ಮಾಹೇಶ್ವರನ ಮಾಹೇಶ್ವರಸ್ಥಲ - ಕರ್ಮ
ಗರುಡಿಯ ಕಟ್ಟಿ, ಅರುವತ್ತುನಾಲ್ಕು ಕೋಲಭ್ಯಾಸವ ಮಾಡಿದೆನಯ್ಯಾ:
ಇರಿವ ಘಾಯ, ಕಂಡೆಯ ಭೇದವಿನ್ನೂ ತಿಳಿಯದು!
ಪ್ರತಿಗರುಡಿಕಾರ ಬಿರುದ ಪಾಡಿಂಗೆ ಒದಗಲು,
ವೀರಪಟ್ಟೆಯ ಕಟ್ಟಿ, ತಿಗುರನೆರಿಸಿಕೊಂಬೆ.
ಗುರುಕಳನೇರಿ, ಕಠಾರಿಯ ಕೊಂಡಲ್ಲಿ
`ಹೋಯಿತ್ತು ಗಳೆ' ಎಂದರೆ
ಎನ್ನ ನಿನ್ನಲ್ಲಿ ನೋಡು, ಕೂಡಲಸಂಗಮದೇವಾ!
Transliteration Garuḍiya kaṭṭi, aruvattunālku kōlabhyāsava māḍidenayyā:
Iriva ghāya, kaṇḍeya bhēdavinnū tiḷiyadu!
Pratigaruḍikāra biruda pāḍiṅga odagalu,
vīrapaṭṭeya kaṭṭi, tiguranerisikombe.
Guru kaḷanēri, kaṭhāriya koṇḍalli
`hōyittu gaḷe' endare
enna ninnalli nōḍu, kūḍalasaṅgamadēvā!
Manuscript
English Translation 2 Girding myself for exercise,
I practised four and sixty shots
Of archery; and yet I'm ignorant
How one inflicts a wound, or what
The secret of a sword!
Whenever they extol
The title of an adversary,
I tie me up the champion's sash
And get me rubbed with unguent o'er.
If, as he mounts, the ring and takes the sword,
I cry, 'My weapon's gone,'
See me in your own self,
O Kūḍala Saṅgama Lord!
Translated by: L M A Menezes, S M Angadi
Hindi Translation अखाडा बनाकर मैं ने चौंसठ युद्ध-विद्याओं का अभ्यास किया
प्रहार का घाव शस्त्र भेद मैं अभी नहीं जानता।
विरुद्धार्थ कोई प्रतिद्वंद्वी मिल जाय
तो वीर-पटका बाँध, सुगंध द्रव्य लगा लूँगा।
घोर रण में कूदकर खङ्ग धारण कर यदि कहूँ,
शस्त्र छूट गया, तो मुझे अपने में देख लो,
कूडलसंगमदेव ॥
Translated by: Banakara K Gowdappa
Telugu Translation కచ్చె గట్టి అరవై నాల్గు శరవిద్యల నేర్చితినయ్యా; కాని
కత్తిపోటు కండ భేదమింకనూ తెలియనయ్యా,
ప్రతివీరుడే తేర ; బిరుదు పాడి, వీరపట్టముగట్టి
ఎత్తికొందుగురుని యొరగలకఠారి బట్టిన
శరము చేజారెనా? నన్ను నీలో చూడుమ కూడల సంగయ్యా!
Translated by: Dr. Badala Ramaiah
Tamil Translation உடற்பயிற்சி சாலையைக் கட்டிப் பலவகையான
போர்முறைகளைப் பயிற்சி செய்தால் என்ன ஐயனே?
வாளினால் ஏற்படும் பலவகையான
காயங்களின் வேறுபாட்டை அறியேன்
ஒவ்வொரு வீரனும் ஏளனத்துடன் மேலே வீழ்கையில்
வீரப்பட்டத்தைக் கட்டிக் கொண்டு, மஞ்சள் பொடியைப்
பூசிக் கொண்டு எதிர்த்தேன். களத்திலே குரு
வருகைபுரிந்து, கடாரியைக் கொண்டபொழுது
“பாணம் சென்றது” எனின், என்னை உன்னிடம்
காண்பாய், கூடல சங்கம தேவனே.
Translated by: Smt. Kalyani Venkataraman, Chennai
Marathi Translation
आखाडा तयार करुन, लाठीचे चौसष्ट प्रकार शिकलो,
समोरचा घाव, सर्व घाव जाणून घेतले नाही.
प्रतिद्वंदीच्या (जंगमाच्या) ललकारीने हत्यार उचलून,
मातीचा तिलक धारण करतो. गुरुचे नाव घेऊन तलवारीचा घाव घालतो.
हारलो तर आपले नाव सांगणार नाही.
तेव्हा मला तुम्ही, तुमच्यात पहावे कूडलसंगमदेवा
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಗರುಡೀಮನೆ ಮಾಡಿ ಅರುವತ್ತು ನಾಲ್ಕು ವಿಧವಾದ ಶಸ್ತ್ರಾಭ್ಯಾಸ ಮಾಡಿದರೇನು –ಯಾವ ಘಾಯದ ಆಯಕಟ್ಟಿನ ಯಾವ ಆಯುಧ ಬಳಸಬೇಕೆಂಬುದು ತಿಳಿಯಲಿಲ್ಲ. ಪ್ರತಿಯೋಧನು ನನ್ನ ಬಿರುದನ್ನು ಮೂದಲಿಸುತ್ತ ಮೇಲೆಬಿದ್ದಾಗ ವೀರಖಡ್ಗವನ್ನು ಹಿಡಿದು ವೀರಗಂಧವನ್ನು ಬಳಿದುಕೊಂಡು ಆ ಶತ್ರುವನ್ನು ಎದುರಿಸಿದಾಗ ನಿಜಯುದ್ಧವೆಂದರೇನೆಂದು ತಿಳಿಯಿತು. ಹಾಗೆ-ಸೇವಾರಣಾಂಗಣದಲ್ಲಿ ಗುರುವು ಮುಖಾಮುಖಿಯಾಗಿ ಸೇವಾಕಾಂಕ್ಷೆಯನ್ನು ಹಿಡಿದನೆಂದಾಗ (ಕಠಾರಿಯ ಕೊಂಡಲ್ಲಿ) ನನ್ನ ಗುರುಭಕ್ತಿ (ಗಳೆ) ಲೋಪವಾಯಿತೆಂದರೆ ನಾನಿನ್ನು ಬದುಕಿರುವುದಿಲ್ಲ-ಎಂದು ಬಸವಣ್ಣನವರು ಶಿವಪೂಜಾಸಂದರ್ಭದಲ್ಲಿ ಪ್ರತಿಜ್ಞೆಯನ್ನು ಕೈಗೊಳ್ಳುವರು. ಗುರುಭಕ್ತಿಯ ಮಹಿಮೆ ತಿಳಿಯುವುದು ಗುರುಭಕ್ತಿಯನ್ನು ಸ್ವತಃ ಮಾಡಿದಾಗಲೇ ಎಂಬುದು ತಾತ್ಪರ್ಯ.
ಅಥವಾ -ಲಿಂಗಧಾರಣೆಯಾಗಿ ಅರುವತ್ತು ನಾಲ್ಕು ನೇಮಗಳನ್ನು ನಡೆಸಿದ ಮಾತ್ರಕ್ಕೇ ಶಿವನನ್ನು ಒಲಿಸಿದಂತಾಗುವುದಿಲ್ಲ. ನಿನ್ನ ಸರ್ವಸ್ವವನ್ನೂ ನನಗೆ ಧಾರೆಯೆರೆದುಕೊಡು –ಎಂದು ಗುರು ಬಂದು ಮುಂದೆ ನಿಂತಾಗ -ಶಿವನನ್ನು ನಾವು ಒಲಿಸಬಲ್ಲೆವೋ ಇಲ್ಲವೋ ಎಂಬುದು ಪ್ರಕಟವಾಗುವುದು. ಗುರು ಪ್ರಸನ್ನವಾಗುವುದಿಲ್ಲ –ಎನ್ನುತ್ತ ಬಸವಣ್ಣನವರು ತಮ್ಮಿಂದ ಇಂಥ ಗುರುಸೇವೆ ನಡೆಸಲಾಗದೆಂದ ಮೇಲೆ ತಾವು ಬದುಕಿರುವುದಿಲ್ಲವೆಂದು ಶಪಥ ಮಾಡುತ್ತಿರುವರು. (ಗಳೆ ಎಂಬ ಪ್ರಯೋಗಕ್ಕೆ 436ನೇ ವಚನವನ್ನು ನೋಡಿ)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು