ಹೊಯ್ದಿರುವರು. ಏನೇ ವಿಪತ್ತೊದಗಿದರೂ ಮಾಯೆಗೆ ಶರಣಾಗುವುದಿಲ್ಲದೆಂಬುದು ಈ ವಚನ ಸಂದರ್ಭ ಮತ್ತು ತಾತ್ಪರ್ಯ. ವಿ : ಭೀಮಕವಿಯು ತನ್ನ ಬಸವಪುರಾಣ (ಸಂಧಿ 8, ಪದ್ಮ 7)ದಲ್ಲಿ –“ತಲೆ ಪರಿದಟ್ಟೆಯುಳಿದೊಡೆ ಶರಣೆನುತ್ತಿಹ ಭಾಷೆ” ಎಂಬಂತೆ ಉಲ್ಲೇಖಿಸಿರುವನು ಈ ವಚನವನ್ನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು