•  
  •  
  •  
  •  
Index   ವಚನ - 720    Search  
 
ಮಾಹೇಶ್ವರನ ಭಕ್ತಸ್ಥಲ - ಇಷ್ಟಲಿಂಗ
ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲಿ ಸುರೆಯ ಗಡಿಗೆ- ಕೊರಳಲಿ ದೇವರಿರಲಿ ಅವರ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು!
Transliteration Eḍada kaiyali katti, balada kaiyali mānsa, bāyali sureya gaḍige- koraḷali dēvarirali avara liṅganembe, saṅganembe, kūḍalasaṅgamadēvā, avara mukhaliṅgagaḷembenu!
Manuscript
English Translation 2 Sword in their left hand, flesh in their right, And at their lips the toddy- pot- Let but the God be round their neck, I call them Liṅga, I call them Saṅga, I call them, O Kūḍala Saṅgama Lord, Liṅga's mouths! Translated by: L M A Menezes, S M Angadi
Hindi Translation बाएँ हाथ में खङ्ग दाहिने हाथ में माँस, मुँह में सुरापात्र और कंठ में लिंग, हो तो उन्हें लिंग कहूँगा, संगमेश कहूँगा कूडलसंगमदेव उन्हें लिंगमुखी कहूँगा॥ Translated by: Banakara K Gowdappa
Telugu Translation ఎడమచేత కత్తిబట్టి కుడిచేత మాంసము కంపుగొట్ట నోట కల్లుముంతగల్గి గొంతున శివుడుండెనా! వానినే లింగ మందు, సంగ డందు, సంగయ్యా వానినే ముఖలింగు డందునయ్యా! Translated by: Dr. Badala Ramaiah
Tamil Translation இடக்கையில் கத்தி, வலக்கையில் ஊன் வாயில் கள்ளுப்பானை, கழுத்தில் இலிங்கம் இருப்பின் அவரை இலிங்கமென்பேன், சங்கனென்பேன் கூடலசங்கம தேவனே, அவரை முகமுள்ள இலிங்க உருவினர் என்பேன் Translated by: Smt. Kalyani Venkataraman, Chennai
Marathi Translation डाव्याहाती तलवार घरी उजवे हाती मांस असो सुरापानही केलेला पाहि देहि लिंगास तरीही त्या लिंगदेव मानिन संगमदेवचि खास तसाही मज तो मान्य लिंगमुखी तो कूडलसंगमेश अर्थ - हे प्रभो ! एखाद्याच्या एका हाती तलवार दुसऱ्या हाती मांस आणि मदिरा असूनही जर त्यांच्या गळ्यात मला इष्टलिंग दिसले तर त्यास मी लिंगमुखी संगमदेवच मानीन हे कूडलसंगमदेवा ! (परशिवा) अशी माझी निष्ठा व असा माझा दृढ विश्वास आहे. Translated by Rajendra Jirobe, Published by V B Patil, Hirabaug, Chembur, Mumbai, 1983 डाव्या हातात तलवार, उजव्या हातात मांस, तोंडात सुरापात्र, असूनही गळ्यात इष्टलिंग बांधलेले पाहिजे तर त्याला लिंगदेव म्हणतो, संगमदेव म्हणतो. कूडलसंगमदेवा, त्यांना मुखलिंगी मानतो. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ದೇಶದ ಬಹುಸಂಖ್ಯಾತ ಜನರನ್ನು ಸ್ವಂತ ದೇಶದಲ್ಲಿದೇ ಪರದೇಶಿಗಳನ್ನಾಗಿ ಮಾಡಿದ ವೈದಿಕರ ಪ್ರಸ್ತಾಪ ಬಂದೊಡನೆಯೇ ಉಗ್ರವಾಗುವ ಬಸವಣ್ಣನವರು-ಆ ಬಹಿಷ್ಕೃತ ದಲಿತರ ಮಾತು ಬಂದಾಗಲಂತು ವ್ಯಥಿತರಾಗುತ್ತಿದ್ದರು, ಮೆದುವಾಗುತ್ತಿದ್ದರು. ಆ ದಲಿತರು ಶಿವಧರ್ಮಕ್ಕೆ ಬರುವ ಮುನ್ನ ತಮ್ಮ ದಿಕ್ಕುಗೆಟ್ಟ ಪೂರ್ವಜೀವನದಲ್ಲಿ ಹತಾಶೆಯಿಂದ ಆರಂಭಿಸಿದ್ದ ಮದ್ಯಪಾನ ಮುಂತಾದ ದುಶ್ಚಟಗಳನ್ನು ಕಠಿಣಕ್ರಮಗಳಿಂದ ಬಿಡಿಸಲಾಗದೆಂದು ಮನಗಂಡಿದ್ದ ಬಸವಣ್ಣನವರು ಅವರ ಆ ದುಶ್ಚಟಗಳನ್ನು ಅವರ ಮೇಲಣ ವಾತ್ಸಲ್ಯದಿಂದಲೇ ಸಹಿಸುತ್ತಿದ್ದುದೂ ಉಂಟು. ಎಡಗೈಯಲ್ಲಿ ಖಡ್ಗ, ಬಲಗೈಯಲ್ಲಿ ಮಾಂಸ, ಬಾಯಲ್ಲಿ ಹೆಂಡವಿದ್ದ ದಲಿತಶಿವಭಕ್ತನೊಬ್ಬನನ್ನು ಬಸವಣ್ಣನವರು ಆಕಸ್ಮಿಕವಾಗಿ ಎದುರುಗೊಂಡರೆನ್ನಿ ಆಗ ಅವನ ಮೇಲೆ ಅವರಿಗೆ ಅನುಕಂಪೆಯಷ್ಟೇ ಏಕೆ –ಅವನು ಮಾನವಾಕಾರದ ಮಹಾದೇವನೆಂದೇ ಭಾವಿಸಲು ಅವರಿಗೆ ಬಾಧೆಯೇನೂ ಆಗುತ್ತಿರಲಿಲ್ಲ. ವಿ : ಮುಖಲಿಂಗಪದಪ್ರಯೋಗಕ್ಕೆ ನೋಡಿ 411ನೇ ವಚನವನ್ನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು