•  
  •  
  •  
  •  
Index   ವಚನ - 710    Search  
 
ಮಾಹೇಶ್ವರನ ಭಕ್ತಸ್ಥಲ - ಲಿಂಗನಿಷ್ಠೆ
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ, ʼಎನ್ನೊಡಲಿಂಗೆ, ಎನ್ನೊಡವೆಗೆ ಎನ್ನ ಮಡದಿ-ಮಕ್ಕಳಿಗೆಂದುʼ ಕುದಿದೆನಾದರೆ ಎನ್ನ ಮನಕ್ಕೆ ಮನವೇ ಸಾಕ್ಷಿ! 'ಆಸನೇ ಶಯನೇ ಯಾನೇ| ಸಂಪರ್ಕೇ ಸಹಭೋಜನೇ ಸಂಚರಂತಿ ಮಹಾಘೋರೇ| ನರಕೇ ಕಾಲಮಕ್ಷಯಂ' ಎಂಬ ಶ್ರುತಿಯ ʼಬಸವಣ್ಣನೋದುವನುʼ ಎಂಬರು. ʼಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳಿತಿರ್ದು ಓಲೈಸಿಹನೆಂದುʼ ನುಡಿವರಯ್ಯಾ ಪ್ರಮಥರು. ಕೊಡುವೆನುತ್ತರವನವರಿಗೆ? ಕೊಡಲ (ಮ್ಮುವೆ): ಹೊಲೆಯ ಹೊಲೆಯರ ಮನೆಯ ಹೊಕ್ಕು ಸಲೆ ಕೈಕೂಲಿಯ ಮಾಡಿಯಾದರೆಯೂ, ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದರೆ ತಲೆದಂಡ! ಕೂಡಲಸಂಗಮದೇವಾ.
Transliteration Hottāre eddu kaṇṇu hoseyutta, `enna oḍaliṅge, enna oḍavegendu enna maḍadi-makkaḷigendu` kudidenādare enna manakke manavē sākṣi! 'Āsanē śayanē yānē| samparkē sahabhōjanē san̄caranti mahāghōrē| narakē kālamakṣayaṁ' śrutiya ʼbasavaṇṇanōḍuvanuʼ embaru. `Bhavi bijjaḷana gaddugeya keḷage kuḷḷirdu ōlaisihanendu’ nuḍivarayyā pramatharu. Koḍuvenuttaravanavarige? Koḍala (m'muve): Holeya holeyara maneya hokku sale kaikūliya māḍiyādareyū, nim'ma nilaviṅge kudivenallade, enna oḍalavasarakke kudidenādare taledaṇḍa! Kūḍalasaṅgamadēvā.
Manuscript
English Translation 2 If rising at dawn and rubbing my eyes, I worry for my belley, for my goods, For wife and children, then My mind be witness to my mind They say, "Basavaṇṇa reads the text which says 'He who sits, sleeps and walks And interdines with them shall go For endless time to a terrific hell'; But, sitting below the throne Of a worlding like Bijjaḷa, serves him". So say the Pioneers. To them I answer, for I can 'If going into the lowest paraih's house, I do the lowest service well, My one concern is but Thy majesty; But if I worry for my belly's sake,. Let my head pay for it, O Kūḍala Saṅgama Lord! Translated by: L M A Menezes, S M Angadi
Hindi Translation सबेरे उठकर, आँखे मलते अपने पेट, अपने सामान, अपनी पत्नी और बाल बच्चों के लिए व्याकुल होऊँ, तो मेरे मन का साक्षी मन ही है। “आसने, शयने-याने संपर्के सहभोजने। संचरन्ति महाघोरे नरके कालमक्षयम्॥“ प्रमथ कहते हैं यह श्रुति पढ़ने पर भी बसवण्णा भवि बिज्जळ के सिंहासन तले बैठकर सेवा करता है। उन्हें उत्तर दे सकता हूँ? चाँडालों के घर प्रवेश कर मजदूरी करने पर भी तुम्हारे लिए व्याकुल न होकर, अपने उदरार्थ व्याकुल होंऊँ, तो मेरा शिरच्छेद हो, कूडलसंगमदेव॥ Translated by: Banakara K Gowdappa
Telugu Translation తొలి ప్రొద్దులో లేచి కన్నుల పులుముకొంచు; పొట్టకై బట్టకై భార్యాబిడ్డలకై : అటమటింతునా మనసుకు మనసే సాక్షి; ‘‘ఆశనేశయ నేయానే సంపర్కే సహభోజనే సంచరంతి మహా ఘోరే నరకే కాలమక్షయం’’ అను శ్రుతి బసవణ్ణ చదివెనందురు భవిబిజ్జలుని గద్దె కడకూర్చొని; సేవించెనందురు నన్ను ప్రమథులయ్యా; ప్రత్యుత్తరంబిత్తువారికి మాలల ఇంటికేగి చేతుల కష్టముచేసిjైున నీ నిలువ కై తపియింతుగాని యీ మేనికై వగచినట్లైన తలదండమిత్తునయ్యా సంగయ్యా! Translated by: Dr. Badala Ramaiah
Tamil Translation விடியலில் எழுந்து, கண்ணைக் கசக்கி என் உடலிற்கு, என் மனைவி மக்களுக்கென்று கொதித்தேன் எனின், என் மனத்திற்கு மனமே சாட்சி “ஆஸனே சயனே யானே ஸம்பர்கே ஸஹபோஜனே ஸஞ்சரந்தி மஹாகோரே நரகே காலமக்ஷயம்” என்னும் சுருதியை பசவண்ணன் ஓதியுள்ளேன் நெறியற்ற பிஜ்ஜளனின் அரியணையின் கீழ் அமர்ந்து, தர்பார் செய்கிறேனெனக் கூறுவர் ஐயனே. அவருக்குப் பதிலைக் கொடுப்பேனோ? கொடுப்பேன் புலையர் இல்லத்திற்குச் சென்று செய்யினும் கூலிப் பணிகளையும் செய்யினும் உம் நிலைக்கு ஆற்றுகிறேனன்றி என் தேவைக்கு எனின் தலை தண்டம் கூடல சங்கமதேவனே. Translated by: Smt. Kalyani Venkataraman, Chennai
Marathi Translation पहाटे डोळे चोळत उठून माझ्या पोटासाठी, माझ्या संपत्तीसाठी, माझ्या बायकामुलांच्यासाठी चिंता केली तर माझ्या मनाला मन साक्षी ! आसने शयने याने संपर्क सहभोजने। संचरति महाघोरे नरके कालमदायं। हे श्रुती वाक्य बसवेश्वर वाचत असत. भवी बिजळाच्या सिंहासनाखाली बसून सेवा करतात. असे प्रमथ म्हणती. (याचे मी काय उत्तर देऊ? देत नाही!) अस्पृश्यांच्या घरी जाऊन मजूरी करावी लागली तर करीन. हे सर्व तुमच्या सेवेसाठी करीन. माझ्या पोटासाठी केले तर मृत्यूदंड कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಒಬ್ಬ ಧಾರ್ಮಿಕ ಆಚಾರ್ಯರೇ ಆಗಿದ್ದರೂ ಅವರು ಆ ಧರ್ಮವನ್ನು ಗೌರವಾನ್ವಿತ ಮಾನವ ಸಂಬಂಧಗಳನ್ನು ಛಿದ್ರಗೊಳಿಸಲು ಬಳಸಲಿಲ್ಲ, ಮಿಕ್ಕೆಲ್ಲ ಧರ್ಮದವರೊಡನೆಯೂ ಸಮಧುರವಾದ ಸಾಮಾಜಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದರಲ್ಲೇ ತಮ್ಮ ಶಿವಧರ್ಮದ ಭವಿಷ್ಯವು ಅಡಗಿದೆಯೆಂಬುದನ್ನು ಅವರು ತಿಳಿದಿದ್ದರು. ಹೀಗಾಗಿ ಬಸವಣ್ಣನವರು ವೀರಶೈವೇತರರೊಡನೆ ಸೌಮನಸ್ಯದಿಂದ ಬೆರೆಯುತ್ತಿದ್ದುದು ತಮ್ಮವರೆನಿಸಿದ ಕೆಲವು ಸಂಪ್ರದಾಯವಾದಿಗಳಿಂದಲೇ ಉಗ್ರವಾದ ಟೀಕೆಗೆ ಒಳಗಾಗಿದ್ದಿತು. ವೀರಶೈವನಲ್ಲದ ಬಿಜ್ಜಳನನ್ನು –ಅವನ ಗದ್ದುಗೆಯ ಕೆಳಗೆ ಕುಳತು ಬಸವಣ್ಣನವರು ಓಲೈಸುತ್ತಿದ್ದುದು ಅಧಾರ್ಮಿಕವೆಂದು ಅವರು ಆಕ್ಷೇಪಿಸಿದರು. ಭವಿಯೊಡನೆ ಕುಳಿತರೆ ನಡೆದರೆ ಉಂಡರೆ ಮಲಗಿದರೆ ನರಕವೆಂಬ ಆಗಮವಾಕ್ಯವನ್ನು ಉಲ್ಲೇಖಿಸಿ ಆ ಸಂಪ್ರದಾಯವಾದಿಗಳು ಬಸವಣ್ಣನವರನ್ನು ಮೂದಲಿಸಿದ್ದು ಉಂಟು. ಆಗ ಬಸವಣ್ಣನವರು-“ಇತರ ಸವರ್ಣೀಯರಲ್ಲಿಯೇ ಅಲ್ಲ-ಅಸ್ಪೃಶ್ಯರೆಂದು ಬಹಿಷ್ಕರಿಸಲ್ಪಟ್ಟ ದಲಿತರ ಮನೆಗಳಲ್ಲಿ ಕೈ ಕೂಲಿಯನ್ನು ಮಾಡಿಯಾದರೂ ಶಿವಧರ್ಮಸ್ಥಾಪನೆಗಾಗಿ ಹೆಣಗಾಡುವೆನೇ ಹೊರತು -ನನ್ನ ಹೊಟ್ಟೆಪಾಡಿಗಾಗಿಯಲ್ಲ”ವೆನ್ನುತ್ತ ಆ ಜಾತಿವಾದಿ ಸಂಪ್ರದಾಯಸ್ಥರನ್ನು ಪ್ರಮಥರೆಂದು ಗೌರವದಿಂದ ಸಂಬೋಧಿಸುತ್ತಲೆ-ಅವರ ವಾದವನ್ನು ಎಲ್ಲಂದದಲ್ಲೂ ತಿರಸ್ಕರಿಸುವುದಾಗಿ ಘೋಷಿಸಿದರು. ಶಿವಮತದ ಅಭಿವೃದ್ಧಿಗಾಗಿಯೇ-ಭವಿಯೆಂದು ಬಳಕೆಯಿರುವ ಜನಗಳಲ್ಲಿ ತಾವು ಬೆರೆತಿರುವುದಾಗಿ ಬಸವಣ್ಣನವರು ಹೇಳುತ್ತಿದ್ದರು. ಇತರ ಜಾತಿಯವರನ್ನು ಭವಿಗಳೆಂದು ದೂರಮಾಡಿದರೆ-ಅವರು ಶಿವಧರ್ಮಕ್ಕೆ ಬಂದು ಸೇರುವುದಾದರೂ ಹೇಗೆ ? ಈ ದೂರದೃಷ್ಟಿಯಿಲ್ಲದ, ಮೇಲಾಗಿ ಜಾತಿವಾದಿಗಳಾದ ಮತ್ತು ಕೂಪ ಮಂಡೂಕ ಬುದ್ಧಿಯ ಸಂಪ್ರದಾಯಸ್ಥರು ಬಸವಣ್ಣನವರನ್ನು ಏನೆಂದಾದರೂ ಆಕ್ಷೇಪಿಸಬಹುದು. ಆ ಸಂಪ್ರದಾಯಸ್ಥರು ಜಾತಿದ್ವೀಪಗಳಲ್ಲಿ ವಾಸಿಸುವ ಆದಿಮಾನವರು!

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು