ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು;
ನಾನಾವಾವ ಕರ್ಮಂಗಳ ಮಾಡಿದರೆಯೂ
ಆ ಕರ್ಮಫಲಭೋಗವ ನೀ ಕೊಡುವೆಯೆಂಬುದ ನಾನು ಬಲ್ಲೆನು,
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದ ಕ್ರೀಯ ಮಾಡೆನು;
ನಿಮ್ಮ ಸೊಮ್ಮಿಂಗೆ ಸಲಿಸುವೆನು, ನಿಮ್ಮಾಣೆ
ಕೂಡಲಸಂಗಮದೇವಾ.
MusicCourtesy:Album Name: Shivabasava Song Name: Aaramba Maaduve Singer: M. M. Keeravani Lyric: Basaveshwara Vachanas Music: M. M. Keeravani Label: Akash Audio
English Translation 2That I may worship Guru,
I practise husbandry;
That I perform my rites
To Liṅga , I follow trade;
That I may slave for Jaṅgama
I am another's drudge.
Whatever the work that I may do,
I know that you
Have given me my reward;
No other occupation do I have
But for the wages that you give...
A curse upon me if I fail
To give you what is yours,
O Kūḍala Saṅgama Lord!
Translated by: L M A Menezes, S M Angadi
Hindi Translationकृषि कर्म करता हूँ गुरु पूजार्थ,
व्यपार करता हूँ लिंगार्चनार्थ,
परसेवा करता हूँ जंगमदासोहार्थ,
जो जो कर्म करता हूँ मैं जानता हूँ,
उन कर्मों का फल तुम देते हो ।
तुम्हारा दिया धन तुम्हारे सिवा
किसी और कर्म में नहीं लगाता
तव सौगंध है, तुम्हारी वस्तु तुम्हारे लिए
व्यय करता हूँ, कूडलसंगमदेव ॥
Translated by: Banakara K Gowdappa
Telugu Translationవ్యవసాయము ‘సేతునయ్యా గురుకైంకర్యమునకు
వ్యవహారము సేతునయ్యా లింగార్చనకు
పరులకూడిగ మొనరింతు; జంగమ
దాసోహమునకు; ఏయే కర్మల నేయేగతి
చేసినా; ఆ కర్మఫల భోగము విధిగా
నీ విత్తువనుచు నే నెఱిగితి.
ఇచ్చు ద్రవ్యము నీకుగాక; అన్యమునకు వెచ్చింపలేను
నీదినీకె సమర్పింతునయ్యా సంగమదేవా!
Translated by: Dr. Badala Ramaiah
Tamil Translationகுரு பூஜைக்கென்று தொடங்குவேன் ஐயனே
இலிங்க பூஜைக்கென்று விவகாரம் செய்வேன்
ஜங்கமருக்கு உணவளிக்கப் பிறருக்குத் தொண்டாற்றுவேன்
நான் எச்செயலைச் செய்யினும், அதன் பலனை நீ
எனக்கு அளிப்பாய் என்பதை நான் அறிவேன்
நீ அளித்த பொருளை உமக்கன்றி மற்றவருக்கு ஈயேன்
உம் உடைமைக்கே அளிப்பேன்
உம்மாணை, கூடல சங்கம தேவனே
Translated by: Smt. Kalyani Venkataraman, Chennai
Marathi Translationकरीन व्यापार, गुरूपूजेसाठी
लिंगार्चनेसाठी, व्यवहार तो
जंगमाचेसाठी, दासोह करीन
परसेवा जाण, एवढीच
जे जे मी करीन कायक म्हणून
देशी तू जाणून, फळ त्याचे
तुवा दिधलेली, तुलाचि अर्पिन
कुणा न देईन, देणगी ती
कूडलसंगमदेवा ! तुमचा तो ठेवा
तुझी आण देवा, अर्पि तुज
अर्थ - मी माझ्या कोणत्याही कार्यास गुरूपूजा समजून आरंभ करीत असतो. माझे व्यापार व व्यवहार हे सर्व लिंगपूजेसाठी परसेवेसाठी व जंगम-दासोहासाठीच होत असतात. मी जे काही कर्म करतो त्यांचे फळ वा भोग तूच न्याय बुद्धीने देतोस, हे मी जाणतो. व्यापार व्यवहारातून मी मिळविलेले माझेच असे म्हणणे चूक आहे. ते सर्व तूच देतोस म्हणून तू दिलेले सर्वच तुला व तुझ्या शरणांच्या सेवेप्रित्यर्थ समर्पण करतो. त्यात माझे काहीच खर्च होत नाही. परमेश्वरा! हे मी तुझी शपथ घेऊन सांगतो आहे
Translated by Rajendra Jirobe, Published by V B Patil, Hirabaug, Chembur, Mumbai, 1983मी कृषी करीन देवा गुरुपूजेसाठी,
मी व्यवहार करीन देवा लिंगपूजेसाठी,
मी परसेवा करीन देवा जंगम
दासोहासाठी, मी अनेक कायक केले
तरी त्या कर्माचे फळ तुम्हीच देणार हे मी जाणतो.
तुम्ही दिलेले द्रव्य तुम्हालाच अर्पण, दुसऱ्यांना नाही.
तुमच्या प्रसन्नतेसाठी सर्व धन खर्च करतो.
तुमची शपथ कूडलसंगमदेवा.
Translated by Shalini Sreeshaila Doddamani
Urdu Translationمیں اپنی کاشتکاری کوگرُو پوجا سمجھتا ہوں
مری سوداگری بھی ہےاطاعت لِنگ کی گویا
میں خادم ہوں کِھلاتا ہوں فقیروں کوغریبوں کو
میرے ہرکام کی ہوتی ہے بس تجھ سے پذیرائی
میں تجھ سےجوبھی پاتا ہو ں تجھی پرصرف کرتا ہوں
کسی کاحق نہیں ہےاس پہ میرے کوڈلا سنگم
Translated by: Hameed Almas
ಕನ್ನಡ ವ್ಯಾಖ್ಯಾನ“ಶಿವಸೊಮ್ಮು”(ಶಿವನಿಧಿ) ವ್ಯವಸ್ಥೆಯೊಂದನ್ನು ಬಸವಣ್ಣನವರು ಏರ್ಪಡಿಸಿದ್ದರಾಗಬಹುದು. ಪ್ರತಿಯೊಬ್ಬ ಶಿವಭಕ್ತನೂ ಆರ್ಜಿಸಿ ಧರ್ಮಜೀವನ ನಡೆಸಿದ ಮೇಲೆ (ಸಾಯುವ ಮುನ್ನ) ಉಳಿದ ಸಂಪತ್ತನ್ನು ಆ ಶಿವನಿಧಿಗೆ ಜಮೆಮಾಡತಕ್ಕದ್ದೆಂದು ಅವರು ಈ ವಚನದ ಮೂಲಕ ಸೂಚಿಸುತ್ತಿರುವಂತಿದೆ (ನೋಡಿ ವಚನ 728. 729)
ಅವರು ಹೇಳುತ್ತಾರೆ : ಗುರು ಲಿಂಗ ಜಂಗಮ ದಾಸೋಹಕ್ಕಾಗಿ ನೆಲವನ್ನು ಉತ್ತು ಬೇಸಾಯಮಾಡಬಲ್ಲೆನು, ಮತ್ತೇನಾದರೂ ಉದ್ಯೋಗ ವ್ಯಾಪಾರ ಮಾಡಬಲ್ಲೆನು, ಇನ್ನೊಬ್ಬರ ಮನೆಯಲ್ಲಿ ಪರಿಚಾರಕನಾಗಿ ಮಡಿಯಲೂ ಬಲ್ಲೆನು -ಹಿಂಜರಿಯುವುದಿಲ್ಲ ನಾಚುವುದಿಲ್ಲ, ಎಲೆ ಶಿವನೇ ನಾನು ಎಲ್ಲಿ ಏನುಗೇದರೂ ಕೂಲಿ ಕೊಡುವ ದಣಿ ನೀನೇ ಆಗಿರುವೆಯೆಂದ ಮೇಲೆ-ಆ ನೀನು ಕೊಟ್ಟ ದ್ರವ್ಯವನ್ನು ನಿನಗಾಗಿಯಲ್ಲದೆ ಅನ್ಯಕ್ಕೆ ವ್ಯಯಮಾಡೆನು. ಉಳಿದ ನನ್ನ ಆರ್ಜನೆಯೆಲ್ಲವನ್ನೂ ಶಿವಸೊಮ್ಮಿಗೆ ಜಮೆ ಮಾಡುವೆನು-ಇದು ನನ್ನ ಪ್ರತಿಜ್ಞೆ.
ಹೀಗೆ ಕಠೋರವಾದ ಪ್ರತಿಜ್ಞೆ ಮಾಡಿ-ಶಿವಕ್ಕಾಗಿಯೇ ತಮ್ಮ ಆದಾಯವನ್ನೆಲ್ಲ ವೆಚ್ಚಮಾಡಿ –ಕೊನೆಗೆ ಅಸ್ತಿಯನ್ನೆಲ್ಲ ಶಿವನಿಧಿಗೆ ಸಂದಾಯಮಾಡುವೆನೆಂಬ ಬಸವಣ್ಣನವರ ಆಶಯವನ್ನು ಅಲ್ಪಾಂಶದಲ್ಲಿಯಾದರೂ ಸ್ವಂತಜೀವನದಲ್ಲಿ ನಿಜೀಕರಿಸಿಕೊಂಡವನು ಮಾತ್ರ ಬಸವಣ್ಣನವರ ಅನುಯಾಯಿ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.