•  
  •  
  •  
  •  
Index   ವಚನ - 699    Search  
 
ಮಾಹೇಶ್ವರನ ಮಾಹೇಶ್ವರಸ್ಥಲ - ಹುಟ್ಟು-ಸಾವು
ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ: ಹಾಳುಗೆಟ್ಟೋಡುವ ಆಳು ನಾನಲ್ಲಯ್ಯಾ; ಕೇಳು, ಕೂಡಲಸಂಗಮದೇವಾ, ಮರಣವೇ ಮಹಾನವಮಿ!
Transliteration Jōḷavāḷiyanalla, vēḷevāḷiyava nānayyā: Hāḷugeṭṭōḍuva āḷu nānallayya; kēḷu, kūḍalasaṅgamadēvā, maraṇavē mahānavami!
Manuscript
English Translation 2 Not I the man to serve For wages; I am a servant at a time of need; Not I a servant to take flight. Hear me, Kūḍala Saṅgama Lord, Death is to me A solemn festival! Translated by: L M A Menezes, S M Angadi
Hindi Translation मैं वेतनभोत्री नहीं हूँ समय-बद्ध सेवक हूँ, नष्ट भ्रष्ट होकर भागनेवाला भृत्य नहीं हूँ; सुनो कूडलसंगमदेव, मरण ही महानवमी है ॥ Translated by: Banakara K Gowdappa
Telugu Translation కూటికై గొల్చు కూలివాడగాను కష్టములకు నిల్చు భటుడనయ్యా పనిచెఱచి పరుగిడు భటుడగానయ్యా వినుమో స్వామీ! మరణమే మహానవమి Translated by: Dr. Badala Ramaiah
Tamil Translation நான் நன்றிக்கடன் பட்டவனில்லை ஐயனே உடையருக்கு உயிர் ஈவோன் நான் ஐயனே பாழாகிக் கெட்டு ஓடுபவன் நான் இல்லை ஐயனே கூடல சங்கம தேவனே, கேளாய் மரணமே மகாநவமி ஐயனே. Translated by: Smt. Kalyani Venkataraman, Chennai
Marathi Translation पोटार्थी खादाड, सेवक मी नोहे घाण करीत राहे, ऐसा न मी न पाही न वेळ, कार्यरत राही कामचोर पाही, ऐसा न मी कूडलसंगमेशा ऐकुनिया घेई मरण माझ्या पाई, महानवमी अर्थ- हे प्रभो ! मी पोटार्थी, खादाड असा घाण करणारा सेवक नव्हे. केवळ वेळेकडे पाहणारा व पगार घट्ट करणारा ऐसा कामचोर सेवक नव्हे. हे कूडलसंगमदेवा ! (परशिवा) मरण माझ्यासाठी महानवमीच समजेन आणि सदा सतर्क राहून तुझ्या धर्माचे पालन करेन. Translated by Rajendra Jirobe, Published by V B Patil, Hirabaug, Chembur, Mumbai, 1983 पोट भरणारा सेवक मी नाही, धर्मपालक मी आहे देवा. नष्ट करून पळून जाणारा सेवक मी नाही देवा. ऐक कूडलसंगमदेवा मला `मरण हीच महानवमी` Translated by Shalini Sreeshaila Doddamani
ಶಬ್ದಾರ್ಥಗಳು ಜೋಳವಾಳಿ = ಅನ್ನದ ಹಂಗು, ಸ್ವಾಮಿಭಕ್ತಿ; ಮಹಾನವಮಿ = ; ವೇಳೆವಾಳಿ = ಸಮಯ ಪಾಲನೆ; ಹಾಳು = ನಾಶ;
ಕನ್ನಡ ವ್ಯಾಖ್ಯಾನ ರಾಜಸೇವಕರಲ್ಲಿ ಎರಡು ವಿಧ -ಪಡೆದ ಜೀವನಾಂಶಕ್ಕಾಗಿ ದುಡಿಯುವವರು “ಜೋಳಿವಾಳಿ”ಗಳು. ಇವರು ರಾಜನ ಆಡಳಿತಾಂಗಕ್ಕೆ ಸಂಬಂಧಿಸಿದವರು. ರಾಜ ಸತ್ತರೆ ಅವನ ಜೊತೆಯಲ್ಲಿ ಇವರೂ ಸಾಯಬೇಕೆಂಬುದೇನೂ ನಿಯಮವಿರಲಿಲ್ಲ. “ವೇಳಿವಾಳಿ”ಗಳೆಂಬ ಇನ್ನೊಂದು ವರ್ಗದವರು ರಾಜನ ವೀರಯೋಧರೋ ಅಂಗರಕ್ಷಕರೋ ಆಗಿದ್ದು ನೇರವಾಗಿ ಆ ರಾಜನ ರಕ್ಷಣಾಂಗಕ್ಕೆ ಸೇರಿದವರು. ರಾಜ ಸತ್ತರೆ ಇವರೂ ಆತ್ಮಾರ್ಪಣ ಮಾಡಿಕೊಂಡು ಸಾಯುತ್ತಿದ್ದರು. ಇಂಥವರು ಗರುಡರೆಂಬ ಹೆಸರಿಂದ ಹೊಯ್ಸಳರ ಕಾಲದ ಇತಿಹಾಸದಲ್ಲಿ ಗುರುತಿಸಲ್ಪಡುವರು. ಅನ್ಯತ್ರ ಇವರನ್ನು ಲೆಂಕರೆಂದೂ ಕರೆಯಲಾಗುತ್ತಿತ್ತು. (ನೋಡಿ ವಚನ 731) ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ತಮ್ಮ ತಮ್ಮ ಆರಾಧ್ಯ ದೈವಕ್ಕೆ ಪ್ರಾಣಾರ್ಪಣ ಮಾಡಿಕೊಳ್ಳುತ್ತಿದ್ದ ಒಂದು ವೀರ(ಭಕ್ತ)ವರ್ಗ “ಶಿವಸೋದರ” ಮುಂತಾದ ಹೆಸರಿಂದ ಬಹುಮಟ್ಟಿಗೆ ಬಸವ ಪೂರ್ವಕಾಲದಲ್ಲಿ ಮತ್ತು ಕ್ವಚಿತ್ತಾಗಿ ಬಸವಸಮಕಾಲದಲ್ಲಿಯೂ ಇದ್ದುದನ್ನು ಗುರುತಿಸಬಹುದು. ಈ ಹಿನ್ನಲೆಯಲ್ಲಿ ಬಸವಣ್ಣನವರು ಶಿವನಿಗೆ ತಾವೊಬ್ಬ ವೇಳೆವಾಳಿಯೆಂಬಂತೆ ಅರಿಕೆ ಮಾಡಿಕೊಳ್ಳುತ್ತಿರುವರು. ಶಿವಸಮಯವನ್ನು ರಕ್ಷಿಸಲಾರದ ವಿಪನ್ನಾವಸ್ಥೆ ಒದಗಿದಲ್ಲಿ ಪ್ರಾಣಾರ್ಪಣೆ ಮಾಡಲಾದರೂ ಅವರು ಸಿದ್ಧರಾಗಿದ್ದವರೇ ಹೊರತು –ಆಶಿವದೊಡನೆ ರಾಜಿಮಾಡಿಕೊಂಡು ಬದುಕುವ ಹೇಡಿಗಳಾಗಿರಲಿಲ್ಲ ಬಸವಣ್ಣನವರು, ಸಾಧಿಸಬೇಕಾದ್ದನ್ನು ಸಾಧಿಸುವುದಕ್ಕಾಗಿ ಅಥವಾ ಅದನ್ನು ಸಾಧಿಸಲು ಆಗದಾಗ –ಆ ಕಾರಣಕ್ಕಾಗಿಯೇ ಸಾಯಲೂ ತಾವು ಹಿಂಜರಿಯುವುದಿಲ್ಲವೆಂಬುದಾಗಿ ಅವರು ಹೇಳಿಕೊಂಡಿರುವರು. ಮರಣವೆನ್ನುವುದು ಅವರಿಗೆ ದುರ್ವ್ಯವಸ್ಥೆಯ ಮೇಲೆ ಎತ್ತಿ ನಡೆದ ದಾಳಿಯಂತೆ ಉತ್ಸಾಹಭರಿತವಾದುದಾಗಿತ್ತೇ ಹೊರತು ಎಳೆಯುವ ಯಮಕಿಂಕರರ ಕಾಲ ಬಳಿ ದೇಕುವುದಾಗಿರಲಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು