ಮಾಹೇಶ್ವರನ ಭಕ್ತಸ್ಥಲ - ಆತ್ಮಶುದ್ಧಿ
ತನುವ ಬಂದಲೆವರಯ್ಯಾ ಎನ್ನ, ಮನವ ಬಂದು ನೋಡುವರಯ್ಯಾ ,
ಎನ್ನ ಧನವ ಬಂದು ಸೂರೆಗೊಂಬರಯ್ಯಾ
ಜಂಗಮವನವರತ!
ಕೂಡಲಸಂಗಮದೇವಾ,
ನಿಮ್ಮ ಬಯ್ಕೆಯ ಭಂಡಾರಕ್ಕೆ ನಾನು ಶುದ್ಧನಯ್ಯಾ.
Transliteration Tanuva bandalevarayyā enna, manava bandu nōḍuvarayya,
enna dhanava bandu sūregombarayya
jaṅgamavanavarata!
Kūḍalasaṅgamadēvā,
nim'ma baykeya bhaṇḍārakke nānu śud'dhanayyā.
Manuscript
English Translation 2 They come and shake my body, test my heart,
They come and loot my wealth-
They always do, the Jaṅgama !
O Kūḍala Saṅgama Lord,
I keep unspotted from the wealth
That you concealed?
Translated by: L M A Menezes, S M Angadi
Hindi Translation जंगम सदा मेरा तन हिलाते हैं,
मन परखते हैं, मेरा धन लूटते हैं ।
तव कामना-भंडार के लिए
मैं परिशुद्ध हूँ कूडलसंगमदेव ॥
Translated by: Banakara K Gowdappa
Telugu Translation తనువుబట్టి యాడిరతురయ్యా; మనసు కలచి వేధింతురయ్యా!
ధనముగోరి తెగదోతురయ్యా; జంగములు వచ్చి సంగయ్యా;
నీ కాంక్షా భండారమునకు నేను నిర్మలుడనయ్యా!
Translated by: Dr. Badala Ramaiah
Tamil Translation என் உடலை வந்து அசைப்பர் ஐயனே
என் மனத்தை வந்து காண்பர் ஐயனே
ஜங்கமர் எப்பொழுதும் என் செல்வத்தை
வந்து சூறைகொள்வர் ஐயனே
கூடல சங்கம தேவனே, நீர் விரும்பும்
பக்தி பண்டாரத்திற்கு நான் தூயோன் ஐயனே.
Translated by: Smt. Kalyani Venkataraman, Chennai
Marathi Translation
सदा जंगम येऊन तन पारखतील माझे.
मन पारखतील माझे, धन घेतील सारे देवा.
कूडलसंगमदेवा, तुम्हाला सगळे अर्पण करुन मी शुध्द झालो देवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಂದು ಮನೆಯ ಮಕ್ಕಳ ನಾಮಕರಣ ವಿದ್ಯಾಭ್ಯಾಸ ಮದುವೆಗಾಗಿ, ಬರ ಬೆಂಕಿ ಮುಂತಾದ ಆಕಸ್ಮಿಕಗಳ ಪರಿಹಾರಕ್ಕಾಗಿ, ಕಳ್ಳತನ ದರೋಡೆ ಮುಂತಾದ ದೌಷ್ಟ್ಯಗಳಿಂದ ಚೇತರಿಸಿಕೊಳ್ಳುವುದಕ್ಕಾಗಿ ಒಬ್ಬವ್ಯಕ್ತಿ ಇಡುಗಂಟನ್ನು ಬಯ್ಕೆಯ ಬಂಡಾರ(ಬ್ಯಾಂಕ)ದಲ್ಲಿ ಜೋಪಾನ ಮಾಡಿಟ್ಟಿರುವುದುಂಟು. ಅದು ನಿಗದಿಯಾದ ಬಾಬತ್ತಿಗಾಗಿ ವೆಚ್ಚವಾದರೆ ಅವನು ದುಃಖಿಸದೆ-ಇಟ್ಟಿದ್ದು ಸಾರ್ಥಕವಾಯಿತೆಂದು ಸಂತುಷ್ಟಚಿತ್ತನೇ ಆಗುವನು.
ಹಾಗೆಯೇ ಇಡೀ ಸಮಾಜದ ಸುವ್ಯವಸ್ಥೆಗೆ ಬೇಕಾದ ಇಡುಗಂಟೆಂದರೆ –ಆ ಸಮಾಜದ ಘಟಕವಾದ ಪ್ರತಿಯೊಂದು ವ್ಯಕ್ತಿಯಲ್ಲಿರುವ ತನು ಮನ ಧನವೇ ಆಗಿದೆ. ಈ ತ್ರಿವಿಧ ಸಂಪತ್ತು ಬಿಡಿಬಿಡಿಯಾಗಿ ವೈಯಕ್ತಿಕವೆಂದು ತೋರಿದರೂ-ಇಡಿಯಾಗಿ ಅದು ಸಮಾಜದ್ದೇ ಆಗಿದೆ. ಅದನ್ನು ಲೋಕಕಲ್ಯಾಣಕಾರ್ಯಕ್ಕೆಲ್ಲ ಮುಂದಾಳುಗಳಾದ ಜಂಗಮರು ಬಂದು ಯಾವನನ್ನಾದರೂ ಕೇಳಿದರೆ ಅವನು ತನ್ನ ತನು-ಮನ-ಧನವನ್ನು ಶ್ರಮದಾನವಾಗಿ-ಸಮಾಲೋಚನೆಯಾಗಿ-ದಾನದಕ್ಷಿಣೆಯಾಗಿ ಕೊಡಬೇಕು. ಅದನ್ನು ಜಂಗಮನು ಸಮಾಜದ ಸಾಮೂಹಿಕ ಹಿತಗಳಿಗಾಗಿ ವೆಚ್ಚಮಾಡಬೇಕು.
ಹೀಗೆ ಭಕ್ತ-ಜಂಗಮ-ಸಮಾಜದ ಈ ಪರಸ್ಪರತೆಯನ್ನು ಬಲ್ಲ ಬಸವಣ್ಣನವರು-ತಮ್ಮ ಸ್ವಂತ ತನು ಮನ ಧನವನ್ನು ತಮ್ಮದೆಂದು ಸ್ವಾಮ್ಯಸಾಧಿಸಿ ತ್ಯಾಗಮಾಡದೆ ಬಿಗಿಹಿಡಿದವರಲ್ಲ. ಈ ದೇಹ ಮನಸ್ಸು ಧನವೆಂಬಿವೆಲ್ಲವೂ ದೇವರು ಕೊಟ್ಟುದಲ್ಲವೆ ? ಜನಹಿತಕ್ಕಾಗಿ ಶಿವನು ನಮ್ಮಲ್ಲಿ ನ್ಯಾಸವಾಗಿಟ್ಟುದಲ್ಲವೆ ? ಆ ಶಿವನ ಸ್ವತ್ತು ಶಿವಶರಣರಾಗಿ ವ್ಯಯವಾದರೆ-ಬಸವಣ್ಣನವರು ನಿಶ್ಚಿಂತರಾಗಿರುತ್ತಿದ್ದರಷ್ಟೇ ಅಲ್ಲ- ಕೃತ ಕೃತ್ಯಭಾವದಿಂದ ಉಲ್ಲಸಿತರೂ ಆಗಿರುತ್ತಿದ್ದರು.
ಭಂಡಾರಿಯಾಗಿದ್ದ ಬಸವಣ್ಣನವರು ರಾಜಭಂಡಾರದಲ್ಲಿದ್ದ ಹಣವನ್ನು ಎಂದಿಗೂ ಪೋಲು ಮಾಡಿದವರಲ್ಲ, ಅದು ಯಾವ ಉದ್ದೇಶಕ್ಕಾಗಿ ನಿಕ್ಷೇಪವಾಗಿತ್ತೋ ಅದಕ್ಕಾಗಿಯೇ ವ್ಯಯಮಾಡಿದಂತೆ-ಶಿವನ ಭಂಡಾರವಾದ ತಮ್ಮ ತನು ಮನ ಧನವನ್ನು ಶಿವಕಾರ್ಯಕ್ಕಾಗಿಯೇ ವ್ಯಯಮಾಡಿ-ಅಲ್ಲಿಯೂ ಇಲ್ಲಿಯೂ ಒಮ್ಮೆಗೇ ಕೃತಾರ್ಥರಾದರು.
ವಿ : ಬಯ್ ವಾಕ್ಪಾರುಷ್ಯೇ ನಿಕ್ಷೇಪೇ ಚ-ಕೇಶಿರಾಜ ಧಾತು -546. ಇದರ ನಾಮರೂಪ ಬಯ್ಕೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು