ಮಾಹೇಶ್ವರನ ಮಾಹೇಶ್ವರಸ್ಥಲ - ಪ್ರಯತ್ನ
ಕಾಯದ ಕಳವಳಕ್ಕಂಜಿ, `ಕಾಯಯ್ಯಾ' ಎನ್ನೆನು;
ಜೀವನೋಪಾಯಕ್ಕಂಜಿ `ಈಯಯ್ಯಾ' ಎನ್ನೆನು.
"ಯದ್ ಭಾವಂ ತದ್ ಭವತಿ": ಉರಿ ಬರಲಿ, ಸಿರಿ ಬರಲಿ-
ʼಬೇಕು, ಬೇಡೆʼನ್ನೆನಯ್ಯಾ.
ಆ ನಿಮ್ಮ ಹಾರೆನು, ಮಾನವರ ಬೇಡೆನು;
ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ.
Transliteration Kāyada kaḷavaḷakkan̄ji, `kāyayya' ennenu;
jīvanōpāyakkan̄ji `īyayya' ennenu.
"Yad bhāvaṁ tad bhavati": Uri barali, siri barali-
’bēku, bēḍa’nnenayyā.
Ā nim'ma hārenu, mānavara bēḍanu;
āṇe, nim'māṇe, kūḍalasaṅgamadēvā.
Manuscript
English Translation 2 Fearing the body's pains, I do not say
'Protect me, Lord!'
Fearing for means of life, I do not say
'Grant me, O Lord!'
'As the heart is, so is the fruit'
Let woe come, or wealth come, I do not say
'I want or do not want'
I do not hope for it
Either from man or God-
So, I swear by you, Lord
Kūḍala Saṅgama !
Translated by: L M A Menezes, S M Angadi
Hindi Translation क्या कष्टों से त्रस्त हो पाहि, पाहि नहीं कहूँगा
जीविका से त्रस्त हो प्रदान करो देहि देहि नहीं कहूँगा ।
‘यद् भावं तद् भवति’ आपदा आये या विपदा,
मैं नहीं कहूँगा कि चाहिए या नहीं चाहिए
तुम से आशा नहीं करता, मानवों से नहीं माँगता
सौगंध है, तव सौगंध कूडलसंगमदेव ॥
Translated by: Banakara K Gowdappa
Telugu Translation కాయపు కలతలకు వెఱచి కావుమయ్యా అనను
జీవనోపాయమునకు వెఱచి యీవయ్యా అనను
‘యద్భావం తద్భవతి’ ఉరిరానీ; సిరిరానీ
వలయూ వలదూ అన బోనయ్యా! నరులవేడను
ఆన; నీయాన కూడల సంగమదేవా!
Translated by: Dr. Badala Ramaiah
Tamil Translation உடல் துன்பத்திற்கு அஞ்சி, “காரும் ஐயனே” என்னேன்
வாழ்வை நடத்துவதற்கு அஞ்சி “ஈவாய் ஐயனே” என்னேன்
“யத் பாவம் தத் பவதி”!
துன்பம் வரினும், செல்வம் வரினும்
வேண்டும், வேண்டாம் எனக்கூறேன்
உம்மிடம் எதிர்நோக்கேன் மனிதரிடம் வேண்டேன்
ஆணை, உம்மாணை, கூடல சங்கமதேவனே.
Translated by: Smt. Kalyani Venkataraman, Chennai
Marathi Translation
देह यातनेसि, न चाले भिऊन
रक्ष रक्ष म्हणुन, म्हणेना मी
न म्हणे मी देई, निर्वाह पुरते
स्वभावापरी ते सुख दुःख
पाहिजे म्हणे ना, म्हणेना नकोही
न मागे तुलाही, न कोणाशी
कूडलसंगमदेवा ! वाहे तव आण
भावचि प्रमाण, जाण एक
अर्थ :- हे प्रभो! परमेश्वरा! देह यातनेला भिऊन रक्षणास्तव मी कोणासही भिक घालणार नाही पोटापुरते दे असेही म्हणणार नाही. माझी सर्व सुख दुःख स्वाभाविक होत. मी कोणास दे वा नकोही म्हणणार नाही. हे कूडलसंगमदेवा ! (परशिवा) हीच तुझी शपथ.
Translated by Rajendra Jirobe, Published by V B Patil, Hirabaug, Chembur, Mumbai, 1983
शरीर यातनांना घाबरुन `वाचवा` म्हणत नाही.
जीवन जगण्यासाठी `द्यावे` म्हणत नाही.
`यद्भावं तद्भवति` दुःख येवो, सुख येवो.
`पाहिजे-नको` म्हणणार नाही देवा.
तुम्हाला, मानवाला मागणार नाही.
तुमची शपथ कूडलसंगमदेवा.
Translated by Shalini Sreeshaila Doddamani
Urdu Translation رنج وآزارِجسم سےڈرکر
میں نہ تیری پناہ چاہوں گا
اوردستِ دُعا نہ اُٹھے گا
شکمِ نا بکارکی خاطر
حرف ِانکارہے نہ لب پہ طلب
تنگ دستی ہو یا امارت ہو
میں ہمیشہ رہوں گا شکرگزار
تیری سوگند ہاں تری سوگند
میں کبھی تجھ سےتیرے بندوں سے
ہاتھ پھیلا کےکچھ نہ مانگوں گا
اےمِرے دیوا کوڈلا سنگا
Translated by: Hameed Almas
ಶಬ್ದಾರ್ಥಗಳು ಅಂಜಿ = ಹೆದರು; ಆಣೆ = ಅವಡೆ ಅಪ್ಪಳಿಸು; ಈಯು = ಕೊಡು; ಕಳವಳಿ = ; ಕಾಯ = ಶರೀರ; ಕಾಯ = ಶರೀರ; ತದ್ = ಅದು; ಭವತಿ = ನೀವು, ತಾವು; ಭಾವ = ; ಯದ್ = ಅದು; ಹಾರೆನು = ;
ಕನ್ನಡ ವ್ಯಾಖ್ಯಾನ ದೇಹಕ್ಕೆ ಬರುವ ರೋಗ ಮುಪ್ಪು ಸಾವನ್ನು ನೆನೆದು ನಡುಗಿ-ನಿರೋಗಿಯಾಗಿರಲೆಂದಾಗಲಿ, ನಿರ್ಜರವಾಗಿರಲೆಂದಾಗಲಿ ನಿರ್ಮರಣವಾಗಿರಲೆಂದಾಗಲಿ, ದಿನದಿನದ ಜೀವಿಕೆಗಾಗಿ ಆಶೆಬಟ್ಟಾಗಲಿ ಶಿವನಿಗೆ ಶರಣಾಗತರಾದವರಲ್ಲ ಬಸವಣ್ಣನವರು –ಅದು ಗಾಂಪರ ವಿಕಾರಸಿದ್ಧರ ಮತ್ತು ಹೊಟ್ಟೆಪಾಡಿನ ಪೂಜಾರಿಗಳ ಕಸುಬು.
ಕಷ್ಟವಿಲ್ಲದೆ ಬರೀ ಸುಖವನ್ನೇ ಉಣ್ಣುವ-ಕೆಸರಿಲ್ಲದೆ ಕಮಲವನ್ನು ಬೆಳೆವ ಕನಸನ್ನು ಯಾವ ಅಲಸ ವಿಲಾಸಿ ಕಂಡನೋ –ಅದೊಂದು ಪಿಡುಗಾಗಿ ಮಾನವ ಪೀಳಿಗೆಯನ್ನು ತಲೆತಲಾಂತರದಿಂದ ಕಾಡುತ್ತಲೇ ಇದೆ, ಆದರೆ ಮತ್ತೆಲ್ಲ ಪ್ರಾಣಿವರ್ಗವೂ ಸುಖವನ್ನು ಕಷ್ಟದ ಅನುಪಾನದೊಡನೆಯೇ ಗೊಣಗದೆ ಸವಿಯುತ್ತಿದೆ, ವೇದ ಉಪನಿಷತ್ತುಗಳನ್ನು ಓದಿ ಅಲ್ಲ –ಈ ಪ್ರಾಣಿಗಳ ಈ ಜೀವನರೀತಿಯನ್ನು ನೋಡಿಯೇ ಮಾನವನು ಸಂಸಾರ(ಪ್ರಾಪಂಚಿಕ)ವನ್ನು ಪೌರುಷದಿಂದ ಭೋಗಿಸುವುದನ್ನು ಕಲಿಯಬೇಕಾಗಿದೆ.
ಈ ಸಂದರ್ಭದಲ್ಲಿ ಸುಖಾಭಿಲಾಷಿಗಳು ಎರಡು ಮಾತನ್ನು ನೆನಪಿಡಬೇಕು : ಯದ್ಭಾವ್ಯಂ ತದ್ಭವತಿ –ಯಾವುದು ಆಗುವುದಿದೆಯೇ ಅದು ಆಗಿಯೇ ತೀರುತ್ತದೆ. ಹುಟ್ಟು ಸಾವಿನ ಮತ್ತು ಸುಖದುಃಖದ ಕಾರಣ ಕಾರ್ಯ ಪರಂಪರೆಯನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ-ಸಾಧ್ಯವಿರುವುದೆಂದರೆ ವೀರದಿಂದ ದಾರಿಸಾಗುವುದಷ್ಟೆ. ದೇವರಿಂದಲೂ ನಿರೀಕ್ಷಿಸದೆ ಮಾನವರನ್ನೂ ಬೇಡದೆ ನಡೆಸುವ ಆ ವೀರಜೀವನವನ್ನೇ ಬಸವಣ್ಣನವರು ಪ್ರಸ್ತಾಪಿಸುತ್ತಿರುವುದು ಈ ವಚನದಲ್ಲಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು