•  
  •  
  •  
  •  
Index   ವಚನ - 718    Search  
 
ಮಾಹೇಶ್ವರನ ಭಕ್ತಸ್ಥಲ - ಜಾತಿ
ಆವ ಕುಲವಾದಡೇನು? ಶಿವಲಿಂಗವಿದ್ದವನೆ ಕುಲಜನು. ಕುಲವನರಸುವರೆ ಶರಣರಲ್ಲಿ, ಜಾತಿ ಸಂಕರನಾದ ಬಳಿಕ? 'ಶಿವೇ ಜಾತಃಕುಲೇಧರ್ಮ| ಪೂರ್ವಜನ್ಮ ವಿವರ್ಜಿತಃ ಉಮಾ ಮಾತಾ ಪಿತಾ ರುದ್ರ| ಈಶ್ವರಃ ಕುಲಮೇವ ಚ' ಎಂದುದಾಗಿ, ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ, ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣರನು.
Transliteration Āva kulavādaḍēnu? Śivaliṅgaviddavane kulajanu. Kulavanarasuvare śaraṇaralli, jātisaṅkaranāda baḷika? 'Śivējātaḥkulēdharma| pūrvarjanma vivarjitaḥ umā mātā pitā rudra| aiśvaraḥ kulamēva ca' endu, okkuda kombenavaralli, kūsa koḍuve, kūḍalasaṅgamadēvā, nambuve nim'ma śaraṇaranu.
Manuscript
English Translation 2 What signifies what caste they be ? He who has Śiva Liṅga is well born. Will you, once classes have been mixed, Look for their class in Śaraṇas? The class that’s born of Śiva- that is Faith; Give up your bygone caste: For Uma is your mother, Rudra your sire, Īśvara is your only clan. Since this is so , whatever they give At theirs, I take, give them my child, For I believe in your Śaraṇas, O Kūḍala saṅgama Lord! Translated by: L M A Menezes, S M Angadi
Hindi Translation चाहे किसी जात का क्यों न हो, शिवलिंगधारी ही कुलीन है। शरणों में जाति ढूँढते हो, जाति संकरता के पश्चात्? शिवधर्म कुलेजातः पुनर्जन्म विवर्जितः । उमा माता पिता रुद्र ऐश्वर्र्यं कुलमेव च॥ अतः उनका प्रसाद लूँगा, उन्हें कन्या दूँगा कूडलसंगमदेव, तव शरणों का विश्वास करूँगा॥ Translated by: Banakara K Gowdappa
Telugu Translation ఏ కులమైననేమి! శివలింగము కలవాడే కులజుడు: కులము నెంతురే శరణులందు; జాతి సంకరుడైన వెనుక? ‘‘శివే జాతకులే ధర్మ! పూర్వ జన్మవివర్జితః ఉమా మాతా పితారుద్రో ఈశ్వరః కులమేవచ’’ అని ప్రసాదముకొని బ్రతుకువారికి బిడ్డ నిత్తు నమ్మెద నీ శరణుల కూడల సంగమ దేవా! Translated by: Dr. Badala Ramaiah
Tamil Translation எக்குலமாயினென்ன? சிவலிங்கமுள்ளவனே நற்குலத்தோன், சாதியினை விட்ட அடியாரிடம் குலத்தைத் தேடுவரோ? “சிவதர்மகுலேஜாத: புனர்ஜன்ம விவர்ஜித: உமா மாதா பிதாருத்ர ஜச்வரம் குலமேவச” என்பதால் அவரிடம் எஞ்சியதைக் கொள்வேன், பெண் கொடுப்பேன் கூடல சங்கமதேவனே, உம் அடியாரை நம்புவேன். Translated by: Smt. Kalyani Venkataraman, Chennai
Marathi Translation कोणत्या कुळात जन्मले शरण व्यर्थचि जाण शोधणे ते जाती संकरणे, लिंगधारी कुलीन उच्चतेचि जाण, देती ग्वाही ""शिवधर्मं कुलेजात पुनर्जम विवर्जित : उमा माता पिता रुद्र ऐश्वर्य कुलमेव च "" तया शेष प्रसाद, सेवन करीन तयांसगे जोडीन, खासा जाण अर्थ - शिवशरणांची जात वा कुळ शोधता कशाला? पूर्वाश्रमीचे ते कोणत्याही जातीचे वा कुळातले असोत, शिवलिंगदीक्षा घेतल्यानंतरच वा लिंगधारी झाल्यानंतर ते कुलीनच असतात. कारण लिंग संस्कारामुळे ते कुलीनच होतात. म्हणून त्यांचा शेष प्रसाद सेवन करीन, त्यांच्याशी रोटी बेटीचा व्यवहार करीन. कूडलसंगमदेवा (परमेश्वरा) त्यांच्यावर विश्वास ठेवीन. शिवधर्म कुलेजातः शिवाच्या करगर्भात वाढून, शिवलिंग प्राणी शिवमंत्र शरीरी जन्मणाऱ्या शिवशरणांची जात, धर्म, व कूल विचारू नयेत पुनर्जन्म विवर्जितः त्याची जात, कुलगोत्र, वर्णाश्रम नष्ठ झाल्यामुळे त्यांना पुनर्जन्म नाही. ते इहलोकी व परलोकी शिवमय असतात. उमा माता पिता रुद्र माता पार्वतीदेवीच्या उदरी जन्मणाऱ्या व पिता रुद्रमूर्ती जनक असता. ऐश्वर्य कुलमेवच त्यांचे कुल शिवकुल असल्याचा वेद लिखित व ईश्वरी वाणी ग्वाही देत आहे. Translated by Rajendra Jirobe, Published by V B Patil, Hirabaug, Chembur, Mumbai, 1983 कोणतेही कुळ असेल तरी काय झाले? लिंगदेव राहणारा ही श्रेष्ठ कुलीन आहेत. कुळ शोधणार शरणात, जाती संकर झाल्यावर? शिवधर्म कुलेजातः पुनर्जन्म विवर्जितः। उमा माता पिता रुद्र ऐश्वर्य कुलमेवच। म्हणून शरणांचा शेषप्रसाद सेवन करीत नाते जोडतो. कूडलसंगमदेवा, विश्वास ठेवतो तुमच्या शरणावर. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹಿಂದೂ ಮತ್ತಿತರ ಎಲ್ಲ ಭಾರತೀಯ ಧರ್ಮಗಳಿಂದ ಹಲವರು ಜಾತಿಯ ಜನ ಸೇರಿಯೇ ಬಸವಣ್ಣನವರ ಶಿವಧರ್ಮ ಸ್ಥಾಪಿತವಾಯಿತು. ಅಂದಮೇಲೆ ಈ ಶಿವಧರ್ಮದಲ್ಲಿ ಮರಳಿ ಜಾತಿಯನ್ನು ವಿಂಗಡಿಸಬಾರದು, ಲಿಂಗಧರಿಸಿದವರು ಯಾವ ಜಾತಿಯಿಂದಲೇ ಬಂದವರಾಗಲಿ -ಅವರೆಲ್ಲರೂ ಸಮಾನವಾಗಿ ಶ್ರೇಷ್ಠರೆಂದೇ ಗಣನೆಯಾಗಬೇಕು. ಈ ಶಿವಧರ್ಮವನ್ನು ಸೇರಿದ ಮೇಲೆ ಎಲ್ಲರೂ ಶಿವಪಾರ್ವತಿಯರ ಮಕ್ಕಳೇ, ಅವರೆಲ್ಲರದೂ ಶಿವಕುಲವೇ. ಆದ್ದರಿಂದ ಅವರ ಮನೆಯಲ್ಲಿ ಊಟ ಮಾಡುತ್ತೇನೆ-ಅಷ್ಟೇ ಅಲ್ಲ- ಹೆಣ್ಣನ್ನು ಕೊಟ್ಟು ತರುವ ಸಂಬಂಧವನ್ನು ಒಪ್ಪುತ್ತೇನೆ – ಎನ್ನುತ್ತ ಬಸವಣ್ಣನವರು ಶರಣಧರ್ಮವನ್ನು ಸಂಘಟಿಸಿ-ಅದರಲ್ಲಿ ಎಂದಿಗೂ ಒಳಪಂಗಡಗಳು ಏರ್ಪಡಬಾರದೆಂದು ಅಪ್ಪಣೆ ಮಾಡಿರುವರು. ವಿ : (1) ವಚನದ “ಕೂಸ ಕೊಡುವೆ” ಎಂಬ ಮಾತಿನಿಂದ ಬಸವಣ್ಣನವರಿಗೆ ಸಂಗಯ್ಯನೆಂಬ ಒಬ್ಬ ಮಗನೇ ಅಲ್ಲದೆ (ಕಡೆಯ ಪಕ್ಷ) ಒಂದು ಹೆಣ್ಣು ಮಗುವೂ ಇದ್ದಿತೆನ್ನಿಸುವುದು. ನೋಡಿ ವಚನ 755. (2) ವೈದಿಕ ಧರ್ಮದಲ್ಲಿ “ಜಾತಿಸಂಕರ”ವೆಂಬುದು ನಿಷಿದ್ಧ, ಬಸವಣ್ಣನವರ ಧರ್ಮದಲ್ಲಿ ಅದು ಪ್ರಸಿದ್ಧ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು