•  
  •  
  •  
  •  
Index   ವಚನ - 713    Search  
 
ಮಾಹೇಶ್ವರನ ಭಕ್ತಸ್ಥಲ - ಭಕ್ತಿನಿಷ್ಟೆ
ಆದಿಯಲಾಗಲಿ, ವೇದದಲಾಗಲಿ, ಶಾಸ್ತ್ರದಲಾಗಲಿ, ಸಮಯದಲಾಗಲಿ: ʼಎನ್ನವರೆನ್ನವರೆನ್ನವರೆʼನ್ನೆನು! ʼಎನ್ನವರೆಂದರೆʼ ಸಂಗಾ ನಿಮ್ಮಲ್ಲಿಗೆ ದೂರ! ಎನ್ನವರಾದರೆ ಜನ್ನಕ್ಕೆ ನಡೆವರೆ? ಎನ್ನವರಲ್ಲ, ಕೂಡಲ ಸಂಗಾ ನಿಮ್ಮಾಣೆ!
Transliteration Ādiyāgali, vēdadalāgali, śāstradalāgali, samayadali: ʼennavarennavarennavareʼnnenu! `Ennavarendare`saṅga nim'mallige dūra! Ennavarādare jannakke naḍevare? Ennavaralla, kūḍala saṅga nim'māṇe!
Manuscript
English Translation 2 What if they come from immemorial time? From Vedas,Śāstras and the Faith? I don't say, 'They are mine, mine, mine'. If I say they are, mine, Banish me, Saṅga , from Thy sight! If they were mine Would they have joined the sacrifice? So may Thy curse fall upon me! They are not,Kūḍala Saṅga , mine! Translated by: L M A Menezes, S M Angadi
Hindi Translation चाहे वे आदि में हों, वेद में हों, शास्त्र में हों, धर्म में हों, नहीं कहूँगा, वे मेरे हैं, नहीं कहूँगा, वे मेरे हैं। यदि मैं कहूँ, वे मेरे हैं, तो संगमेश मैं तुमसे दूर होऊँगा। यदि वे मेरे होते, तो यज्ञ करने जाते? वे मेरे नहीं हैं, कूडलसंगमदेव, तव सौगंध है॥ Translated by: Banakara K Gowdappa
Telugu Translation ఆదిమమైనా; వైదికమైనా; శాస్త్రీయమైనా; సమయాచారమైనా; నా వారు నా వారు నా వారనబోను నా వారని బల్క నీదరికి దూరము నా వారైనచో జన్నమునకు నడతురే? ‘‘ నా వారుగారు సంగా! నీ సాక్షిగా Translated by: Dr. Badala Ramaiah
Tamil Translation ஆதியிலிருப்பினும், வேதத்திலிருப்பினும் சாத்திர சமயத்தி லிருப்பினும் என்னவர் என்னேன் என்னவர் எனின் உமக்குத் தொலைவிலாம் என்னவரெனின் இவ்விதம் நடவரோ? என்னவரில்லை, கூடல சங்கமதேவனே, உம்மாணை. Translated by: Smt. Kalyani Venkataraman, Chennai
Marathi Translation वेदज्ञ शास्त्रज्ञ, असोत धर्मज़ करिता तो यज्ञ, होम सर्व नव्हती ते माझे, नव्हती ते माझे पाहिना मी त्यांचे तोंड काळे हिंसाचारी सर्व, अधर्मी ते थोर करिती अनाचार, निंद्य होती कूडलसंगमदेवा! वाहे तुझी आण आपुलवीता जाण, तेचि पाप अर्थ - हे कूडलसंगमदेवा ! (परशिवा) यज्ञ करणारें व यज्ञात बळी देऊन होम करणारे कितीही मोठे पंडित, वेदज्ञ, धर्मज्ञ वा शास्त्रज्ञ असोत ते मला मान्य नाहीत. मी तुझी शपथ घेऊन सांगतो अशा अधर्मी, यज्ञ होम करणाऱ्यांचे तोंडही पाहणार नाही. ते कदापि आपुले होऊ शकत नाहीत. Translated by Rajendra Jirobe, Published by V B Patil, Hirabaug, Chembur, Mumbai, 1983 आदि, वेद, शास्त्र धर्म यांनी काहीही म्हणू दे. त्यांना मी आपले मानत नाही, आपले मानत नाही. माझे म्हणालो तर कूडलसंगमदेवा तुमच्यापासून मी दूर राहिन. माझे असते तर यज्ञयाग करतील का? माझे ते नाहीत कुडलसंगमदेवा तुमची शपथ. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯಜ್ಞವನ್ನು ಮಾಡುವ ಆ ನೆಪದಲ್ಲಿ ನಿತ್ಯ ಜೀವನ ನಿರ್ವಹಣಪರಾಯಣದ ವೈದಿಕರು ಹಿಂದೊಂದು ಕಾಲಕ್ಕೆ ತಮ್ಮ ಸಂಬಂಧಿಗಳೇ ಆಗಿದ್ದರೆನ್ನಲೂ ಬಸವಣ್ಣನವರು ಒಪ್ಪುವುದಿಲ್ಲ. ವೇದಶಾಸ್ತ್ರಗಳ ದೃಷ್ಟಿಯಿಂದಾಗಲಿ ಧರ್ಮ ಮತ್ತು ಆಚರಣೆಯ ವಿಧಾನದಿಂದಲಾಗಲಿ ತಮಗೂ ವೈದಿಕರಿಗೂ ಆದಿಯಿಂದಲೂ ಭಿನ್ನತೆಯಿರುವುದಾಗಿ-ಪರಸ್ಪರ ಸಂಬಂಧವೇನೂ ಇಲ್ಲವೆಂದು ಹೇಳಿರುವರು. ದೀನದಲಿತರಿಗೆ ಹತ್ತಿರವಾಗಲಿಕ್ಕಾಗಿ, ಅವರ ಸ್ಥಾನಮಾನವನ್ನು ಎತ್ತರಿಸಲಿಕ್ಕಾಗಿ ತಮ್ಮ ಕುಲವನ್ನೂ ವೇದಶಾಸ್ತ್ರ ಆಚಾರಾದಿಗಳನ್ನೂ ತಿರಸ್ಕರಿಸಿದರು. ಆದುದರಿಂದಲೇ ಅವರ ಧರ್ಮ ಭಾರತದ ಉತ್ತರದಲ್ಲೇ ಆಗಲಿ ದಕ್ಷಿಣದಲ್ಲೇ ಆಗಲಿ ಅದರ ಘನತೆಗೆ ತಕ್ಕಂತೆ ಪ್ರಚಾರ ಪಡೆಯಲಿಲ್ಲ. ವೈದಿಕರು ಲೌಕಿಕವಾಗಿ ಅಷ್ಟು ಪ್ರಬಲರಾಗಿದ್ದರು. ಇದಕ್ಕೆ ವಿಧಾಯಕ ಸಾಕ್ಷಿಯೆಂದರೆ-ಬಸವಣ್ಣನವರ ಹಿಂಚುಮುಂಚಿನ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೆ ಮತ್ತು ಮಧ್ವಾಚಾರ್ಯರ ದ್ವೈತಕ್ಕೆ ಸಿಕ್ಕಿದ ಅಪರಿಮಿತ ಪ್ರಚಾರವೇ ಆಗಿದೆ. ಕ್ರಿಸ್ತಪೂರ್ವ ಮತ್ತು ಕ್ರಿಸ್ತನಂತರದ ಕಾಲದಲ್ಲಿ ಜೈನ ಮತ್ತು ಬೌದ್ಧಮತಗಳಿಗೆ ಸಿಕ್ಕಿದ ಜನಮನ್ನಣೆಯನ್ನು ಕಂಡು ದಂಗಾದ ವೈದಿಕರು ವೇದಗಳನ್ನು ಒಪ್ಪದ (ಅಂದರೆ ವರ್ಣವ್ಯವಸ್ಥೆಯನ್ನು ವಿರೋಧಿಸುವ) ಯಾವ ಧರ್ಮವೂ ಭಾರತದಲ್ಲಿ ವ್ಯಾಪಕವಾಗದಂತೆ ಎಚ್ಚರ ವಹಿಸಿದ್ದರು. ದೇಶಾದ್ಯಂತ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಪ್ರಚಾರವಾದುದಕ್ಕೆ ಚಾರಿತ್ರಿಕವಾದ ಪ್ರತ್ಯೇಕ ಕಾರಣಗಳಿವೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು