ಮಾಹೇಶ್ವರನ ಮಾಹೇಶ್ವರಸ್ಥಲ - ಸದಾಚಾರ
ಕಳಹೋದರೆ ಕನ್ನದುಳಿಯ ಹಿಡಿವೆ:
ಬಂದಿವಿಡಿದರೆ ನಿಮ್ಮಿಂದ ಮುಂದೆ ನಡೆವೆ;
ಮನಭೀತಿ-ಮನಶಂಕೆಗೊಂಡೆನಾದರೆ
ನಿಮ್ಮಾಣೆ, ನಿಮ್ಮ ಪುರಾತನರಾಣೆ!
ಆಳ್ದರ ನಡೆ ಸದಾಚಾರವೆನ್ನದಿದ್ದರೆ,
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ,
ಕೂಡಲಸಂಗಮದೇವಾ.
Transliteration Kaḷahōdare kannaḍada hiḍive:
Bandiviḍidare nim'minda munde naḍeye;
manabhīti-manaśaṅkegoṇḍenādare
nim'māṇe, nim'ma purātanarāṇe!
Āḷdara naḍe sadācāravennadiddare,
kaṭṭāḷu śiṣṭatanakke hōha kaṣṭava nōḍā,
kūḍalasaṅgamadēvā.
Manuscript
English Translation 2 If you would rob, I hold the robber's tool:
If you're held captive, I march
A step ahead of you.
If I should entertain
Fear in my heart of doubt,
Let your curse fall upon me, and
Your pioneers curse!
If I should fail to say
My master's acts are righteous deeds,
Look you, there comes a breach
In the servant's discipline,
O Kūḍala Saṅgama Lord!
Translated by: L M A Menezes, S M Angadi
Hindi Translation चोरी करने जाये, तो सेंध की छेनी पकडूँगा;
बंदी बनाओगे, तो तुम से आगे चलूँगा;
मन में भय या शंका रखूँ ,
तो तव सौगंध है, तव पुरातनों की सौगंध है,
प्रभु के आचार को सदाचार न कहूँ,
तो निष्टापूर्ण शिष्ष्टता का भंग होगा,
कूडलसंगमदेव ॥
Translated by: Banakara K Gowdappa
Telugu Translation దొంగతనమునకు పోవ కన్నమువై తు ముందె
బందిపడిపోవ నడతు నీకంటే ముందె;
మది జంకుగొంకులు మసలి నటైన
నీవే సాక్షి; నీ పురాతునులే సాక్షి
స్వామి నడత సదాచారమనకున్న
సద్భటుని భటుత్వమునకు చేటురా సంగమదేవా!
Translated by: Dr. Badala Ramaiah
Tamil Translation களவாயின் கன்னக் கோலைப்பிடிப்பேன்
சிறைபிடிப்பின் உம்மை விட்டு முன்னால் செல்வேன்
மனத்தில் அச்சம், நடுக்கம் வரின்
உம்மாணை, உம் பழைமையோர் மீது ஆணை
ஆள்பவர் நன்னெறியின்றி ஒழுகின்
நெறிமிக்க தொண்டர் கெட்ட கேட்டினைக்
காணாய் கூடல சங்கமதேவனே.
Translated by: Smt. Kalyani Venkataraman, Chennai
Marathi Translation
चोरी करण्यास जाताना पहार घेऊन जातो.
पकडला गेलो तर तुमच्या आधी बंधीत होईन.
मनात भिती अथवा शंका आली तर
तुमची शपथ, तुमच्या पुरातनांची शपथ,
शरणांच्या सदाचाराविषयी काही बोलणार नाही.
निष्ठावान सेवक बनून कायदेनुसार कार्य करीत
जगण्यातील कष्ट पहा कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಆಣೆ = ಅವಡೆ ಅಪ್ಪಳಿಸು; ಆಳ್ದರು = ಆಳಿದರು; ಕನ್ನದ = ; ಪುರಾತನರು = ಹಿಂದಿನ ಶರಣರು; ಭೀತಿ = ಭಯ; ಶಂಕೆ = ಅನುಮಾನ; ಶಿಷ್ಟತನ = ಒಳ್ಳೆಯತನ; ಸದಾಚಾರ = ಸನ್ನಡತೆ; ಹೋಹ = ;
ಕನ್ನಡ ವ್ಯಾಖ್ಯಾನ ಶರಣರು ಹೇಳಿದ್ದನ್ನು ಮಾಡುವುದಷ್ಟೇ ಹೊರತು-ಅದನ್ನು ಸಂಶಯಿಸುವುದು ಪ್ರಶ್ನಿಸುವುದು ತಮ್ಮ ಕೆಲಸವಲ್ಲವೆನ್ನುತ್ತ ಶರಣರ ಧರ್ಮವ್ಯವಸ್ಥೆಯಲ್ಲಿ ತಾವೊಬ್ಬ ಶಿಸ್ತಿನ ಸಿಪಾಯಿಯೆಂಬುದನ್ನು ಬಸವಣ್ಣನವರು ಈ ವಚನದ ಮೂಲಕ ಶ್ರುತಪಡಿಸಿರುವರು. ಹೀಗೆಂಬ ಈ ವಚನದ ಆಶಯವನ್ನು ಗ್ರಹಿಸಲಾರದೆ ಪುರಾಣಿಕರು ಗೊಂದಲಿವೆಬ್ಬಿಸಿರುವರು.
ಕನ್ನದ ಬ್ರಹ್ಮಯ್ಯನೆಂಬ ಭಕ್ತನೊಬ್ಬನು ರಾಜಭಂಡಾರಕ್ಕೆ ಕನ್ನವಿಕ್ಕಲು ಬಸವಣ್ಣನವರ ಸಹಾಯವನ್ನು ಯಾಚಿಸಿದುದಾಗಿಯೂ ಅದಕ್ಕೆ ಪ್ರತ್ಯುತ್ತರವಾಡದೆ ಬಸವಣ್ಣನವರು ಆ ಕಳ್ಳ(ಭಕ್ತ)ನಿಗೆ ಸಹಾಯಕರಾಗಿ ನಿಂತರೆಂಬ ಸಂದರ್ಭವನ್ನು ಸೃಷ್ಟಿಸಿಕೊಂಡು ಸಿಂಗಿರಾಜುನು ಅಲ್ಲಿ ಈ ವಚನವನ್ನು ಉಲ್ಲೇಖಿಸಿರುವನು (ಸಿಂಗಿರಾಜಪುರಾಣ 17-8ವ). ಅವನ ಪ್ರಕಾರ ಕಳ್ಳ ಸಿಕ್ಕಿಬಿದ್ದಾಗ ಕನ್ನ ಕೊರೆದ ಮಣ್ಣನ್ನೆಲ್ಲ ಬಸವಣ್ಣನವರು ಚಿನ್ನಮಾಡಿ ತೋರಿ ಬಿಜ್ಜಳನ ಬಾಯಿಮುಚ್ಚಿಸಿದರು. ಈ ಪುರಾಣಕಥೆಯ ಪ್ರಕಾರ ಮಣ್ಣು ಚಿನ್ನವಾಯಿತು –ಆದರೆ ಬಸವಣ್ಣನವರ ಚಾರಿತ್ರ ಮಣ್ಣಾಯಿತು. ಈ ಬಗ್ಗೆ ಸಿಂಗಿರಾಜನನ್ನು ಪ್ರಶ್ನಿಸಿದರೆ –ಆ ಮಣ್ಣನ್ನು ಚಿನ್ನ ಮಾಡಿದರಾಗಿ ಬಸವಣ್ಣನವರು ಮಹಾತ್ಮರು ಎನ್ನುವನು. ಹೀಗಾಗಿ ಪುರಾಣಕಾರರು ತಮ್ಮ ಕಥಾನಾಯಕನು ಕಳ್ಳನೆನಿಸಿದರೂ ಸರಿಯೇ ಪವಾಡಪುರುಷರೆಂಬಂತೆ ಕಾಣಬೇಕೆಂಬ ಹುಂಬರು.
ಇವರ ಪ್ರಕಾರ ಭಕ್ತರು ಕಳ್ಳರಾದರೂ –ಅವರ ಕಾಯಕಕ್ಕೆ ಸಹಾಯ ಮಾಡುವುದು ತಮ್ಮ ಪವಿತ್ರ ಕಾರ್ಯವೆಂದು ಬಸವಣ್ಣನವರು ಸ್ವತಃ ತಿಳಿದಿದ್ದರೆಂದಂತಾಯಿತು. ಆ ಮೂಲಕ ಕಾಯಕಕಲ್ಪನೆಗೆ ಮತ್ತು ಆ “ಕಳಬೇಡ ಕೊಲಬೇಡ”ವೆಂಬ ಬಸವಣ್ಣನವರ ಜೀವನಮೌಲ್ಯಕ್ಕೆ (ನೋಡಿ ವಚನ 236) ಅಪಚಾರವಾಯಿತು.
ಈ ವಚನದಲ್ಲಿ ಬಸವಣ್ಣನವರು ಹೇಳಿರುವುದು-ಶಿವಭಕ್ತರು ಕಳ್ಳತನದ ಕಾಯಕದವರಾದರೆ ಅವರಿಗೆ ಕನ್ನಗತ್ತರಿಯನ್ನು ಹಿಡಿದು ಸಹಾಯ ಮಾಡುವೆನೆಂದಲ್ಲ. ಅವರು ಸಿಕ್ಕಿಬಿದ್ದರೆ ಅವರಿಗೆ ಜಾಮೀನಾಗಿ ಅವರಿಗಿಂತ ಮುಂಚಿತವಾಗಿ ತಾವೇ ಬಂದಿಯಾಗುವೆನೆಂದಲ್ಲ. ಸದಾಚಾರಿಗಳಾದ ಭಕ್ತರು ನನ್ನ ಒಡೆಯರಾದ್ದರಿಂದ ಅವರ ವರ್ತನೆಯನ್ನು ಪ್ರಶ್ನೆ ಮಾಡದೆ ಅವರ ಆಜ್ಞಾನುವರ್ತಿಯಾಗಿರುವುದು ನನ್ನ ಕರ್ತವ್ಯವೆನ್ನುತ್ತ-ಆ ತಮ್ಮ ವಿಧೇಯತೆಯ ತೀವ್ರತೆಯನ್ನು ಪ್ರಕಟಿಸಲೋಸ್ಕರ-ಆ ಭಕ್ತರನ್ನು ಯಾರಾದರೂ ಕಳ್ಳರೆಂದು ಆರೋಪಿಸಿದರೆ ಆ ಆರೋಪಕ್ಕೆ ಅವರಿಗಿಂತ ಮೊದಲು ನಾನೇ ಪಾತ್ರನೆನ್ನುತ್ತ ಆ ಶಿವಭಕ್ತರ ಪರವಹಿಸಿ ಬಂದಿಯಾಗಲೂ ನಾನು ಸಿದ್ಧನೆಂಬ ಅರ್ಥದಲ್ಲಿ ಬಸವಣ್ಣನವರು ಈ ವಚನವನ್ನು ಹಾಡಿರುವರು. ಭಕ್ತರ ಸನ್ನಡತೆಯ ಬಗ್ಗೆ ಅವರಿಗೆ ಅಷ್ಟು ಖಾತ್ರಿ. (ವಚನ 721 ನೋಡಿ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು