ಮಾಹೇಶ್ವರನ ಮಾಹೇಶ್ವರಸ್ಥಲ - ಶರಣರ ಸಂಗ
ಶರಣರೊಡನೆ ಶ್ರವವ ಮಾಡಿ, ಮಾರುಗೋಲ ಬಿಡುವೆನಯ್ಯಾ:
ತಾಗಲಿ, ತಪ್ಪಲಿ ʼಗೆಲವೆನ್ನದೆಂಬೆʼನಯ್ಯಾ.
ಕಳನಿಂದ ಕಡೆಗಳಕ್ಕೆ ಓಡುವೆ, ಕೂಡಲಸಂಗಯ್ಯಾ.
Transliteration Śaraṇaroḍane śravava māḍi, mārugōḷa biḍuvenayyā:
Tāgali, tappali ʼgelavennadembeʼnayyā.
Kaḷaninda kaḍegaḷige ōḍuve, kūḍalasaṅgayya.
Manuscript
English Translation 2 Drilling with Śaraṇās I let go
Arrow for arrow ; hit or miss
I do not say the issue is mine.
Off from the field I run
To its last edge, O Lord
Kūḍala Saṅga!
Translated by: L M A Menezes, S M Angadi
Hindi Translation शरणों के साथ व्यायाम कर
बाण के प्रति बाण छोडूँगा;
लगे या न लगे, कहूँगा, जीत मेरी है ।
मैदान के छोर तक खदेड दूँगा,
कूडलसंगमदेव ॥
Translated by: Banakara K Gowdappa
Telugu Translation శరణులతో గూడి అభ్యసించితి
ప్రతి శరము ప్రయోగింతునయ్యా,
తాకినా; తప్పినా గెలుపు నాది కాదయ్యా
రణమున తుదిదాక పోరెద కూడల సంగయ్యా!
Translated by: Dr. Badala Ramaiah
Tamil Translation சரணருடன் பயிற்சி செய்து எதிர்
பாணத்தை விடுவேன் ஐயனே
பாணம் பட்டாலும், படாவிடினும்
வெற்றி என்னுடையது என்பேன் ஐயனே
களத்தை விட்டு, எல்லைக்கு ஓடுவேன்
ஐயனே, கூடல சங்கமதேவனே.
Translated by: Smt. Kalyani Venkataraman, Chennai
Marathi Translation
शरणासंगे साधना करुन, मोठा बाण सोडतो देवा.
तो बाण लागो अथवा न लागो विजय माझाच म्हणेन देवा.
मैदान मारुन दाखवितो कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶ್ರವವ ಮಾಡೆಂದರೆ ಅಭ್ಯಾಸಮಾಡೆಂದರ್ಥ –ಅಥವಾ ಅಭ್ಯಾಸಕ್ಕಾಗಿ ಅಣಕಯುದ್ಧಮಾಡೆಂದರ್ಥ. ಶಿವಶರಣರೊಡನೆ ಶಿವಜ್ಞಾನದ ಶಿವಾಚಾರದ ವಿಚಾರವಾಗಿ ವಾದಮಾಡಿ ಮಾತಿಗೆ ಮಾತಾಗಿ ಮಥಿಸುವೆನು. ಮಾತಿನಲ್ಲಿ ಗೆಲ್ಲುವುದೇನೂ ಅಸಾಧ್ಯವಲ್ಲ, ಆದರೆ ಅದೇ ಶರಣರು ತನುಮನಧನವನ್ನು ಬೇಡಿದರೆಂದರೆ –ಆ ಜಾಗ ಬಿಟ್ಟು ಓಡುತ್ತಾನೆ –ಎಂದು ಬಸವಣ್ಣನವರು ತಮ್ಮನ್ನು ತಾವೇ ವಿಮರ್ಶಿಸಿಕೊಳ್ಳುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು