•  
  •  
  •  
  •  
Index   ವಚನ - 723    Search  
 
ಮಾಹೇಶ್ವರನ ಭಕ್ತಸ್ಥಲ - ತನುಮನ
ಒಡೆಯರೊಡವೆಯ ಕೊಂಡರೆ ಕಳ್ಳಂಗಳಲಾಯಿತ್ತೆಂಬ ಗಾದೆ ಎನಗಿಲ್ಲಯ್ಯಾ. ಇಂದೆನ್ನ ವಧುವ, ನಾಳೆನ್ನ ಧನವ, ನಾಡಿದ್ದೆನ್ನ ತನುವ ಬೇಡರೇಕಯ್ಯಾ? ಕೂಡಲಸಂಗಮದೇವಾ, ಆನು ಮಾಡಿದುದಲ್ಲದೆ ಬಯಸಿದ ಬಯಕೆ ಸಲುವುದೆ ಅಯ್ಯಾ?
Transliteration ʼoḍeyaroḍaveya koṇḍare kaḷḷaṅgaḷalāyittembaʼ gāde enagillayya. Indenna vadhuva, nāḷenna dhanava, nāḍiddenna tanuva bēḍarēkayyā? Kūḍalasaṅgamadēvā, ānu māḍidudallade bayasida bayake saluvude ayyā?
Manuscript
English Translation 2 That proverb's not for me which says 'The thief is filled with grief If the owner takes his own goods.' Why do they not ask of me My wife today ,tomorrow for my wealth, And the day after for my body? O Kūḍala Saṅgama Lord,can it be right That I desire expect the fruit Of mine own deds? Translated by: L M A Menezes, S M Angadi
Hindi Translation मालिक अपनी वस्तु ले, तो चोर को दुःख होता है?’ यह लोकोक्ति मेरे लिए नहीं है। आज मेरी पत्नी को, कल मेरा धन परसों मेरा तन वे क्यों नहीं माँगते? कूडलसंगमदेव, मेरा कर्म फल नहीं तो ईप्सित फल प्राप्त होगा? Translated by: Banakara K Gowdappa
Telugu Translation ఒడయులు నొడవులు సేకొన దొంగల పాలయ్యెనను సామెత నాకు లేదయ్యా, నేడు నా పతిని; రేపు నా యా స్తిని మఱునాడు నా దేహమును అడుగ రేటికయ్యా దేవా? చేసినదే తప్ప తలచినది రక్షింపదయ్యా! Translated by: Dr. Badala Ramaiah
Tamil Translation “உடையர் உடைமையைக் கொள்ளின் கள்ளன் துயரடைந்தது அனைய” என்னும் பழமொழி எனக்குப் பொருந்தாது ஐயனே இன்று என் மனைவியை, நாளை என் செல்வத்தை நாளை மறுநாள் என் உடலை வேண்டுவானேன்? கூடல சங்கம தேவனே, நான் ஈவதன்றி அதனை விரும்பின் ஆகுமோ ஐயனே? Translated by: Smt. Kalyani Venkataraman, Chennai
Marathi Translation मालकाने आपली वस्तू घेतली तर चोर दुःखी. या म्हणीप्रमाणे माझी स्थिती झाली देवा. आज वधू मागतो, उद्या धन मागतो परवा माझे तनही मागणार देवा? कूडलसंगमदेवाला मी दिले नाही तरीही माझी इच्छा पूर्ण करील? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಡೆಯನು ತನ್ನ ಮಾಲನ್ನು ಕದ್ದೊಯ್ಯತ್ತಿದ್ದ ಕಳ್ಳನನ್ನು ಹಿಡಿದು ತನ್ನ ಮಾಲನ್ನು ಕಿತ್ತುಕೊಂಡರೆ-ಆ ಕಳ್ಳ ತನ್ನ ಸಂಪಾದನೆ ಹಾಳಾಯಿತೆಂದು ಅಳುವುದು ಹಾಸ್ಯಾಸ್ಪದ. ಹಾಗೆಯೇ ಹೆಂಡತಿ ದುಡ್ಡುಕಾಸು-ಕೊನೆಗೆ ಈ ಧರಿಸಿದ ದೇಹವೂ ಶಿವನದೇ ಆಗಿರುವುದರಿಂದ ಅವನ್ನು ಶಿವನು ತನ್ನ ಶ್ರೀಪಾದಕ್ಕೆ ಸೇರಿಸಿಕೊಂಡರೆ ಅದಕ್ಕೆ ದುಃಖಿಸತಕ್ಕವಲ್ಲವೆನ್ನುತ್ತ ಬಸವಣ್ಣನವರು -ಹೆಂಡತಿ ಶಿವಾಧೀನ(ಮೃತ)ಳಾಗಲಿ, ಇರುವ ಐಶ್ವರ್ಯವೆಲ್ಲಾ ಇಲ್ಲದಾಗಲಿ, ಈ ದೇಹವಿರುವವರೆಗೆ ಶಿವನ ಸೇವೆ ಮಾಡದೆ ಸುಮ್ಮನಿರುವುದಿಲ್ಲವೆಂದು ಶಿವನಲ್ಲಿ ಅರಿಕೆ ಮಾಡಿಕೊಳ್ಳುತ್ತಿರುವರು. ಮತ್ತು ತಾವು ಮಾಡಿದ ಕರ್ಮವೇ ಒಂದಾಗಿ-ಹೆಂಡತಿ ಮಕ್ಕಳು ಬೇಕು, ಐಶ್ವರ್ಯ ಬೇಕು, ಆಯುರಾರೋಗ್ಯ ಬೇಕು ಎಂದು ಹಣೆಯಲ್ಲಿ ಬರೆಯದಿರುವುದನ್ನೆಲ್ಲ ಬಯಸಿದರೆ ಲಭ್ಯವಾದೀತೇ ಎಂದು ಕರ್ಮವಾದವನ್ನು ಮುಂದೊಡ್ಡುತ್ತಲೂ ಇರುವರು. ವಿ : ಈ ವಚನಕ್ಕೆ ಹೀಗೆ ಅರ್ಥಮಾಡಬೇಕಲ್ಲದೆ-“ಬೇಡರೇಕಯ್ಯ” ಎಂಬ ಕೆಟ್ಟ ಪಾಠವನ್ನು ಒಪ್ಪಿಕೊಂಡು ಕೆಟ್ಟ ಅರ್ಥಗಳನ್ನು ಹೇಳಿಕೊಂಡು ಹೋಗಬಾರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು