•  
  •  
  •  
  •  
Index   ವಚನ - 719    Search  
 
ಮಾಹೇಶ್ವರನ ಭಕ್ತಸ್ಥಲ - ನಡೆ-ನುಡಿ
ಕಳ್ಳ ಬಂದಿಕಾರ, ಹಾವಾಡಿಗ, ಹಾದರಿಗ, ಬಂಟನೋಲೆಯಕಾರನೆಂದೆನಾದರೆ;- ನೀ ಮುಂತಾಗಿ ಬಂದ ಭಕ್ತರ ನೀಯೆನ್ನದಿದ್ದರೆ, ಅದೇ ದ್ರೋಹ. ನಡೆ ನುಡಿ ಹುಸಿಯುಂಟಾದರೆ, ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ!
Transliteration Kaḷḷa bandikāra, hāvāḍiga, hādariga, baṇṭanōleyakāranendādare;- nī muntāgi banda bhaktara nī'ennadiddare, adē drōha. Naḍe nuḍi husiyuṇṭādare, kūḍalasaṅgana tōrida cennabasavaṇṇanāṇe!
Manuscript
English Translation 2 If I call men by several names: Thieves, highwaymen, Snake-charmers, fornicatiors. Servants of martial men; And if I fail to say The bhaktas who have come, with you on Are all but you-it's my offence. If I belie my word or deed, May Cennabasavaṇṇa's curse- His who has shown me Kūḍala Saṅgama- Be upon me! Translated by: L M A Menezes, S M Angadi
Hindi Translation लिंगधारण कर भक्तों में तुम्हें न देखूँ और उन्हें चोर, लुटेरे, सँपेरे, व्यभिचारी सैनिक या सेवक कहते भेद मानूँ, तो वह द्रोह है । मेरी करनी और कथनी में च्युति हो, तो मुझे कूडलसंगमेश को दर्शानेवाले चन्नबसवण्णा की सौगंध है ॥ Translated by: Banakara K Gowdappa
Telugu Translation దొంగ, బందిపోటు, ఱంకు, పాములవాడు, బంటు; పరిచారకులని నీ భక్తుల కసర వచ్చునే? ఈ వచ్చు భక్తుల నిన్నుగా తలపకున్న ద్రోహమయ్యా: నా నడనుడల తప్పిన చెన్నబసవడే సాక్షి దేవా! Translated by: Dr. Badala Ramaiah
Tamil Translation கள்ளன், சூறையாடுவோன், பாம்பாட்டி, காமுகன் சேவகன், சிப்பாய் என்றேன் எனின், உன் முதற்கொண்டு வந்த பக்தரை உன்னைப் போலே காணேன் எனின் அது துரோகம் சொல்லில், செயலில் பொய் இருப்பின் கூடல சங்கனைக் காட்டிய சென்ன பசவன் மீது ஆணை Translated by: Smt. Kalyani Venkataraman, Chennai
Marathi Translation चोर, कैदी, गारुडी, व्यभिचारी, योध्दा, सेवक इष्टलिंग दीक्षेसाठी आले तर त्यांच्यात भेद करीत नाही. तुमच्यासह आलेल्या भक्तांना तुमच्या ठिकाणी न मानणे हा द्रोह आहे. वागण्याबोलण्यात एकता नसेल तर कूडलसंगाला दाखविणाऱ्या चन्नबसवण्णांची शपथ. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹೀಗೆ ಬಸವಣ್ಣನವರ ಶಿವಧರ್ಮಕ್ಕೆ ಸಾಮಾಜಿಕವಾಗಿ ಸರಾಸರಿಗಿಂತ ಕೆಳದರ್ಜೆಯ ಹಲವಂದದ ಪಂಗಡ ಬುಡಕಟ್ಟಿನ ಗುಡ್ಡಗಾಡಿನ ವಿಶಿಷ್ಟ ಪರಿಶಿಷ್ಟ ವರ್ಗದ ಜನರೂ ಸೇರಿದ್ದು – ಅವರಲ್ಲಿ ಹಲವರು ಹಾವಾಡಿಗರಂತೆ ಅಲೆಮಾರಿ ಕಾಯಕದವರೂ, ಬಂದಿಕಾರ ಬಂಟ ಓಲೆಯಕಾರರಂತೆ ವಿವಿಧ ಚಾಕರಿಯ ಜನರೂ ಇದ್ದರಲ್ಲದೆ, ಕಳ್ಳತನದಿಂದಲೇ ಹಾದರದಿಂದಲೇ ಜೀವನ ನೀಸಬೇಕಾಗಿದ್ದ ಆಜನ್ಮ ಅಪರಾಧ (ಪ್ರ)ವೃತ್ತಿಯವರೂ ಇದ್ದರು. ಇಂಥವರಲ್ಲಿ ಕಳ್ಳರೆಂಬ(ಜಾತಿಯ)ವರು ಹಾದರಿಗರೆಂಬ(ಜಾತಿಯ)ವರು ತಮ್ಮ ಪೂರ್ವರೂಢಿಯ ಅಪರಾಧಗಳನ್ನು ಕೈಬಿಟ್ಟು ಸಜ್ಜನರೇ ಆಗಿ ಪರಿವರ್ತನೆಗೊಂಡಿದ್ದರೂ-ಜನ ಅವರ ಹಳೆಯ ವೃತ್ತಿಗಳನ್ನು ಎಣಿಸಿ ಜರಿಯುವುದನ್ನು ಬಿಟ್ಟಿರಲಿಲ್ಲ. ಆ ಸಂದರ್ಭದಲ್ಲಿ ಬಸವಣ್ಣನವರು ಲಿಂಗಧಾರಿಗಳಾದ ಆ ಎಲ್ಲರನ್ನೂ ತಾರತಮ್ಯವಿಲ್ಲದೆ ಶಿವಸಮಾನವಾಗಿಯೇ ಗೌರವಿಸುವೆನೆನ್ನುತ್ತ-ಇನ್ನಿತರರಿಂದಲೂ ಅದೇ ನಡೆವಳಿಯನ್ನು ನಿರೀಕ್ಷಿದರು. ಈ ವಚನವನ್ನು ವಿಶ್ಲೇಷಿಸಿ ನೋಡಿದರೆ-ಎಷ್ಟು ಬಗೆಯ ಪರಿತ್ಯಕ್ತ ಪಾಮರಜನಾಂಗದವರಿಗೆ ಬಸವಣ್ಣನವರು ತಮ್ಮ ಧರ್ಮಚ್ಛತ್ರದಡಿಯಲ್ಲಿ ಏಕಾಸನದಲ್ಲಿ ಆಶ್ರಯಕೊಟ್ಟಿದ್ದರೆಂಬುದು ಕಣ್ಣಿಗೆ ಕಟ್ಟಿದಂತಾಗುವುದು. ವೃತ್ತಿಯಿಂದ ಹಾವಾಡಿಗರಾದವರೂ ಲಿಂಗ ಕಟ್ಟಿಕೊಂಡು ಬಸವಣ್ಣನವರ ಧರ್ಮಕ್ಕೆ ಸೇರಿದ್ದರೆಂದರೆ-ಆ ಧರ್ಮ ಅದೆಷ್ಟು ವ್ಯಾಪಕವಾಗಿ ಜನಸಾಮ್ಯಾನ್ಯಪ್ರಿಯವಾಗಿತ್ತೆಂಬುದು ಸ್ವತಸ್ಸಿದ್ಧವಾಗುವುದು. ವಿ : ಬಂದಿಕಾರ : ಚಿನ್ನದ ಬೆತ್ತ ಬೆಳ್ಳಿಯ ಬೆತ್ತ ಹಿಡಿದುಕೊಂಡು ಬಾಜುಬಿಡಿಸುವವನು. ಬಂಟ : ಅಟ್ಟೂಳಿಗ ಹರದೂಳಿಗವನ್ನು ಮಾಡಿಕೊಂಡಿರುವಂಥ ಪಟುಭಟನು. ಓಲೆಕಾರ : ಕತ್ತಿಕಂದಲಿಯನು ಹಿಡಿದುಕೊಂಡು ಓಲೈಸುವಂಥ ಚಾಕರಿ ಮಾನವನು (ಹಳೆಯ ವ್ಯಾಖ್ಯಾನದಿಂದ)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು