ಮಾಹೇಶ್ವರನ ಭಕ್ತಸ್ಥಲ - ಭಕ್ತಿನಿಷ್ಟೆ
ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ,
ಒಲ್ಲೆನಯ್ಯಾ, ಒಲ್ಲೆನಯ್ಯಾ, ಜಗವೆಲ್ಲವರಿಯಲಿಕೆ,
ಒಲ್ಲೆನಯ್ಯಾ, ಒಲ್ಲೆನಯ್ಯಾ, ನೀ ಮುನಿದರೆ ಮುನಿ,
ಕೂಡಲಸಂಗಮದೇವಾ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
Transliteration Ollenayyā, ollenayyā, nim'mavaralladavara,
ollenayyā, ollenayyā, jagavellavariyalike,
ollenayyā, ollenayyā, nī munidare muni,
kūḍalasaṅgamadēvā, nim'māṇe, nim'ma pramatharāṇe!
Manuscript
English Translation 2 I shun, I shun all those
Who are not Thine.
I shun them, as the whole world knows.
I shun, I shun them -do
Be angry if Thou wilt:
So may Thy curse, and Thy Pioneers curse,
Fall upon me,
O Kūḍala Saṅgama Lord!
Translated by: L M A Menezes, S M Angadi
Hindi Translation मैं उन्हें नहीं चाहता, नहीं चाहता जो तुम्हारे नहीं हैं;
नहीं चाहता, नहीं चाहता, सारा जग जानता है;
नहीं चाहता, नहीं चाहता, तुम रुष्ट भी क्यों न हो,
कूडलसंगमदेव, तव सौगंध है, तव प्रमथों की सौगंध है॥
Translated by: Banakara K Gowdappa
Telugu Translation ఒల్లనయ్యా ఒల్లనయ్యా
నీకుగానివారిని;
ఒల్లనయ్యా ఒల్లనయ్యా
జగమెల్ల నన్ను తెలియుట
నొల్లనయ్యా ఒల్ల నయ్యా
నీవు కోపించు కోపిని
కూడల సంగమదేవా
నీ యాన నీప్రమథుల ఆన!
Translated by: Dr. Badala Ramaiah
Tamil Translation விரும்பேன், விரும்பேன் ஐயனே உம்மவரற்றவரை
உலகறிய விரும்பேன், விரும்பேன் ஐயனே
விரும்பேன், விரும்பேன் ஐயனே, சினப்பாய் எனின்
சினம்கொள், கூடல சங்கம தேவனே
உம்மாணை, உம் கணங்களின் மீதாணை.
Translated by: Smt. Kalyani Venkataraman, Chennai
Marathi Translation
तुझ्या नावडत्या, आपलवू कशाला ?
नावडती मजला, ऐसे जन
नको नको देवा, नावडते तुझे
तोंडही तयांचे नको मज
तुमची नि तुमच्या, प्रमयांची आण
तुझा कोप जाण, काय कीजे ?
सर्व जगा लागी, करुनी गर्जना
सांगतसे जाणा, नावडती
कूडलसंगमेशा ! तुला आवडती
तेचि आवडती , मज लागी.
अर्थ- हे प्रभो ! तुला न आवडणारे ते मलाही आवडत नाहीत. म्हणून त्यांना मी कधीही आपुलेसे करीत नाही. हे कूडलसंगमदेवा! (परशिवा) तुझी आणि तुझ्या प्रमथांची शपथ! ते मला आवडत नाही. तेथे प्रत्यक्ष तू जरी रुसलास तरीही ते मला मान्य नाही.
Translated by Rajendra Jirobe, Published by V B Patil, Hirabaug, Chembur, Mumbai, 1983
नको देवा, नको देवा, तुम्हाला न आवडणाऱ्यांचा संग,
नको देवा, नको देवा, सर्व जगाला जाणणारे,
नको देवा, नको देवा, तुम्ही माझ्यावर रागावला तरीही
कूडलसंगमदेवा तुमची शपथ, तुमच्या प्रमथांची शपथ
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವಭಕ್ತರಲ್ಲದವರನ್ನು ಒಲ್ಲೆನೆಂದು ಹೇಳಲು ಬಸವಣ್ಣನವರು ಶಿವನ ಕ್ಷಮೆಯನ್ನೇಕೆ ಯಾಚಿಸಬೇಕು ? ಆದ್ದರಿಂದ-ಶಿವನ ಆಜ್ಞಾನುಸಾರವಾಗಿ -ಬಸವಣ್ಣನವರು ಬೋಧಿಸಿದ ಶಿವಧರ್ಮದವರಲ್ಲವೆಂದು ಅರ್ಥೈಸಬೇಕು-“ನಿಮ್ಮವರಲ್ಲದವರು” ಎಂದರೆ.
ಬ್ರಾಹ್ಮಣರಲ್ಲಿಯೂ ಶಿವಭಕ್ತರಿದ್ದಾರೆ-ಆದರೆ ಅವರು (ಯಾಗಾದಿಗಳನ್ನು ಬಿಟ್ಟು) ಲಿಂಗಧರಿಸಿ ಶಿವಭಕ್ತರಾದ ಹೊರತು ಅವರನ್ನು ಇದ್ದಂತೆಯೇ ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಲು ಒಲ್ಲದಾದರೆ ಅವರನ್ನು ಬಸವಣ್ಣನವರು ಹೇಗೆ ಸ್ವೀಕರಿಸಿಯಾರು ?
ಬಸವಣ್ಣನವರು ಜನ್ಮತಃ ಬ್ರಾಹ್ಮಣರಾಗಿದ್ದರಾಗಿ ಬಹುಶಃ ಆ ಸಲಿಗೆಯಿಂದಾಗಿ ಬ್ರಾಹ್ಮಣರಲ್ಲಿ ಕೆಲವರು ತಮಗೆ ಧಾರ್ಮಿಕವಾಗಿ ವಿಶೇಷ ಸ್ಥಾನಮಾನ ಕೊಡುವುದಾದರೆ-ತಾವೂ ಶಿವಧರ್ಮಕ್ಕೆ ಪರಿವರ್ತನೆಗೊಳ್ಳುವುದಾಗಿ ಒತ್ತಾಯಮಾಡಿರಬೇಕು.
ಅಥವಾ ಈ “ನಿಮ್ಮವರಲ್ಲದವ”ರು ಕೇವಲ ಬ್ರಾಹ್ಮಣರಾಗಿರದೆ ಅರಾಧ್ಯಬ್ರಾಹ್ಮಣರಿರಬೇಕೆಂದು ಊಹಿಸುವುದಾದರೆ ಸಾಂಪ್ರದಾಯಿಕ ವೀರಶೈವಮತದಲ್ಲಿ ಒಂದು ಬಗೆಯದಾದ ಆರಾಧ್ಯ(ಬ್ರಾಹ್ಮಣ)ವರ್ಗವನ್ನು ಬಸವಣ್ಣನವರು ಯಥಾಸ್ಥಿತಿಯಲ್ಲಿ ತಮ್ಮ ಪರಿಷ್ಕೃತ ಧರ್ಮದೊಳಕ್ಕೆ ಬರಮಾಡಿಕೊಳ್ಳಲಿಲ್ಲವೆನ್ನಲೂಬಹುದು. ಹೀಗೆ ಬಸವಧರ್ಮಾನುಯಾಯಿಯಾಗದ ಒಬ್ಬ ಆರಾಧ್ಯ ಬ್ರಾಹ್ಮಣನ ಸ್ವರೂಪವನ್ನು ನಿಜಗುಣಶಿವಯೋಗಿಯಲ್ಲಿ ಕಾಣಬಹುದು. ಈ ಕುರಿತ ಆರಾಧ್ಯ(ಬ್ರಾಹ್ಮಣ)ನು ತನ್ನ ಉಪಾಧಿಗೆ ತಕ್ಕಂತೆ ಯಜ್ಞೋಪವೀತಧಾರಿಯೂ (ಲಿಂಗಧಾರಿಯೂ) ಆಗಿದ್ದನು. ಇಂಥ ಆರಾಧ್ಯ ಬ್ರಾಹ್ಮಣರು ಜಾತಿಜಂಗಮರೂ ಕ್ರಾಂತಿಕಾರಿಯಾದ ಬಸವಧರ್ಮಪರಿಧಿಯಿಂದ ಹೊರಗೇ ಉಳಿದಿರುವುದನ್ನು (ಭೇದಿಸಿ ನೋಡಿದರೆ)ಕಾಣಬಹುದಾಗಿದೆ.
ಈ ವಚನವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕೇ ಹೊರತು-ಕೆಲವು ವ್ಯಾಖ್ಯಾನಕಾರರು ಹೇಳುವಂತೆ-“ನಿಮ್ಮವರಲ್ಲದವರು” ಎಂದರೆ ಬಸವಧರ್ಮದ ಒಂದು ಘಟ್ಟದವರೇ ಆದ ತಮಿಳುನಾಡಿನ ನಾಯನಾರರೆಂದು ಅರ್ಥಮಾಡುವುದು ಅಸಂಬದ್ಧ.
ವಿ : ನಿಮ್ಮವರಲ್ಲದವರೆಂದರೆ-ಕಾಪಾಲಿಕ ಕೌಳ ಭೈರವಾದಿ ಶೈವಪಂಥದವರೆಂದೂ ಸೇರಿಸಿ ಹೇಳಬಹುದು ಶಿವೈಕೋಪಾಸನೆಯವರು ಮಾತ್ರ “ನಿಮ್ಮವರು!
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು