•  
  •  
  •  
  •  
Index   ವಚನ - 694    Search  
 
ಮಾಹೇಶ್ವರನ ಮಾಹೇಶ್ವರಸ್ಥಲ - ಸತ್ವಪರೀಕ್ಷೆ
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಮತ್ತೊಂದ ನೆನೆದೊಡೆ ತಲೆದಂಡ, ತಲೆದಂಡ ! ಹುಸಿಯಾದರೆ, ದೇವಾ ತಲೆದಂಡ, ತಲೆದಂಡ ! ಕೂಡಲಸಂಗಮದೇವಾ, ನೀವಲ್ಲದೆ ಅನ್ಯರ ನೆನೆದೊಡೆ ತಲೆದಂಡ, ತಲೆದಂಡ !
Transliteration Jāgra svapna suṣuptiyalli mattonda nenedoḍe taledaṇḍa, taledaṇḍa! Husiyādare, dēvā taledaṇḍa, taledaṇḍa! Kūḍalasaṅgamadēvā, nīnallade an'yara nenedoḍe taledaṇḍa, taledaṇḍa!
Manuscript
English Translation 2 Should I remember any other thing Walking or dreaming or in deep sleep, Let my head pay for it! Should I play false, Let my head pay for it! O Kūḍala saṅgama Lord, Should I remember anyone else but you. Let my head pay for it! Translated by: L M A Menezes, S M Angadi
Hindi Translation जाग्रत्, स्वप्न, सुषुप्ति में और किसी का ध्यान करूँ तो मेरा शिरच्छेद हो, शिरच्छेद! कूडलसंगमदेव, तुम्हारे सिवा किसी और का ध्यान कूरुँ, तो मेरा शिरच्छेद हो, शिरच्छेद ॥ Translated by: Banakara K Gowdappa
Telugu Translation జాగ్ర స్వప్న సుషుప్తుల వేఱె తలంచిన తలనిత్తు బొంకితినా స్వామీ! నా తల దండమిత్తు సంగా! నిన్ను విడిచి పరుల తలతునా తలనిత్తు తలనిత్తు తల దండమిత్తురా! Translated by: Dr. Badala Ramaiah
Tamil Translation விழிப்பு, கனவு, கனவற்ற நிலையில் பிறிதொன்றை நினையின் தலைதண்டம், தலைதண்டம் பொய்யாயின் இறைவனே, தலைதண்டம், தலைதண்டம் கூடல சங்கமதேவனே, நீயல்லாமல் பிறரை நினையின் தலைதண்டம், தலைதண்டம் Translated by: Smt. Kalyani Venkataraman, Chennai
Marathi Translation अन्य देव स्मरण ॥ घडेल तर जाण । व्हावे शिरकाण । तेंव्हा माझे । व्हावे शिरकाण जागृतीत स्वप्नी । सुषुप्तीत जाण । सदैव तव स्मरण । चालू राही । सदैव तव स्मरण । सत्य वचन माझे । प्रमाण त्या प्राण । व्हावे शिरकाण । मिथ्या होता । व्हावे शिरकाण । कूडलसंगमेशा ! अन्य देव स्मरण तेचि मला मरण । वाटे स्वामी । तोचि मला मरण । अर्थ - हे प्रभो! तुझ्याशिवाय मी अन्य कोणाचेही स्मरण करणार नाही. जर मी अन्य देवांचे स्मरण केले तर हे कूडलसंगमदेवा! (परशिवा) मला तू खुशाल सुळावर चढव. जागृती स्वप्न व सुशुप्तीत वचन खोटे ठरल्यास तू मला खुशाल सुळावर चढव. अन्य देव स्मरण हेच माझ्यासाठी मरण होय. Translated by Rajendra Jirobe, Published by V B Patil, Hirabaug, Chembur, Mumbai, 1983 जागृति-स्वप्न-सुषुप्तिमध्ये अन्य स्मरण केले तर प्राणदंड, प्राणदंड ! खोटा निघालो तर प्राणदंड ! प्राणदंड ! कूडलसंगमदेवा, तुमच्या विना अन्य स्मरण केले तर प्राणदंड ! प्राणदंड ! Translated by Shalini Sreeshaila Doddamani
ಶಬ್ದಾರ್ಥಗಳು ಜಾಗ್ರ = ಎಚ್ಚರ; ತಲೆದಂಡ = ; ಸುಷುಪ್ತಿ = ಪೂರ್ಣ ನಿದ್ರಾವಸ್ತೆ; ಸ್ವಪ್ನ = ಕನಸು; ಹುಸಿ = ಸುಳ್ಳು;
ಕನ್ನಡ ವ್ಯಾಖ್ಯಾನ ಪ್ರಜ್ಞಾಪೂರ್ವಕವಾಗಿ ಎಂಬ ಮಾತು ಆಗಿರಲಿ -ಕನಸು ಮನಸಿನ ಆಳದಲ್ಲೆಲ್ಲಿಯೂ ಬಸವಣ್ಣನವರು ಶಿವೇತರವಾದುದನ್ನು ನೆನೆದವರಲ್ಲ ನಿರೀಕ್ಷಿಸಿದವರಲ್ಲ. ಯಾವುದಾದರೊಂದು ಆಶಿವಾಕಾಂಕ್ಷೆಯನ್ನು ತಡೆಗಟ್ಟಲು ತಮ್ಮಿಂದ ಸಾಧ್ಯವಾಗಲಿಲ್ಲವೆಂದ ಮೇಲೆ ಬಸವಣ್ಣನವರು ಅಂಥ ನಿಸ್ತೇಜ ಕ್ಷುದ್ರ ಜೀವಿತವನ್ನು ಮುಂದುವರಿಸಿಕೊಂಡು ಹೋಗಲು ಹೇಸುತ್ತಿದ್ದರು. ತಮ್ಮ ದೊರೆಯಾದ ಶಿವನ ಮುಂದೆ ತಾವು ಮಾಡಿದ ಧರ್ಮಸ್ಥಾಪನೆಯ ಪ್ರತಿಜ್ಞೆ ಯಶಸ್ವಿಯಾಗಬೇಕು-ಇಲ್ಲ, ತಮ್ಮ ತಲೆಯನ್ನು ಕತ್ತರಿಸಿ ಆ ದೊರೆಗೆ ದಂಡವಾಗಿ ತೆರಬೇಕು ಎಂಬ ಪುರಾತನ ವೀರಪಂಥದವರು ಬಸವಣ್ಣನವರು. ವಿ : ದೊರೆಯನ್ನು ರಕ್ಷಿಸುವೆನೆಂದು ಪ್ರತಿಜ್ಞೆ ಮಾಡಿ ರಣರಂಗವನ್ನು ಪ್ರವೇಶಿಸಿದ ವೀರಾಗ್ರಣಿಗಳು –ಆ ಪ್ರಯತ್ನದಲ್ಲಿ ವಿಫಲರಾಗಿ ದೊರೆ ಸತ್ತರೆ –ತಮ್ಮ ತಲೆಯನ್ನು ಸಿಡಿಗೆ ಕಟ್ಟಿ ಕತ್ತರಿಸಿಕೊಂಡು ಆತ್ಮಾರ್ಪಣ ಮಾಡಿಕೊಳ್ಳುತ್ತಿದ್ದ ಹಲವು ಪ್ರಕರಣಗಳು ಚರಿತ್ರೆಯಲ್ಲಿ ಕಾಣಸಿಗುವವು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು