•  
  •  
  •  
  •  
Index   ವಚನ - 695    Search  
 
ಮಾಹೇಶ್ವರನ ಮಾಹೇಶ್ವರಸ್ಥಲ - ಕರ್ಮ
ಸುಖ ಬಂದರೆ ಪುಣ್ಯದ ಫಲವೆನ್ನೆನು, ದುಃಖ ಬಂದರೆ ಪಾಪದ ಫಲವೆನ್ನೆನು; ನೀ ಮಾಡಿದೊಡಾಯಿತ್ತೆಂದೆನ್ನೆನು, ಕರ್ಮಕ್ಕೆ ಕರ್ತುವೆ ಕಡೆಯೆಂದೆನ್ನೆನು, ಉದಾಸೀನವಿಡಿದು ಶರಣೆನ್ನೆನು. ಕೂಡಲಸಂಗಮದೇವಾ, ನೀ ಮಾಡಿದುಪದೇಶವು ಎನಗೀ ಪರಿಯಲಿ; ಸಂಸಾರವ ಸವೆಯೆ ಬಳಸುವೆನು.
Transliteration Sukha bandare puṇyada phalavennenu, kāṇisikoṇḍare pāpada phalavennenu; nī māḍidoḍāyittendenenu, karmakke kartuve kaḍeyendennenu, udāsīnaviḍidu śaraṇennenu. Kūḍalasaṅgamadēvā, nī māḍidupadēśavu enagī pariyali; sansārava saveye baḷasuvenu.
Manuscript
English Translation 2 Should happiness come, I do not say It is my merit’s fruit ; Should sarrow come,I do not say It is my sin’s reward. I do not say it’s so because You’ve made it so. I do not say the doer is The limit for a deed. I do not say ' I bow to Thee' With indifferent mind. O Kūḍala saṅgama Lord, this is the way You have instructed me: I spend my worldly life so it be spent. Translated by: L M A Menezes, S M Angadi
Hindi Translation सुख प्राप्त हो, तो पुण्य-फल नहीं कहूँगा, दुःख प्राप्त हो, तो पाप-फल नहीं कहूँगा, नहीं कहूँगा कि तुम्हारे बनाने से बना, नहीं कहूँगा कि कर्म के लिए कर्ता ही अंतिम है; उदासीन होकर वंदना नहीं करूँगा कूडलसंगमदेव, यों तुमने मुझे उपदेश दिया लौकिक जीवन बिताने के लिए उसका उपयोग करूँगा ॥ Translated by: Banakara K Gowdappa
Telugu Translation సుఖమె రాగపుణ్యమనను, దుఃఖము రాగ పాపఫలమనను నీ జేసిన చేతల ఫలమనను కర్మకు కర్తయే తుదియనను ఉదాసీనుడనై శరణనలేను; సంగయ్యా నీజేసిన చేత లీగతి నా సంసార సారముగా పెరిగెనయ్యా Translated by: Dr. Badala Ramaiah
Tamil Translation இன்பம் வரின் புண்ணியபலன் என்பேன் துன்பம் வரின் பாவத்தின் பலன் என்பேன் நீ செய்ததால் வந்தது எனக் கூறேன் வினைக்கு வினையே இறுதி என்னேன் அலட்சியத்துடன் தஞ்சம் என்னேன் கூடல சங்கமதேவனே, நீ கூறிய அறிவுரையை எனக்கு இவ்விதத்தில் வாழ்க்கை அகல்வதற்குப் பயனப்படுத்துவே னையனே. Translated by: Smt. Kalyani Venkataraman, Chennai
Marathi Translation पुण्य फल म्हणेन मी येणाऱ्या सुखासी म्हणेना मी पाप फळे येणाऱ्या दुःखासी ॥ १ ॥ सुख दुःख दाते तुम्ही न म्हणे तुम्हासी न वदीन मी तुम्हा तें ठेऊनी उदासी ॥ २ ॥ माझे कर्म मी भोगीन काय त्या कर्त्यासी गोड करीन हा संसार जाणुनि तयासी ॥ २ ॥ कूडलसंगमदेव माझा विसरेन त्यासी समर्पीत हे जीवन तया चरणाशी ॥ ४ ॥ अर्थ- सुख हे पुण्य फळाने येते व दुःख हे पाप फळाने येते असे मी कधीही समजणार नाही. तसेच माझ्या पूर्व कर्मास देवा तूच जबाबदार आहेस असेही मी म्हणणार नाही. उदासिन होऊन मी तुझी कधीही वंचना करणार नाही. हे कूडलसंगमदेवा ! तुझ्या जंगममूर्तिचे उपदेशास कधीही विसरणार नाही. माझे सुख दुःख कर्मफळे हे माझेच समजून तव उपदेशाप्रमाणे माझा संसार गोड करून घेईन व सदैव आपले स्मरणात समाधानी राहीन. Translated by Rajendra Jirobe, Published by V B Patil, Hirabaug, Chembur, Mumbai, 1983 सुख येता पुण्याचे फळ म्हणतो. दुःख येता पापाचे फळ म्हणतो. तुम्ही सर्व केले असेही म्हणणार नाही. कर्माचा कर्ता तू आहे असे म्हणणार नाही. उदासीन होऊन वंदन करणार नाही. कूडलसंगमदेवा, असा तुमचा उपदेश तुमच्या उपदेशाप्रमाणे ऐहिक जीवन झिजवित मी जगतो. Translated by Shalini Sreeshaila Doddamani
ಶಬ್ದಾರ್ಥಗಳು ಉದಾಸಿನ = ಬೇಸರ ಅಲಕ್ಷ್ಯ; ಉಪದೇಶ = ; ಕಡೆ = ಕೊನೆ; ಕರ್ತು = ಮಾಡುವವ; ಕರ್ಮ = ಕೆಲಸ; ಪರಿ = ರೀತಿ; ಪುಣ್ಯ = ಒಳ್ಳೆಯ ಕರ್ಮ; ಸವೆ = ;
ಕನ್ನಡ ವ್ಯಾಖ್ಯಾನ “ಸುಖ ಬಂದಾಗ –ಇದು ನನ್ನಿಂದಾಯಿತೆಂದು ಅಹಂಕರಿಸದೆ, ದುಃಖ ಬಂದಾಗ –ಇದು ದೇವರಿಂದಾಯಿತೆಂದು ದೂರದೆ, ಅಥವಾ ಈ ಸುಖ ದುಃಖಳೆರಡಕ್ಕೂ ನಾನೇ ಕಾರಣಕರ್ತನೆನ್ನುತ್ತ ನಿರ್ದೈವವಾದವನ್ನು ಮುಂದೊಡ್ಡಿ ದೇವರನ್ನು ಉದಾಸೀನ ಮಾಡದೆ-ಸುಖದುಃಖಗಳು ಜೀವನದ ಮೂಲಪರಿಕರಗಳೆಂದು –ಅವೆರಡನ್ನೂ ಸಮಾಧಾನಚಿತ್ತದಿಂದಲೇ ಸ್ವಾಗತಿಸುತ್ತೇನೆ. ಈ ಜೀವನಪಾನೀಯವನ್ನು ದುಃಖದ ಗಷ್ಟು ಸಹಿತವಾಗಿಯೇ ಈಂಟಿ ತೃಪ್ತಿಯನ್ನು ಪಡೆಯುತ್ತೇನೆ” –ಇದು ಜೀವನದ ವಾಸ್ತವಿಕತೆಯನ್ನೂ, ಅದನ್ನು ಅನುಭವಿಸುವ ಆಸ್ಥೆಯನ್ನೂ ಬಲ್ಲ ಬಸವಣ್ಣನವರ ಮಾತು. ಕೂಡಲ ಸಂಗಮದೇವರಿಂದ ಅವರು ಪಡೆದ ಉಪದೇಶವೂ ಇದೇ ಆಗಿತ್ತು. ಬಸವಣ್ಣನವರು-ತಾವು ಕೂಡಲ ಸಂಗಮದೇವರಿಂದ ಪಡೆದ ಉಪದೇಶವಿದೆಂದು ನಿರ್ದೇಶಿಸಿ ಹೇಳಿರುವ ಈ ವಚನ ಬಹಳ ಗಮನಾರ್ಹವಾಗಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು