•  
  •  
  •  
  •  
Index   ವಚನ - 693    Search  
 
ಮಾಹೇಶ್ವರನ ಮಾಹೇಶ್ವರಸ್ಥಲ - ಸತ್ವಪರೀಕ್ಷೆ
ಒಣಗಿಸಿ ಎನ್ನ ಘಣಘಣಲನೆ ಮಾಡಿದರೆಯೂ ಹರಣವುಳ್ಳನ್ನಕ್ಕ ನಿಮ್ಮ ಚರಣವ ನೆನೆವುದ ಮಾಣೆ, ಮಾಣೆ; ಶರಣೆಂಬುದ ಮಾಣೆ, ಮಾಣೆ. ಕೂಡಲಸಂಗಮದೇವಯ್ಯಾ, ಎನ್ನ ಹೆಣನ ಮೇಲೆ ಕಂಚಿಟ್ಟುಂಡರೆಯೂ ಮಾಣೆ, ಮಾಣೆ.
Transliteration Oṇagisi enna ghanaghanalane māḍidareyū haraṇavuḷḷannakka nim'ma caraṇada nenevuda māṇe, māṇe; śaraṇembuda māṇe, māṇe. Kūḍalasaṅgamadēvayya, enna heṇana mēle kan̄ciṭṭuṇḍareyū māṇe, māṇe.
Manuscript
English Translation 2 Even if you dry me up until I am a creaking skeleton, As long as life is, I never shall leave off Remembering your feet- Nor leave off bowing to you. O Kūḍala saṅgama Lord, even if you Eat off a bronze plate over my corpse, I never will leave off ! Translated by: L M A Menezes, S M Angadi
Hindi Translation मुझे सुखाकर कंकाल बनाने पर भी, प्राणों के रहते तव चरण-स्मरण करना नहीं छोडूँगा, नहीं छोडूँगा । कूडलसंगमदेव, मेरे शव पर थाली रखकर खाने पर भी नहीं छोडूँगा, नहीं छोडूँगा ॥ Translated by: Banakara K Gowdappa
Telugu Translation ఎండిరచి నను గర గర చేసినా; నీ స్మరణ మానలేనయ్యా: ప్రాణమున్నంత దాక శరణు శరణనుట విడలేనురా; సంగా నాశవముపై కంచమిడుకుని భుజించినా మఱువలేను మఱచి నినుమానలేనురా! Translated by: Dr. Badala Ramaiah
Tamil Translation உலர்த்தி என்னைப் பொடித்திடினும் உயிருள்ளவரை உம் திருவடிகளை நினைப்பதை விடேன் ஐயனே தஞ்சம் என்பதை விடேன் விடேன் கூடல சங்கமதேவனே, என் பிணத்தின் மீது வெண்கலத்தட்டில் உண்டாலும் விடேன், விடேன். Translated by: Smt. Kalyani Venkataraman, Chennai
Marathi Translation देह कृश होवो, येवो दुःख व्याधि तव स्मरण कधी, सोडीना मी प्राण असे तो मी, अखंड चिंतीन शरण नाम स्मरण, सोडीना मी कूडलसंगमदेवा ! मरणोत्तरी जाण शरणोत्सवी स्मरण, सोडीना मी अर्थ - हे प्रभो ! मजवर कसलीही आपत्ती येवो अथवा दुःख संकटांना पाठवून जरी तू माझी परीक्षा घेतल्यास तरी मी तुझे चिंतन व शरणांचे स्मरण प्राण असेतोवर कधीही सोडणार नाही. प्राण गेल्यानंतरही शरणोत्सव, व मरणोत्सवातही माझा स्मरणोत्सव अखंड चालू राहील. Translated by Rajendra Jirobe, Published by V B Patil, Hirabaug, Chembur, Mumbai, 1983 वाळवून माझा देह शुष्क शुष्क केला तरी प्राण असेपर्यंत तुमचे चरण स्मरण सोडणार नाही सोडणार नाही. शरण येणे सोडणार नाही, सोडणार नाही. कूडलसंगमदेवा, माझ्या प्रेतावर कंचाचे ताट ठेवून खाल्ले तरी सोडणार नाही, सोडणार नाही. Translated by Shalini Sreeshaila Doddamani
ಶಬ್ದಾರ್ಥಗಳು ಕಂಚಿಟ್ಟು = ; ಘಣಲನೆ = ; ಚರಣ = ಪಾದ; ಮಾಣೆ = ಬಿಡು; ಹರಣ = ಪ್ರಾಣ;
ಕನ್ನಡ ವ್ಯಾಖ್ಯಾನ ತಮ್ಮ ಸಮಕಾಲೀನ ಧರ್ಮಕ್ಷೇತ್ರದಲ್ಲಿ ದಟ್ಟೈಸಿದ ಕರಾಳ ಪದ್ಧತಿಗಳ ಕರೀಮೋಡಗಳಿಗೆ ಬಿರುಗಾಳಿಯಾಗಿ ಬೀಸಿದವರು ಬಸವಣ್ಣನವರು. ಅಂದು ಅವರಿಗೆ ಅಷ್ಟು ಆವೇಗ ಉದ್ವೇಗ ಇಲ್ಲದೇ ಹೋಗಿದ್ದರೆ –ಏನೂ ಜಗ್ಗುತ್ತಿರಲಿಲ್ಲ. ಬಸವಣ್ಣನವರ ಆ ಶಕ್ತಿಗೆಲ್ಲಾ ಉಗಮವಿದ್ದುದು ಅವರ ನಿಷ್ಠುರನಿಶ್ಚಲಭಂಗಿಯಲ್ಲಿಯೇ ಹೊರತು-ಹೊರಗಣಿಂದ ಕಟ್ಟಿಕೊಂಡಿದ್ದ ಸಾಧನಸಂಪತ್ತಿಯಲ್ಲಿಯಲ್ಲ. ಆದುದರಿಂದಲೇ ಎಲ್ಲ ಸಂಘರ್ಷ ಸಂದರ್ಭಗಳಲ್ಲಿಯೂ ಅವರು ತಮ್ಮನ್ನೇ ಮೊದಲು ಒಡ್ಡಿಕೊಳ್ಳುತ್ತಿದ್ದರು. ಲಂಬವೂ ದೃಢವೂ ಆದ ಅವರ ಶಿವಾಕಾಂಕ್ಷೆ ಅವರಿಗೆ ಯಾವುದರ ಮುಂದೆಯೂ ಅಭಂಗವಾಗಿ ಆಸರೆಯಾಗಿ ನಿಲ್ಲುತ್ತಿತ್ತು. ಮತ್ತು ಶಿವಧರ್ಮವನ್ನು ಸ್ವೀಕರಿಸಿದ ಹೊಸದರಲ್ಲೇ ಬಸವಣ್ಣನವರು ಅತ್ಯಂತ ಉಗ್ರವಾದ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಆಗ ಅವರು ನೀರನ್ನ ಹಿಂಸೆಗೂ ಒಳಗಾಗಿರಬಹುದು, ಮತ್ತು ಅವರಿಗೆ ಸಾವಿನ ಭಯವನ್ನೂ ಒಡ್ಡಲಾಗಿತ್ತಾಗ ಬಹುದು. ಆದರೂ ಬಸವಣ್ಣನವರು ತಮ್ಮ ಶಿವಮತಸ್ಥಾಪನೆಯ ಪ್ರತಿಜ್ಞೆಯನ್ನು ಬಿಡಲಿಲ್ಲ-ತಮ್ಮ ಮಣಿಹವನ್ನು ಮಾಡಿಯೇ ಮಡಿದರು. ವಿ : ಶತ್ರುವನ್ನು ಸಾಯಿಸಿ ಅವನ ಹೆಣದ ಮೇಲೆ ಬಟ್ಟಲಿಟ್ಟುಕೊಂಡು ಉಂಡು ಸೇಡುತೀರಿಸಿಕೊಳ್ಳುವ ಭಯಾನಕ ವೀರಪದ್ಧತಿಯ ಪ್ರಸ್ತಾಪ ಈ ವಚನದಲ್ಲಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು