ಮಾಹೇಶ್ವರನ ಭಕ್ತಸ್ಥಲ - ಲಿಂಗ-ಜಂಗಮ
ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ,
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿಯುತ್ತಿರಲಿ,
ಮುಟ್ಟುವ ಸ್ತ್ರೀಯ ಕಣ್ಣಮುಂದೆ ಅಭಿಮಾನಗೊಂಡು ನೆರೆಯುತ್ತಿರಲಿ.
-ಇಂತೀ ತ್ರಿವಿಧವು ಹೊರಗಣವು-
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡಂಗೊಯ್ಯಲಿ,
ಇಕ್ಕುವ ಶೂಲ ಪ್ರಾಪ್ತಿಸಲಿ,
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ;
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ. ಪ್ರಸಾದಕ್ಕೆ ತಪ್ಪೆನು!
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದರೆ
ನೀನಂದೆ ಮೂಗ ಕೊಯಿ, ಕೂಡಲಸಂಗಮದೇವಾ!
Transliteration Arthavanarthava māḍi kōḷāhaḷaṅgeyyuttirali,
huṭṭida makkaḷa navakhaṇḍava māḍi kaḍiyuttirali,
muṭṭuva strīya kaṇṇamunde abhimānagoṇḍu nereyuttirali.
-Intī trividhavu horagaṇavu-
innennaṅgada mēle barali, hiḍikhaṇḍaṅgoyyali,
ikkuva śūla prāptisali,
hākondese hannondeseyāgi māḍuttirali;
matteyū liṅgārādhaneya māḍuve,
jaṅgamārādhaneya māḍuve. Prasādakke tappēnu!
Intappa bhāṣe kin̄cittu husiyādare
nīnande mūga koyi, kūḍalasaṅgamadēvā!
Manuscript
English Translation 2 Let them waste wealth and overthrow all things;
Chop to nine pieces the children born of me;
Before my eyes outrage and put to shame
My wedded wife: these are outer wrongs;
Let them assault my flesh; or let
The fatal gallows be my lot;
Let them cast me
In one or in eleven parts: even then
Will I do Liṅga 's worship, and
Worship of Jaṅgama; and never fail
Prasāda! Should I the least prove false
To all these pledges, do you,
O Kūḍala Saṅgama Lord,
Forthwith cut off my nose!
Translated by: L M A Menezes, S M Angadi
Hindi Translation अर्थ का अनर्थ कर कोलाहल मचाते रहे
उत्पन्न बच्चों के टुकड़े-टुकड़े बनाते रहे।
नेत्र समक्ष परिणित पत्नी का
मानभंग कर उसके साथ रतिक्रीडा करते रहे,
ये तीनों बाहरी के हैं ।
मेरे शरीर को
टुकड़े-टुकड़े बना दे,
मुझे भूल प्राप्त होने दे, मुझे अस्त-व्यस्त कर दे,
फिर भी मैं लिंगाराधना करूँगा,
जंगमाराधना करूँगा, प्रसाद नहीं छोडूंगा
इस प्रतिज्ञा में लेशमात्र च्युति हो,
तो उसी दिन मेरी नाक काटो, कूडलसंगमदेव ॥
Translated by: Banakara K Gowdappa
Telugu Translation అర్ధమనర్ధమై కోలాహలముగానీ, అది
పుట్టిన బిడ్డలు నవఖండములగా ఖండిరపబడనీ
కట్టుకొన్న కాంతను కంటిముందె
మానభంగము సేయనీ దేహంబుపై బడి
తుత్తునియలు గావింపనీ శూలమునకు నన్నెత్తనీ
మఱిమఱి లింగారాధన సేసెద!
జంగమారాధన సేతు
ప్రసాదమునకు తప్పను ఇట్లయ్యా! నా బాస
లేశంబు తప్పిన కోయుమాముక్కును
కూడల సంగమదేవా!
Translated by: Dr. Badala Ramaiah
Tamil Translation செல்வத்தைத் தவறாகப் பயன்படுத்தி
அல்லது அபகரித்து கொண்டாடினும் செய்யினும்
பிறந்த குழந்தைகளைத் துண்டு துண்டாக
வெட்டினாலும், கைபிடித்த மனைவி
கண்முன்பு அவமானத்திற்கு ஆட்படினும்
இம்மூ வகைகளில் மற்றும் வேறு சிலவற்றிலும்
மற்றும் என் உடலைத் துண்டாக்கிக் கொய்தாலும்
சூலத்தில் ஏற்றிடினும் முழுமையாகக் கொய்தாலும்
பொடிப்பொடியாக்கிடினும், பிறகும் இலிங்க
ஆராதனையைச் செய்வேன், ஜங்கம
ஆராதனையைச் செய்வேன் பிரசாதத்தை
ஏற்பேன் என்னும் என் கூற்று சிறிதளவு
பொய்ப்பினும் நீ அன்றே என் மூக்கைக்
கொய்வாய் கூடல சங்கம தேவனே.
Translated by: Smt. Kalyani Venkataraman, Chennai
Marathi Translation
अर्थाचा अनर्थ, न कळता आचार
उसळा मजवर, चिंता नाही
माझीया देखता, सर्वस्व लुटावे
लिंगजंगम पहावे, नयनांनी
माझीया देखता, पुत्र शिर कटावे
लिंगजंगम पहावे, नयनांनी
माझीया देखता, अब्रूशी लुटावे
लिंगजंगम पहावे, नयनांनी
असो हे दुर्जाचे, कोसळा मजवरी
लिंगपुजा करी, प्रसादार्थ
तुटो हे शरीर, फुटो हे मस्तक
लिंगपुजा देख, न सोडी मी
सुळावरी मज देतानाही जाण
करी लिंगार्चन तुझे नेदी
लिंगजंगम पूजा, प्रसाद भक्षण
प्रतिज्ञोत्तर जाण, हेचि माझे
किंचीतही यात, ढळलो मी कोठे
संगमेशा तेथे, नाक कापी
बोलातही कोठे, ढळलो मी जरी
संगमेशा तरी, नाक कापी
अर्थ - निश्चयाचे बळ सर्व बळाहून थोर असते माझा निश्चय एवढा दृढ आहे की त्यापुढे माझी व माझ्या सर्वस्वाची होळी झाली तरी लिंगार्चन, जंगमार्चन, प्रसादसेवन, नित्यपूजाविधी मी सोडणार नाही. हे कूडलसंगमदेवा ! (परशिवा) माझ्या उदगारातही किंचितसा कोठे दंभ आढळल्यास तेथेच मला कडक शासन कर. लिंगजंगमपूजा व प्रसाद-सेवन यात किंचितही कोठे चूक घडून आल्यास तू मला कडक शासन कर. हेच माझे तुला आव्हान होय.
Translated by Rajendra Jirobe, Published by V B Patil, Hirabaug, Chembur, Mumbai, 1983
माझे सर्वस्व माझ्यासमोर लुटले तरी
माझी मुले माझ्यासमोर नष्ट झाली तरी
माझ्या स्त्रीची माझ्यासमोर अब्रू लुटली तरी
अभिमानाने आनंदाने लिंगार्चना करीन.
या तिन्ही गोष्टी बाहेरच्या,
माझ्याच अंगावर तुटून पडले, तुकडे केले तरी
मला सुळावर चढविले तरी, मला छिन्न-विछिन्न केले तरीही
तेव्हाही मी लिंगार्चना करीन. जंगमार्चना करीन, प्रसाद सेवन करीन.
माझ्या प्रतिज्ञेत जराही भंग झाला तर तू माझे नाक काप
कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವಿತ್ತೇಷಣ-ದಾರೇಷಣ-ಪುತ್ರೇಷಣ : ಸ್ವತ್ತು ಹೆಂಡತಿ ಮಕ್ಕಳೆಂಬ ಈ ಮುಮ್ಮೊನೆಯ ವಾಂಛೆ ಪ್ರಾಣಿ ಸಾಮಾನ್ಯಕ್ಕೆ ಅಪರಿಮಿತವಾಗಿದ್ದರೆ –ಮನುಷ್ಯಪ್ರಾಣಿಗೆ ವಿಪರೀತವಾಗಿಯೇ ಇರುವುದು.
ಹಣ ಅಪಹೃತವಾಗುತ್ತಿದ್ದರೆ, ಹೆಂಡತಿ ಅವಮಾನಿತಳಾಗುತ್ತಿದ್ದರೆ, ಮಕ್ಕಳು ಚಿತ್ರವಿಚಿತ್ರವಾಗಿ ಕೊಲೆಯಾಗುತ್ತಿದ್ದರೆ-ಯಾರು ತಾನೆ ಸಹಿಸುವರು ? ಬಾಯಿ ಬಡಿದುಕೊಳ್ಳುವರು, ಕ್ರುದ್ಧರಾಗುವರು, ಮೇಲೆ ಬೀಳುವರು. ಕೈಲಾಗದಿದ್ದರೆ ಕೊರಗುವರು, ಮರುಗುವರು, ಮರಣವಾಗುವರು. ಇಂಥ ಸಹಿಸಲಾಗದ ಉಲ್ಬಣ ಸ್ಥಿತಿಯಲ್ಲೂ, ಘೋರವಾದ ಹಿಂಸೆಗೆ ತಾವೇ ಒಳಗಾದಾಗಲೂ ಬಸವಣ್ಣನವರು ಲಿಂಗಪೂಜೆಯನ್ನು ಜಂಗಮಸೇವೆಯನ್ನೂ, ಆ ಲಿಂಗಜಂಗಮಪ್ರಸಾದಸ್ವೀಕಾರವನ್ನೂ ನಾನು ತಪ್ಪಿಸುವುದಿಲ್ಲ ಎಂದು ಘೋಷಿಸುತ್ತಿರುವರು.
ಲೋಕವೆಲ್ಲಾ ತನ್ನ ಸಂಪತ್ತಿಗಾಗಿ ಹೆಂಡತಿಗಾಗಿ ಮಕ್ಕಳಿಗಾಗಿ ಚಿಂತಿಸಿ ಹೋರಾಡಿ ಸಾಯುತ್ತಿದ್ದರೆ-ಬಸವಣ್ಣನವರಿಗೆ ಲಿಂಗ ಜಂಗಮದ ಚಿಂತೆ !
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು