ಮಾಹೇಶ್ವರನ ಭಕ್ತಸ್ಥಲ - ಭಕ್ತಿನಿಷ್ಟೆ
ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ, ಬೇಡು, ಬೇಡೆಲೆ ಹಂದೇ!
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ;
ಕೂಡಲಸಂಗಮದೇವಾ, ನಿಮಗಿತ್ತು ಶುದ್ಧನಾಗಿಪ್ಪೆ
ನಿಮ್ಮ ಪುರಾತರ ಮನೆಯಲ್ಲಿ.
Transliteration Tanuva bēḍidaḍīve, manava bēḍidaḍīve,
dhanava bēḍidaḍīve, bēḍu, bēḍale handē!
Kaṇṇu bēḍidaḍīve, taleya bēḍidaḍīve;
kūḍalasaṅgamadēvā, nimagittu śud'dhanāgippe
nim'ma purātara maneyalli.
Manuscript
English Translation 2 I'll give my body if you ask,
And so my mind and wealth:
Do you but ask, you runaway!
I'll give my eyes, too, if you ask,
I'll give my head should you ask that
O Kūḍala Saṅgama Lord, by giving to you
I shall be rendered pure
In your Pioneers' house.
Translated by: L M A Menezes, S M Angadi
Hindi Translation तन माँगो दूँगा, मन माँगो दूँगा,
धन माँगो दूँगा, माँगो माँगो हे भीरु !
आँख माँगो दूँगा, सिर माँगो दूँगा,
कूडलसंगमदेव तुम्हें देकर परिशुद्ध होऊँगा
तव पुरातनों के घर में ॥
Translated by: Banakara K Gowdappa
Telugu Translation తనువు వేడిన యిత్తు; మనసువేడిన యిత్తు
ధనము వేడిన యిత్తు అడుగడుగుమో పందా!
కన్ను గోరినయి యిత్తు తలగోరిన యిత్తు
కూడల సంగమదేవా; ఇచ్చి నీకు
నీ వురాతనుల యింట శుచినై యుందునయ్యా!
Translated by: Dr. Badala Ramaiah
Tamil Translation உடலை வேண்டின் ஈவேன் மனத்தை வேண்டின் ஈவேன்
செல்வத்தை வேண்டின் ஈவேன், பேடியே
வேண்டுவாய், வேண்டுவாய், கண்ணை வேண்டின்
ஈவேன் தலையை வேண்டின் ஈவேன்
கூடல சங்கம தேவனே, உமக்கு அளித்து, உம்
பழமையோர் இல்லத்தில் தூய்மையானவனாக இருப்பேன் ஐயனே.
Translated by: Smt. Kalyani Venkataraman, Chennai
Marathi Translation
माग देह माझा, माग मन माझे
फेडिन ते ओझे, तुज लागी मी, फेडिन ते ओझे
दो नयने माग, माग मुंड माझे
समजू ते तुझे, अर्पूनी तुला, समजू ते तुझे
शुद्ध बुद्ध प्रमथ, आणि पुरातन ते
त्यांच्यासह राहते, माझे मी पण, त्यांच्यासह राहते
कूडलसंगमेशा, मी पणास देता
अन्य काय वार्ता, क्षुद्र धनाची, अन्य काय वार्ता
अर्थ - हे प्रभो तुला मी माझे तन-मन-धन आणि सर्वस्व अर्पण करीन. शुद्ध होऊन तुझ्या अद्वितीय अशा पुरातनासह मी राहीन. प्रमथांची सेवा हाच माझा आचार व विचार होय.
Translated by Rajendra Jirobe, Published by V B Patil, Hirabaug, Chembur, Mumbai, 1983
तन मागता देतो, मन मागता देतो,
धन मागता देतो, पाहिजे ते माग भित्र्या,
डोळे मागितले तर देईन, शिर मागितले तर देईन,
कूडलसंगमदेवा, तव सर्वस्व अर्पूण शुध्द होतो तव पुरातनाच्या घरी.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಮುಕ್ತರಾದ ಮೇಲೆಯೂ ಕೈಲಾಸಕ್ಕೆ ಹೋಗಿ ಮರಳಿ ಶಿವನ ಹಂಗಿನಲ್ಲಿರದೆ –ಇಹದಲ್ಲೇ ಶರಣರ ಮನೆಯಲ್ಲೇ ಸೇವೆಮಾಡಿಕೊಂಡಿರುವೆನೆಂಬ ಈ ವಚನ ಆ ಬಸವಣ್ಣನವರ ಪಾರಲೌಕಿಕ ದೃಷ್ಟಿಯಿಂದ ಬಹಳ ಮಹತ್ವವುಳ್ಳುದಾಗಿದೆ.
ಅವರು ಹೇಳುತ್ತಾರೆ : ಎಲೆ ಶಿವನೇ, ನನ್ನ ತನು ಮನ ಧನ ನಿನ್ನ ಋಣವೇ ಆಗಿದೆ. ಅವನ್ನು ನಾನು ಹಿಂದಿರುಗಿಸಲು ಹಿಂಜರಿಯುವುದಿಲ್ಲ. ಅವನ್ನು ನೀನು ಇಡಿಯಾಗಿ ಕೇಳದೆ –ಕಣ್ಣನ್ನೊಂದು ಸಲ ತಲೆಯನ್ನು ಇನ್ನೊಂದು ಸಲ ಬೇಡುವ ಹಿಂಸಾತ್ಮಕವಾದ ಮಾರ್ಗವನ್ನು ಅನುಸರಿಸಿದರೂ ಸರಿಯೇ -ನಾನದಕ್ಕೆ ಸಿದ್ಧ. ನಿನ್ನದನ್ನೆಲ್ಲ ನಿನಗೊಪ್ಪಿಸಿ ಮುಕ್ತನಾಗಿ ಚೈತನ್ಯರೂಪನಾಗಿ ನಿನ್ನ ಕೈಲಾಸಕ್ಕೆ ಬರದೆ -ಶರಣರ ಮನೆಯಲ್ಲಿರುತ್ತೇನೆ. ಅವರು ನಿನಗಿಂತಲೂ ಮಹನೀಯರು, ಅವರ ಮನೆ ನಿನ್ನ ಕೈಲಾಸಕ್ಕಿಂತಲೂ ಮಿಗಿಲಾದ ಪರಂಧಾಮ ನನಗೆ. (ನೋಡಿ ವಚನ 140, 706).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು