•  
  •  
  •  
  •  
Index   ವಚನ - 697    Search  
 
ಮಾಹೇಶ್ವರನ ಮಾಹೇಶ್ವರಸ್ಥಲ - ಹುಟ್ಟು-ಸಾವು
ನಾಳೆ ಬಪ್ಪುದು ನಮಗಿಂದೆ ಬರಲಿ; ಇಂದು ಬಪ್ಪುದು ನಮಗೀಗಲೆ ಬರಲಿ; ಇದಕಾರಂಜುವರು, ಇದಕಾರಳುಕುವರು? "ಜಾತಸ್ಯ ಮರಣಂ ಧ್ರುವಂ" ಎಂಬುದಾಗಿ, ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವರೆ ಹರಿಬ್ರಹ್ಮಾದಿಗಳಿಗಳವಲ್ಲಾ!
Transliteration Nāḷe bappudu namaginde barali; indu bappudu namagīgale barali; idakāran̄juvaru, idakāraḷukuvaru? "Jātasya maraṇaṁ dhruvaṁ" endu, nam'ma kūḍalasaṅgamadēvaru bareda barehava tappisuvare haribrahmādigaḷavallā!
Manuscript
Art
English Translation Whatever adversity the future holds, Let it come to me today itself. Whatever is due today, Let it come right now. Who cares, who bothers? It is well said: ‘One born must die someday.’ I am prepared to face it! It is not in the hands of Hari or Brahma To erase what is decreed By our Lord Kūḍala Saṅgama!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 Whatever tomorrow hath in store For me, let come today; And let today's share come at once: Here is no coward heart! Whatever is born, they say, must die: It is not within the power Of Hari or Brahma or the other gods to' scape The writ our Lord Kūḍala Saṅgama Has writ! Translated by: L M A Menezes, S M Angadi
Russian Translation То, чему завтра суждено случиться, пусть настанет сегодня. Сегодняшнее пусть сейчас наступит. Кто испугается? Кто заплачет? Для рожденного смерть неизбежна Ибо все, что предписано Господом, случится. О, Кудаласангама. Translated by: Prof Harishankar, Mysore and Mrs. Galina Kopeliovich, Russia
Hindi Translation कल जो आवे वह आज ही आ जाय; आज जो आवे वह अभी आ जाय: इससे कौन भयभीत होगा? इससे कौन व्याकुलित होगा? ‘जातस्य मरणं धृवम्’ मम कूडलसंगमदेव से लिखित लिपि मिटाना हरि- ब्रह्मादियों से भी असंभव है ॥ Translated by: Banakara K Gowdappa
Telugu Translation రేపు వచ్చునది నేడెరానీ; నేడు వచ్చునదిపుడేరానీ బెదరు టెవ్వరో! దీనికి అదరు టెవ్వరో! ‘జాతస్యమరణం ధ్రువం’ బనుచుండ సంగయ్య వ్రాసిన వ్రాత తప్పింస అలవికాదు బ్రహ్మాచ్యుతులకైన. Translated by: Dr. Badala Ramaiah
Tamil Translation நாளை வருவது நமக்கு இன்றே வரட்டும் இன்று வருவது நமக்கு இப்பொழுதே வரட்டும் இதற்கு யார் அஞ்சுவர், யார் நடுங்குவர்? “ஜாதஸ்ய மரணம் த்ருவம்” என்பதால் நம் கூடல சங்கமதேவன் எழுதிய தலைஎழுத்தை அழிக்க, ஹரி, பிரம்மராலும் இயலாதன்றோ. Translated by: Smt. Kalyani Venkataraman, Chennai
Marathi Translation जातस्यहि मरणं ध्रुव तर त्या मरणाची का चिंता ? उद्या यायचे आज येऊ दे आज यायचे ते आता ॥ ध्रु ॥ ब्रह्मा हरिहर मिटवू न शकती त्याच्या त्या लिखिता धैर्यवंत मी नच घाबरतो तोचि सर्व कर्ता ॥ १ ॥ कूडलसंगम देवा ! तुमच्या मिटवी कोण लिखिता खुशाल येवो मरण येई तर प्रसन्न ती वार्ता ॥२॥ अर्थ :- जन्माला आलेला प्रत्येक जीव प्राणी मरणार हे निश्चित आहे. मग मरणाला का भ्यावे. त्याच्या समोर हसत मुखाने गेल्यास शेवटच्या क्षणापर्यत आनंद मिळत राहील. हे जाणणारे शिवशरण मरतांना देखिल समाधानी असतात. कारण क्षणा क्षणाला त्यांना आनंद प्राप्त होत असतो. व मृत्यूनंतर शिवात विलीन होत असतो. येणारे संकट सुख-दु:ख येणारच त्याची भिती बाळगून कसे चालेल. म्हणून शिवशरण मरणाला महानवमी, सारखा सण मानतात. त्यांची अंत यात्रा नाचत गात, वाद्ये वाजवित, फटाके उडवित लाह्या उधळीत आनंद व्यक्त करीत असतात. नव्हे अशी त्यांची धारणा असते. इहलोकात सर्व बुद्धीजीवी मरणाला भित असतात. पण खरे वीरशैव त्यास महानवमी समजतात. म्हणून उद्याचे मरण आज का येईना व आजचे मरण आताच का येईना असे समजल्यामुळेच ते समाधानी जीवन जगत असतात. Translated by Rajendra Jirobe, Published by V B Patil, Hirabaug, Chembur, Mumbai, 1983 उद्या यायचे ते आजच येऊ दे. आज यायचे ते आत्ताच येऊ दे. याला कोण भितो ? याला कोण घाबरतो? `जातस्य मरणं ध्रुवं` म्हणून आमच्या कूडलसंगमदेवाने लिहिलेले विधीलिखीत हरी ब्रह्मादीनांही चुकविता आले नाही. Translated by Shalini Sreeshaila Doddamani
Urdu Translation جوہونےوالا ہے فردا میں آج ہوجائے جوآج گزرے گی ہم پرابھی گزرجائے جوہونے والا ہے ہوگا وہ کون ڈرتا ہے یہ حادثات ہیں کب ان سےجی لرزتا ہے ملی ہےزیست جوہم کوتوموت برحق ہے ہری ہوں یا کہ برہما ہوں ان کی خواہش پر بدل نہ جائے گا ہرگزنوشتۂ تقدیر مرے حضورمرےدیوا کوڈلا سنگم Translated by: Hameed Almas
ಶಬ್ದಾರ್ಥಗಳು ಅಂಜು = ಭಯಪಡು; ಅಳುಕು = ಅಂಜಿಕೆ; ಒಪ್ಪುದು = ಒಪ್ಪುವುದು; ಜಾತಸ್ಯ = ಹುಟ್ಟಿನಿಂದ; ದ್ರುವ = ; ಬರೆಹ = ಬರವಣಿಗೆ, ಲಿಖಿತ ರೂಪ; ಹರಿ = ವಿಷ್ಙು;
ಕನ್ನಡ ವ್ಯಾಖ್ಯಾನ ಧೈರ್ಯ ಜೀವನವೆಂಬ ಸಮರದಲ್ಲಿ ಹೋರಾಡಲಾರದೆ ವಿಪತ್ತೇ ಬಾರದಿರಲೆಂದು ಹಾರೈಸುವುದು ಹೇಡಿಯ ಲಕ್ಷಣ. ವಿಪತ್ತನ್ನು ಆಹ್ವಾನಿಸಿ ವಿಜಯಿಯಾಗಲು ಸಾಹಸ ಮಾಡುವುದು ವೀರನ ಲಕ್ಷಣ. ಇಂತಹ ವೀರನ ಧೈರ್ಯ, ಸಾಹಸಗಳು, ಅಣ್ಣನಲ್ಲಿರುವುದನ್ನು ಈ ವಚನದಲ್ಲಿ ನಾವು ನೋಡುತ್ತೇವೆ. ನಾಳೆ ಬರಲಿರುವ ಕಷ್ಟ ನಾಳೆಯೇ ಬಾರದೆ ಮುಂದಕ್ಕೆ ಹೋಗಲಿ ಎನ್ನದೆ ನಾಳೆ ಬರುವುದು ನಮಗಿಂದೇ ಬರಲಿ ಎಂದೂ, ಇಂದು ಬರುವುದು ಈಗಲೇ ಬರಲಿ ಎಂದೂ, ಆಹ್ವಾನಿಸಿ ಅದನ್ನು ಎದುರಿಸಲು ಸಿದ್ಧರಾಗಿದ್ದಾರೆ. ಅಣ್ಣನವರು ಹುಟ್ಟಿದವನಿಗೆ ಮರಣ ಕಟ್ಟಿಟ್ಟ ಬುತ್ತಿ. ಅದಕ್ಕೆ ಅಂಜಬೇಕೇಕೆ? ಅಳುಕಬೇಕೇಕೆ? ದೇವರು ಬರೆದ ಬರೆಹವ ಹರಿ ಬ್ರಹ್ಮಾದಿಗಳಿಂದಲೂ ಅಳಿಸಲು ಸಾಧ್ಯವಿಲ್ಲ. ಸಾವು ಬಂದರೆ ಅದೂ ದೇವರು ನೀಡಿದ ಪ್ರಸಾದವಲ್ಲದೆ ಬೇರೆಯಲ್ಲ. ಅದನ್ನು ಸ್ವಾಗತಿಸುವುದು ಶರಣನ ಆದ್ಯ ಕರ್ತವ್ಯ. ಅಂತೆಯೇ ಶರಣರು ‘ಮರಣವೇ ಮಹಾನವಮಿ'ಯಮಗೆ ಎಂದು ಉಗ್ಘಡಿಸಿದರು. ಇಂತು ಶರಣರಿಗೆ ಮರಣವು ಭಯ ಭೀತಿಯನ್ನು ತರುವ ಒಂದು ಕರಾಳ ದಿನವಾಗದೆ ಮಹಾನವಮಿ ಹಬ್ಬವಾಗಿ ಸಂತಸವನ್ನು ತರುವ ಶ್ರೇಷ್ಠ ದಿನವಾಯಿತು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.