•  
  •  
  •  
  •  
Index   ವಚನ - 711    Search  
 
ಮಾಹೇಶ್ವರನ ಭಕ್ತಸ್ಥಲ - ಜಾತಿ
ದೇವ, ದೇವಾ ಬಿನ್ನಪವನವಧಾರು: ವಿಪ್ರ ಮೊದಲು, ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲರನೊಂದೇ ಎಂಬೆ: ಹಾರುವ ಮೊದಲು ಶ್ವಪಚ ಕಡೆಯಾಗಿ ಭವಿಯಾದವರನೊಂದೇ ಎಂಬೆ; ಈ ಹೀಗೆಂದು ನಂಬುವುದೆನ್ನ ಮನವು: ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳರೆ, ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ.
Transliteration Dēva, dēvā binnapavanavadhāru: Vipra modalu, antyaja kaḍeyāgi śivabhaktarādavaranellaranondē embe: Hāruva modalu śvapaca kaḍeyāgi bhāviyādavaranondē embe; ī rīti nambuvudenna manavu: Ī nuḍida nuḍiyoḷage eḷḷa moneyaṣṭu sandēhavuḷḷare, hāludōre mūga koyi, kūḍalasaṅgamadēvā.
Manuscript
English Translation 2 Lord, O Lord! heed my prayer: The Brahmin at one end, At other the low-born man- All devotees of Śiva I deem one; The priest at one end, The sweeper at another- All worldlings I deem one. It's this my heart believes... Should in this talk of mine be doubt As large as a sesamum tip, Lord Kūḍala Saṅgama Will, sure, chop off my nose Until the teeth show out! Translated by: L M A Menezes, S M Angadi
Hindi Translation देव देव, मेरी विनती सुनो, विप्र से लेकर अंत्यज तक सभी शिवभक्तों को एक मानता हूँ ब्राह्मण से लेकर श्वपच तक सभी भवियों को एक मानता हूँ यों मेरा मन विश्वास करता है। इस कथित वचन में तिल भर भी संदेह हो, तो कूडलसंगमदेव, मेरी नाक आदंत काटो ॥ Translated by: Banakara K Gowdappa
Telugu Translation దేవదేవా విన్నపమవధారు; విప్రుని మొదలంత్యజునిదాక; శివభక్తులగు వారినెల్ల ఒక టేయంటి; పాఱుని మొదలు శ్వపచుని వలకు; భవియగు వానిని ఒక టేయంటి నా మనసిట్లని నమ్మునయ్యా, నే బల్కుయీ పల్కులందు; నూగుమొనయంత సందేహముండెనా పలుదోప ముక్కుకోయుమ! సంగమదేవా! Translated by: Dr. Badala Ramaiah
Tamil Translation இறைவா, இறைவா, விண்ணப்பம், கேளாய் வேதியர்முதல் புலையன் வரை சிவபக்தர் அனைவரும் ஒன்றுதான் என்பேன் வேதியர்முதல் புலையன் வரை நெறியிலி அனைவரும் ஒன்றுதான் என்பேன் என் மனம் இவ்விதம் நம்புகிறது. இக்கூற்றில் எள்ளின் முனையளவு ஐயமிருப்பின் எலும்பு விளங்க மூக்கைக் கொய்வாய் கூடல சங்கமதேவனே. Translated by: Smt. Kalyani Venkataraman, Chennai
Marathi Translation हे देवा, तुज सांगणेच आता ऐकूनिया घेई तू ब्राह्मण ते शुद्रास एक मानी शिवभक्त मी, थोर तू ॥१॥ विप्रापासून श्वपच तो सकल शिवभक्त दिसती मला किंबहुना भवि सर्व ते अमान्य भक्ती नाही दिसती मला ॥२॥ विश्वासी तिळमात्र ऊणा पडता मजलागी दंडन करी कूडलसंगमदेव ऐकून घ्या भावा न सोडी तरी ॥३॥ अर्थ :- हे प्रभो ! विप्रापासून शुद्रापर्यंत आणि श्वपचापर्यंतही मी सर्व शिव- भक्तांना एक मानतो. परंतु भवी लोकात भक्तिचा अभाव असल्याने मला ते अमान्य आहेत. भक्तित माझा अटळ विश्वास आहे. हे कूडलसंगमदेवा! (परशिवा) माझ्या विश्वासात तिळमात्रही संदेह आढळून आल्यास तू मला कडक शासन कर. Translated by Rajendra Jirobe, Published by V B Patil, Hirabaug, Chembur, Mumbai, 1983 देवा, देवा माझी विनंती ऐका. विप्रापासून अंत्यजापर्यंत सर्व शिवभक्तांना समान मानतो. विप्रापासून अस्पृश्याययर्यंत सर्व भवीला समान मानतो. यावर माझा अढळ विश्वास आहे. या शब्दावर तिळमात्रही संदेह वाटला तर दात दिसण्यासारखे नाक काप कूडललंगमदेवा. Translated by Shalini Sreeshaila Doddamani
Urdu Translation اےمرےدیوا،اےمرےدیوا تجھ سےکہتا ہوں اپنے د ل کی بات میرا ایمان ہے یہ غورسے سُن چاہے چنڈال میں ہوں شیو بھگت چاہے ویرا میں ہوبھگت کوئی سب کویکساں نظرسےدیکھوں گا وہ برہمن ہوں یا ہریجن ہوں ان میں کوئی اگربھوئی بن جائے دونوں میری نظرمیں یکساں ہیں میرے دل کا یہی عقیدہ ہے اس عقیدہ میں تِل برابر بھی تجھ کوشک ہو جو کوڈلا سنگا اس طرح کاٹ دینا میری ناک دانت ہرایک کو نظرآئیں، اور صورت خراب کردینا Translated by: Hameed Almas
ಕನ್ನಡ ವ್ಯಾಖ್ಯಾನ ಶಿವಧರ್ಮಕ್ಕಾಗಲೇ ಸೇರಿದ್ದವರಿಗೆ ಮತ್ತು ಸೇರುವವರಿಗೆ (ಸಂಪ್ರದಾಯಸ್ಥರ ಅಸಮ್ಮತಿಯನ್ನು ಪ್ರತಿಭಟಿಸುತ್ತಲೇ) ಬಸವಣ್ಣನವರು ಘೋಷಿಸಿದ ಸರ್ವಸಮಾನತೆಯ ಸೂತ್ರವೀ ವಚನ. ಅವರು ಹೇಳುತ್ತಾರೆ : “ನಾನು ಮನುಕುಲವನ್ನು ಲಿಂಗಧಾರಣದೃಷ್ಟಿಯಿಂದ ಭಕ್ತರೆಂದು ಭವಿಗಳೆಂದು ಎರಡು (ಹಂತವಾಗಿಯಲ್ಲ) ಪ್ರಕಾರವಾಗಿ ವಿಂಗಡಿಸುತ್ತೇನೆ. ಹೊರತು, ಇವನು ಬ್ರಾಹ್ಮಣ, ಇವನು ಕ್ಷತ್ರಿಯ, ಇವನು ವೈಶ್ಯ, ಇವನು ಶೂದ್ರ, ಇವನು ಪಂಚಮನೆಂದು (ಜನ್ಮದೃಷ್ಟಿಯಿಂದ) ತಲೆತಲಾಂತರವಾಗಿ ವಿಂಗಡಿಸುವುದಿಲ್ಲ. ಯಾರು ಯಾವ ಜಾತಿಯಲ್ಲೇ ಹುಟ್ಟಿರಲಿ ಲಿಂಗ ಧರಿಸಿ ಭಕ್ತರೆನಿಸಿದವರೆಲ್ಲಾ ಒಂದೆ, ಭಕ್ತರಲ್ಲವೋ-ಅವರನ್ನು ಭವಿಗಳೆನ್ನುತ್ತೇನೆ-ಇವರಲ್ಲಿ ಮತ್ತೆ ಬ್ರಾಹ್ಮಣಾದಿಯಾಗಿ ಅಂತರ ವಿಭಾಗಮಾಡಿ ಯಥಾಪ್ರಕಾರ ಮೇಲುಕೀಳೆಂದು ಬಗೆಯುವುದಿಲ್ಲ.” ಬಸವಣ್ಣನವರ ಈ “ಸರ್ವಸಮಾನತಾ” ಧೋರಣೆಗೆ ಒಂದು ಉದಾಹರಣೆ : ರಂಗನು ಲಿಂಗ ಕಟ್ಟಿದರೆ ಅವನು ಬಸವಣ್ಣನವರಿಗೆ ಪೂಜ್ಯನು. ರಂಗಾಜೋಯಿಸನಾಗಲಿ ಲಿಂಗಕಟ್ಟದಿದ್ದರೆ ಪೂಜ್ಯನಲ್ಲ-ಆದರೇನು ಮರ್ಯಾದೆಗೆ ಅರ್ಹನೇ ಆಗಿರುವನು. ಒಬ್ಬನು ಜೈನನಾಗಲಿ ಬೌದ್ಧನಾಗಲಿ ಸಾಂಪ್ರದಾಹಿಕ ಹಿಂದೂವಾಗಲಿ -ಮತ್ತೆ ಯಾವ ಧರ್ಮದವನೇ ಆಗಲಿ ಅವನನ್ನು ಬಸವಣ್ಣನವರು ಧಾರ್ಮಿಕವಾಗಿ ಭವಿಯೆಂದು ಗಣನೆಮಾಡಿದ ಮಾತ್ರಕ್ಕೇ ಅವನನ್ನು ಮಿಕ್ಕಂತೆ ಸಾಮಾಜಿಕವಾಗಿ ಅವಗಣನೆ ಮಾಡಿದರೆಂದು ಅರ್ಥೈಸುವುದು ತಪ್ಪು -ನೋಡಿ ವಚನ 712. ಈ ಮೇಲೆ ಹೇಳಿದ ಪರಿಯಲ್ಲಿ ಬಸವಣ್ಣನವರು ಕೊಟ್ಟ ಆಶ್ವಾಸನೆಯನ್ನು ನಂಬಿ ಲಿಂಗ ಧರಿಸಿ ಶಿವ ಧರ್ಮಕ್ಕೆ ಸೇರಿದ ಶೂದ್ರವರ್ಗದವರನ್ನೂ ಇತರ ದಲಿತ ಜನಾಂಗವನ್ನೂ -ಬಸವಾನುಯಾಯಿಗಳೆನಿಸಿಕೊಂಡ ಜ್ಞಾನ ಜಂಗಮ(ಸ್ವಾಮಿಯವ)ರೇ ಆಗಲಿ ಶರಣರೇ ಆಗಲಿ-ಸಮಾನವಾಗಿ ನಡೆಸಿಕೊಳ್ಳಲಾರದೆ ಹೋದರು. ಇದರಲ್ಲಿ ಬಸವ ಸಮಕಾಲದಲ್ಲಿಯೇ ಬಸವಣ್ಣನವರ ಸುಧಾರಣೆಗಳಿಗೆ ವಿರೋಧವಾಗಿದ್ದ ಜಾತಿಜಂಗಮರ ಪಾಲೂ ಕಡಿಮೆಯೇನಿರಲಿಲ್ಲ. ಉತ್ತರೋತ್ತರ ಸಂಭವಿಸಿದ ಬಸವಧರ್ಮದ ದುರಂತವಿದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು