ಮಾಹೇಶ್ವರನ ಮಾಹೇಶ್ವರಸ್ಥಲ - ಕರ್ಮ
ಕರ್ಮವೆಂಬ ಅಂಕದೊಡನೆ ತೊಡರಿದೆ;
ಬಿನ್ನಪವನವಧಾರು, ನಿಮ್ಮಾಳಿನ ಭಾಷೆಯ:
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ,
ಕರೆದರೋ ಎನಿಸಿದರೆ ನಿಮ್ಮಾಳಲ್ಲಾ,
'ಶಿವಶರಣೆಂ'ಬ ದಂಡೆಯ ಹೂಡಿ
ಗಣಮೇಳಾಪವೆಂಬಲಗಿನಿಂದಿರಿವೆ,
ಕೂಡಲಸಂಗಮದೇವಾ.
Transliteration Karmavemba aṅkadoḍane toḍaride;
binnapavanavadhāru, nim'māḷina bhāṣeya:
Kaḍegaḷakke nūṅkuve, keḍahuvenaṅkava,
karedarō enisidare nim'māḷalla,
'śivaśaraṇeṁ'ba daṇḍeya hūḍi
gaṇamēḷāpavembalaginindirive,
kūḍalasaṅgamadēvā.
Manuscript
English Translation 2 I'm up in arms against
A warrior- Karma his name;
Hearken unto my prayer -Thy servant's word
"I'll push this warrior to the battle's edge
I'll lay him low: "Should I hide or withdraw
I'm not Thine."
I will draw up the battle-array:
"I bow to Thee, Lord!" and wield the sword
Of the congregation of the saints,
O Kūḍala Saṅgama Lord!
Translated by: L M A Menezes, S M Angadi
Hindi Translation कर्म संग्राम में संलग्न हूँ;
मेरी बिनती सुनो,
तव भृत्य की प्रतिज्ञा है योद्धा को
युद्ध भूमि के छोर तक ढकेलकर गिरा दूंगा ।
बुलाने पर उत्तर न दूँ, तो तव भृत्य नहीं हूँ ।
शिवशरण रूपी सेना सुसज्जित कर
गणसमूह रूपी कटार भोंक दूँगा
कूडलसंगमदेव ॥
Translated by: Banakara K Gowdappa
Telugu Translation కర్మ అను ప్రతి భటునితో తలపడితి
వినవయ్యా నీ భటుని మాట
పడదొక్కి నీ ప్రతిభటుని పాఱదోలెద
తోలుచు నిను పిలుతునా! నీ భటుడ నేగాను
శరణనుదండ మెడకు తొడగి; గణ మేళమను
కత్తితో పొడుతు కూడల సంగమ దేవా!
Translated by: Dr. Badala Ramaiah
Tamil Translation கர்மம் எனும் போர்க்களத்தில் சிக்கினேன்
இறைவனே உம் தொண்டனின் சூளுரை விண்ணப்பம்
போர்க்கள எல்லையில் தள்ளுவேன், வீழ்த்துவேன்
பின்னடைந்தேனெனின் உம் தொண்டனல்ல
சிவனுக்குத் தஞ்சம் எனும் நாணினைப் பூட்டி
கணங்களுடன் கூடியிருத்தல் எனும்
கூரம்பினைப் பொழிவேன் கூடல சங்கமதேவனே.
Translated by: Smt. Kalyani Venkataraman, Chennai
Marathi Translation
कर्मरुपी हत्यार घेऊन जात आहे.
निवेदन ऐकावे, तुमच्या सेवकाची भाषा.
युध्दभूमीवर शत्रूला खाली पाडतो,
युध्दभूमीवरून बाहेर ढकलतो.
युध्द घोषणा ऐकून आलो नाही तर तुमचा सेवक नाही.
लिंगदेव शरणरुपी सैन्याने घेरून जाऊन गणसमुहरुपी
तलवारीने भोकतो स कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಂಕ = ಸೈನಿಕ ಭಟ ಯುದ್ದ ಕಾಳಗ; ಅಲಗು = ; ಆವಧಾರು = ಲಕ್ಷಕೊಡು; ಕಡೆಗಳ = ರಣರಂಗದ ಕಡೆಯ ಮೂಲೆ; ಕಡೆಹು = ನಾಶ; ಕರ್ಮ = ಕೆಲಸ; ಗಣಮೇಳ = ಶಿವನ ಸಂಗಡಿಗರ ಮೇಳ; ತೊಡರು = ಆಭರಣ; ದಂಡೆ = ದಡ; ಭಿನ್ನಪ = ವಿಜ್ಞಾಪನೆ; ಹೂಡಿ = ;
ಕನ್ನಡ ವ್ಯಾಖ್ಯಾನ ಪಾಪಭೀರುಗಳಾದ ಭಾರತೀಯರಿಗೆ ಕರ್ಮವೆಂಬುದೊಂದು ಮೂರು ಆಯಾಮದ ಸರ್ಪ. ಅದರ ಉದ್ದವು ಭೂತ-ವರ್ತಮಾನ-ಭವಿಷ್ಯದವರೆಗೆ ಚಾಚಿಕೊಂಡಿರುವುದು, ಅಗಲವು ನಿತ್ಯವ್ಯವಹಾರಗಳೆಲ್ಲದರಲ್ಲಿ ಹರಡಿಕೊಂಡಿರುವುದು, ಎತ್ತರವು ಸ್ವರ್ಗನರಕ ಚತುರ್ದಶಲೋಕಗಳಿಗೆ ನಿಲುಕಿಕೊಂಡಿರುವುದು.
ಒಬ್ಬ ಪ್ರಾತಿನಿಧಿಕ ಭಾರತೀಯರ ಪ್ರಕಾರ ಅವನು ಧರಿಸಿರುವ ದೇಹಕ್ಕೆ ಈ ಕರ್ಮವೇ ಕಾರಣ, ಆ ಕಾರಣದಿಂದಾಗಿಯೇ ಮರಳಿ ಕರ್ಮಗಳನ್ನು ಮಾಡುವನು, ಆ ಕರ್ಮದಿಂದಾಗಿಯೇ ಮರುದೇಹವನ್ನು ಪಡೆಯುವನು. ಹೀಗೆ ಜನ್ಮಜನ್ಮದಲ್ಲಿಯೂ ಮರುಳುಗಾಡಿನಿಂದ ಮೊರಡಿಗೆ, ಮೊರಡಿಯಿಂದ ಹಿಮದ ಬಯಲಿಗೆ –ಅಲ್ಲೊಂದು ಬೋರೆ ಇಲ್ಲೊಂದು ಕಾರೆ ಮುಂದೊಂದು ಕುದಿವನೀರಿನ ಬುಗ್ಗೆಯನ್ನು ಕಾಣುತ್ತ ನಿಲ್ಲಲು ನೆಲೆಯಿಲ್ಲದೆ ನಿರಂತರ ಪ್ರಯಾಣ ಮಾಡುತ್ತಿರುವನು.
ಸಂಚಿತ-ಪ್ರಾರಬ್ಧ ಆಗಾಮಿಯೆಂದು ಶಿಷ್ಟರು ಕರೆಯುವ ಈ ಕರ್ಮವು ದೇಹ ಸ್ವಚ್ಛವಿಲ್ಲದ ಮನಶ್ಶುದ್ಧಿಯಿಲ್ಲದ ಸಂಕಲ್ಪ ದೃಢವಿಲ್ಲದ ಎಲ್ಲಾ ಜೀವಿಗಳನ್ನೂ ಬೆನ್ನು ಹತ್ತಿ ಕಾಡುತ್ತಿರುವುದು.
ಅಂಕವೆಂದರೆ ಯುದ್ಧಕ್ಕೆ ಸಿದ್ಧವಾಗಿ ನಿಂತಿರುವ ಈ ಕರ್ಮದ ಕಲಿ. ಅದರೊಡನೆ ಸೆಣಸಾಡುತ್ತಿರುವರು ಬಸವಣ್ಣನವರು. ಅವರ ದಿಟ್ಟತನಕ್ಕೆ ಮೆಚ್ಚಿ -ಶರಣಾಗತನಾಗು ಜೀವದಿಂದ ಉಳಿಸಿಬಿಡುವೆನೆಂದು ಆ ಕರ್ಮದ ಕಲಿ ಆ ಬಸವಣ್ಣನವರಿಗೆ ಕರೆಯಿತ್ತರೆ ಅವರು ಒಪ್ಪುವುದಿಲ್ಲ. ಶಿವನ ಬಂಟರಾದ ಅವರಿಗೆ ಯಾವ ದುಷ್ಟ ಶಕ್ತಿಯೊಡನೆಯೂ ಒಪ್ಪಂದ ಬೇಕಾಗಿಲ್ಲ.ತಮ್ಮ ಶಿವಶರಣರೆಂಬ ಪಟ್ಟು ಬಿಡದೆ, ಶಿವಶರಣ ಸೇವೆಯೆಂಬ ಖಡ್ಗಹಿಡಿದು ಆ ಕಲಿಯನ್ನು ಜೀವನದ ಅಖಾಡದಿಂದ ಆಚೆಗೆ ತಳ್ಳಿ ಬೀಳಿಸಿ ಇರಿದೇ ತೀರುವೆನೆಂಬ ಇರಿವ ಬೆಡಂಗರು ಬಸವಣ್ಣನವರು, ಈ ಸಂಬಂಧವಾಗಿ ಅವರು ಮಾಡಿದ ಪ್ರತಿಜ್ಞಾವಾಕ್ಯವೇ ಆಗಿದೆ ಈ ವಚನ. (ನೋಡಿ ವಚನ 171).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು