•  
  •  
  •  
  •  
Index   ವಚನ - 717    Search  
 
ಮಾಹೇಶ್ವರನ ಭಕ್ತಸ್ಥಲ - ವೇದ-ಶಾಸ್ತ್ರ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ; ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ, ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
Transliteration Vēdakke oreya kaṭṭuve, śāstrakke nigaḷavanikkuve; tarkada benna bāranettuve, āgamada mūga koyive, nōḍayya. Mahādāni, kūḍalasaṅgamadēvā, mādāra cennayyana maneya maga nānayya.
Manuscript
Music Courtesy:
English Translation 2 I’ll gird myself with arms To fight the Vedas; I will put fetters on The Śāstras; I will raise weals on Logic’ s back; Look you, I will chop off The Agamas’ nose! O Kūḍala saṅgama Lord, O Thou most bountiful, I am Mādāra Cennayya’s servant- man ! Translated by: L M A Menezes, S M Angadi
Hindi Translation वेद-विरुद्ध म्यान बाँधूँगा, शास्त्र को बेडियाँ पहनाऊँगा तर्क की पीठ पर कोडे लगाऊँगा, देखो; आगम की नाक काटूँगा महादानी कूडलसंगमदेव , मातंग चन्नय्या के घर का दास हूँ मैं॥ Translated by: Banakara K Gowdappa
Telugu Translation కత్తి కట్టెద వేదమునకు; సంకెలు వైతు శాస్త్రమునకు గుండు నెత్తెద తర్కమునకు; ముక్కు కోతు ఆగమమునకు సంగా! మాదార చెన్నయ్య యింటి బిడ్డ నేనయ్యా! Translated by: Dr. Badala Ramaiah
Tamil Translation வேதத்திற்கு உறை கட்டுவேன், சாத்திரத்திற்கு விலங்கு பூட்டுவேன், தருகத்தின் முதுகுத்தோலை உரிப்பேன் ஆகமத்தின் மூக்கைக் கொய்வேன், காணாய் பெருவள்ளல் கூடல சங்கமதேவனே சக்கிலி சென்னய்யனின் இல்லத்து மகன் நான் ஐயனே. Translated by: Smt. Kalyani Venkataraman, Chennai
Marathi Translation वेदांना बांधून ठेवीन, शास्त्राला बेड्या ठोकीन. तर्काच्या पाठीवर चाबूक मारीन, आगमाचे नाक कापतो. महादानी कूडलसंगमदेवा मादार चन्नय्याच्या घरी मी खाल्ले. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವೇದಶಾಸ್ತ್ರಗಳಲ್ಲಿ ಕುರುಡು ನಂಬಿಕೆ ಸಲ್ಲದು ಬಹು ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮಶಾಸ್ತ್ರಗಳು ವೇದಗಳನ್ನೇ ಆಶ್ರಯಿಸಿಕೊಂಡು ಬಂದಿವೆ. ವೇದದಲ್ಲಿರುವ ಒಂದೂಂದು ಪದಕ್ಕೂ ಬೆಲೆಯನ್ನು ಕೊಟ್ಟು, ಅದರಲ್ಲಿ ಕಿಂಚಿತ್ತೂ ವ್ಯರ್ಥವೆಂಬುದೇ ಇಲ್ಲವೆಂಬ ವಿಶ್ವಾಸವನ್ನು ಹೊಂದಿವೆ. ದೇವರ ಬಗ್ಗೆ ಆಸ್ತಿಕ ಬುದ್ಧಿಯಿರಲಿ, ಬಿಡಲಿ, ವೇದಕ್ಕೆ ಮನ್ನಣೆಯನ್ನು ನೀಡಿದರೆ ಸಾಕು, ಅಂಥವರನ್ನು ಆಸ್ತಿಕರೆಂದು ಅಂಗೀಕರಿಸಿ, ಉಳಿದವರನ್ನು ನಾಸ್ತಿಕರೆಂದು ಕಡೆಗಣಿಸಿದೆ. ಹೀಗಾಗಿ ದೇವರಿಗಿಂತಲೂ ಮಿಗಿಲಾದ ಮಾನ್ಯತೆಯನ್ನು ವೇದಕ್ಕೇ ನೀಡಲಾಗಿದೆಯೆಂದರೆ ಅತಿಶಯೋಕ್ತಿಯೇನೂ ಆಗಲಾರದು. ಹೀಗೆ ಪರಮ ಪ್ರಧಾನವೂ ಪರಮಾಧಾರವೂ ಆದ ವೇದವೇ ಆಗಲಿ, ಅದನ್ನು ಅವಲಂಬಿಸಿ ಬಂದಿರುವ ಶಾಸ್ತ್ರಗಳೇ ಆಗಲಿ ಜಾತಿಯಿಂದ ಕುಲಹೀನರಾದವರೊಡನೆ ಕೂಡಿ ಬಾಳುವುದು ಸರಿಯಲ್ಲವೆಂದರೆ ಅವುಗಳನ್ನೂ ಪ್ರತಿಭಟಿಸಲು ಅಣ್ಣನವರು ಹಿಂಜರಿಯುವುದಿಲ್ಲ. ಜನ್ಮದಿಂದ ಕುಲಹೀನನೆಸಿದರೂ ಆಚರಣೆಯಿಂದ ಕುಲಜನಾದ, ಅನುಪಮ ಚರಿತ್ರನಾದ, ಶರಣ ಶ್ರೇಷ್ಠ ಮಾದಾರ ಚೆನ್ನಯ್ಯನನ್ನು ತನ್ನ ತಂದೆಯನ್ನಾಗಿಯೇ ಗೌರವಿಸಿ ‘ಮಾದಾರ ಚೆನ್ನಯ್ಯನ ಮನೆಯ ಮಗನಾನಯ್ಯಾ’ ಎಂದಿದ್ದಾನೆ ಬಸವಣ್ಣ. ಈ ಮಾನವತಾ ಪ್ರೇಮಕ್ಕೆ ಅಡ್ಡಬರುವ ವೇದಗಲ ಮೇಲೆ ಕೆರಳಿ ಕತ್ತಿಯನ್ನು ಝಳಪಿಸಿದ್ದಾನೆ. ಧರ್ಮಶಾಸ್ತ್ರಗಳ ಕಾಲಿಗೆ ಸರಪಳಿಯನ್ನು ಬಿಗಿದು ಬಂಧಿಸುವುದಾಗಿ ಬೆದರಿಸಿದ್ದಾನೆ. ತರ್ಕಶಾಸ್ತ್ರಗಳ ಬೆನ್ನ ಮೇಲೆ ಬಾರಿಸುವುದಾಗಿ ಬಾರಿಕೋಲನೆತ್ತಿ ಬೆನ್ನಟ್ಟಿದ್ದಾನೆ, ಆಗಮಗಳ ಮೂಗನ್ನು ಕೊಯ್ದು ಕುರೂಪಗೊಳಿಸಿ ಅವಮಾನಪಡಿಸುವುದಾಗಿ ರೊಚ್ಚಿಗೆದ್ದಿದ್ದಾನೆ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.