•  
  •  
  •  
  •  
Index   ವಚನ - 721    Search  
 
ಮಾಹೇಶ್ವರನ ಭಕ್ತಸ್ಥಲ - ಭಕ್ತಿನಿಷ್ಟೆ
ಗುಮ್ಮಡಿಯಂತಪ್ಪ ತಾಯಿ ನೋಡೆನಗೆ, ಕಲಕೇತನಂತಪ್ಪ ತಂದೆ ನೋಡೆನಗೆ. ಮೋಟನಂತಪ್ಪ ಗಂಡ ನೋಡೆನಗೆ! ಮರಗಾಲಲಟ್ಟ್ಟಿ ಸದೆದು ನೋಡಯ್ಯಾ: ಇಂದೆನ್ನ ಒಕ್ಕತನ ಹೋದರೆ ಹೋಗಲಿ ಮರಗಾಲ ಬಿಟ್ಟೆನಾದರೆ, ಕೂಡಲಸಂಗಾ ನಿಮ್ಮಾಣೆ!
Transliteration Gum'maḍiyantappa tāyi nōḍenage, kalakētanantappa tande nōḍenage. Mōṭanantappa gaṇḍa nōḍenage! Maragālalaṭṭi sadedu nōḍayya: Indenna okkatana hōdare hōgali maragāla biṭṭenādare, kūḍalasaṅga nim'māṇe!
Manuscript
English Translation 2 My mother seems to me a female demon My father seems a male one, My husband seems a cripple! Look Sir, you chase and bruise me With wooden legs: Let now my wifely state go hang, even now- Thy curse be upon me, O Kūḍala Saṅga Lord If I should leave the wodden legs! Translated by: L M A Menezes, S M Angadi
Hindi Translation देखो, मेरी माँ पिशाचिनी सी है, बाप पिशाच सा, मेरा पति पंगु सा है! काठ के पैरों से पीछा कर पीट कर देखो । आज मेरा दांपत्य-जीवन टूट क्यों न जाय काठ के पैर छोड दूँ, तो तव सौगंध है, कूडलसंगमदेव ॥ Translated by: Banakara K Gowdappa
Telugu Translation నా తల్లి దయ్యము; నా తండ్రి పిశాచి; నా పతి కుంటివాడు నా కాలికి తుండు తగిలింపుమా; నా కాపుర మిక్కడికే చెడినా చెడనీ! తుండు మాత్రము నీ సాక్షిగా తొలగింప యత్నింపనయ్యా, సంగమదేవా! Translated by: Dr. Badala Ramaiah
Tamil Translation பெண் பிசாசனைய தாய் விளங்க ஆண் பிசாசனைய தந்தை விளங்க கையற்று கணவன் விளங்க மரக் காலால் துகைத்தான் ஐயனே கூடி வாழ்வது அகன்றால் அகலட்டும் மரப்பாதுகையை விடின், சங்கனே உம்மாணை. Translated by: Smt. Kalyani Venkataraman, Chennai
Marathi Translation लिंगधारी हडळ आई पहा माझी. लिगधारी पिशाच बाप पहा माझा. लिंगधारीचा पुत्र पती पहा माझा. माझे पावित्र्य कसाला लावून पहा देवा. माझे सौभाग्य गेले तरी हरकत नाही. चरणसेवा सोडत नाही कूडलसंगमदेवा तव शपथ. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನನ್ನ ತಾಯಿ ನೋಡಿದರೆ ಗುಮ್ಮಡಿ(ಬತ್ತಲೆ ?)ಯಾದವಳು. ನನ್ನ ತಂದೆಯಾದರೋ ವಿಚಿತ್ರ ವೇಷದ ವಿದೂಷಕ(ಕಲಕೇತ)ನು – ಇದು ನನ್ನ ತವರುಮನೆಯ ಕಥೆಯಾಯಿತು. ಇನ್ನು ನನ್ನ ಗಂಡನ ಮನೆಯಲ್ಲಾದರೂ ಸುಖವಿದೆಯೇ ಎಂದರೆ – ಆ ಗಂಡ ಕೈಯಿಲ್ಲದ ಮೊಂಡ(ಮೋಟ)ನು. ಈ ದಾರುಣ ಜೀವನಕ್ಕೆ ಬೇಸತ್ತು, ಎಲೆ ಶಿವನೇ, ನಾನು ನಿನ್ನ ಮೊರೆಹೊಕ್ಕಿದ್ದೇನೆ. ನಿನ್ನ ಮರದ ಪಾದುಕೆಯಿಂದ ನೀನು ಸಿಕ್ಕಾಬಟ್ಟೆ ನನ್ನನ್ನು ಸದೆದರೂ ಸರಿಯೇ - ನಿನ್ನ ಪಾದಗಳನ್ನು ನಾನು ಬಿಡುವುದಿಲ್ಲ ಎನ್ನುವ ಒಂದು ಹೆಣ್ಣಿನ ದಾರುಣ ಜೀವನದ ಹಿನ್ನೆಲೆಯಲ್ಲಿ - ಬಸವಣ್ಣನವರು ಧರ್ಮಕ್ಷೇತ್ರದಲ್ಲಿ ಶರಣರ ಕಡೆಯಿಂದ ತಮಗಾದ ವಿಕಟ ಸಂಕಷ್ಟಗಳನ್ನು ಶಿವನಲ್ಲಿ ತೋಡಿಕೊಳ್ಳುತ್ತ ಈ ಕಷ್ಟಕಾಲದಲ್ಲಿ ಆ ಶಿವನಲ್ಲದೆ ಅನ್ಯರಾರೂ ರಕ್ಷಿಸುವರಿಲ್ಲವೆಂದು ಅವನಲ್ಲಿ ಅನನ್ಯವಾಗಿ ಮೊರೆಯಿಡುತ್ತಿರುವರು. ವಿ : ಈ ವಚನದಲ್ಲಿ ಬಸವಣ್ಣನವರು ಕೆಲವು ಶರಣರನ್ನು ಶ್ಲೇಷೆಯಿಂದ ಸ್ಮರಿಸುವಂತೆಯೂ ಇದೆ. ಶಿವಶರಣರಲ್ಲಿ ಕಲಕೇತ(ಬೊಮ್ಮಯ್ಯ)ನೆಂಬ, ಮೋಟ(ಮಲ್ಲಯ್ಯ)ನೆಂಬ ಶರಣರಿದ್ದರು, ಕಲಕೇತ ಬೊಮ್ಮಯ್ಯನು ಕಲಕೇತವೆಂಬ ಜನಪದಕಲೆಯ ಪ್ರಕಾರವೊಂದನ್ನು ತನ್ನ ಕಾಯಕ ಮಾಡಿಕೊಂಡು ಜಂಗಮದಾಸೋಹ ಮಾಡುತ್ತಿದ್ದವನು. ಈ ಕಲಕೇತಕಾಯಕದ ವಿವರವನ್ನು ಬಸವಪುರಾಣದಲ್ಲಿ ಅದೇ ಕಲಕೇತಬೊಮ್ಮಯ್ಯನ ಕಥಾಸಂದರ್ಭ (ಸಂಧಿ 29)ದಲ್ಲಿ ಕಾಣಬಹುದು : ಹಣೆಗೆ ವಿಭೂತಿಯನ್ನು ಧರಿಸಿ, ಕಿವಿಗೆ ಚಿಗುರನ್ನು ಸಿಕ್ಕಿಸಿಕೊಂಡು, ಕಾಗಿನ ಕಪ್ಪಡ (ಅಯ್ಯಪ್ಪನ ಭಕ್ತರು ಉಡುವಂಥ ಕಪ್ಪು ಧೋತ್ರ)ವನ್ನು ಉಟ್ಟು. ಎಡಗಾಲಿಗೊಂದು ಅಂದುಗೆಯನ್ನು ತೊಟ್ಟು, ಇನ್ನೊಂದು ಕಾಲಿಗೆ ಗೆಜ್ಜೆಯನ್ನು ಕಟ್ಟಿ – ಒಲೆದೊಲೆದು ನಡೆಯುತ್ತ, ಗಹಗಹಿಸಿ ನಗುತ್ತ –ಎಡದ ಕೈಯಲ್ಲಿ ಟಗರಿನ ಕೊಂಬನ್ನು ಘಿಲಿಕಿಯಾಗಿ ಘಿಲಿಘಿಲಿಸುತ್ತ, ಬಲದ ಕೈಯಲ್ಲಿ ಬೆಳುಗುದುಗೆಯನ್ನು ತಿರುವುತ್ತ – ಮುಂದಲೆಯ ಕೂದಲ ಗಂಟು ಲಯಬದ್ಧವಾಗಿ ಅಲುಗುವಂತೆ ಕುಣಿಯುತ್ತ –ಧರಾರುದ್ರ ನಿಟಿಲಾಗ್ನಿಯ ಟಗರು ಬಂದ, ವೀರಭದ್ರನ ಮದಕರಿ ಬಂದ, ದುಗ್ಗಳವ್ವೆಯ ಮಗ ಬಂದ, ಸಂಗಳವ್ವನ ತಮ್ಮ ಬಂದ, ಅಮ್ಮಗಳಿರಾ ಅಕ್ಕಗಳಿರಾ” ಎಂದು ಹಾಡುತ್ತ ಭಕ್ತರನ್ನು ನಗಿಸುತ್ತ ಆ ಕಾಯಕದಿಂದ ಬಂದ ಭತ್ತದಿಂದ ಜಂಗಮದಾಸೋಹ ಮಾಡುತ್ತಿದ್ದ. ಮೋಟಮಲ್ಲಯ್ಯ : ಇವನು ದಸರಯ್ಯನೆಂಬ ಅಹಿಂಸಾವಾದಿ ಶಿವಶರಣನನ್ನು ಪರಪ್ರೇರಣೆಯಿಂದ ನೋಯಿಸಿದವನು. ಇವನಿಗೆ ಕೈಗಳಿರಲಿಲ್ಲ – ಆದುದರಿಂದಲೇ ಇವನು ಮೋಟ. ಇವನು ತನ್ನ ಮೊಂಡುಕೈಗಳಿಂದಲೇ ದಸರಯ್ಯಾನನ್ನು ಗುದ್ದಿ ಅವನ ಕೃಪೆಗೆ ಪಾತ್ರನಾಗಿ –ಆ ಮೇಲೆ ಮಹಾಶಿವಭಕ್ತನಾದನೆಂಬುದು ಪ್ರಸಿದ್ಧವೇ ಇದೆ. (ಈ ವಚನದಲ್ಲಿ ಬಸವಣ್ಣನವರು ಒಬ್ಬ ಗುಮ್ಮಡಿಯನ್ನು ತಾಯೆಂದಿರುವರು. ಆ ಶಿವಭಕ್ತೆ ಯಾರೆಂದು ತಿಳಿಯಲಿಲ್ಲ.)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು