•  
  •  
  •  
  •  
Index   ವಚನ - 724    Search  
 
ಮಾಹೇಶ್ವರನ ಭಕ್ತಸ್ಥಲ - ತನುಮನ
ಕಲಿ ಕರುಳ ತರ್ಕ್ಕೈಸಿ ಹರಿಯ ಬಲ್ಲನಲ್ಲದೆ- ಸಾಯ ಕಾದಿಸುವರೆ, ಎಡೆಗೋಲನಿಕ್ಕುವರೆ, ದಾತಾರನಧೀನವಲ್ಲದೆ- ಕೂಡಲಸಂಗಮದೇವಾ ನೀ ಮಾಡಿದಂತಹುದಯ್ಯಾ. ತನುಮನಧನದಲ್ಲಿ ನಾನು ವಂಚನೆಯ ಬಯಸಿದರೆಂತಹುದಯ್ಯಾ?
Transliteration Kali karuḷa tarkkaisi hariya ballanallade- sāya kādisuvare, edegoḷanikkuvare, dātāranadhīnavallade- kūḍalasaṅgamadēvā nī māḍidantahudayyā. Tanumanadhanadalli nānu van̄caneya agatyaviruvudayyā?
Manuscript
English Translation 2 The warrior can grasp and tear out guts; But would he give a fight to death, Put hurdles in its path, It rests upon the chief. So, Kūḍala Saṅgama Lord, It shall be as you bid it: How can I, then, desire Deceit in all I have and am? Translated by: L M A Menezes, S M Angadi
Hindi Translation योद्धा आंतों को फाड सकता है, किंतु मृत्यु-पर्यंत लड़ाना उसे रोकना नायक के अधीन है । कूडलसंगमदेव तुम जैसा करते हो वैसा बनता है मैं तन, मन, धन में छल करना चाहूँ, तो कैसे हो सकता है? Translated by: Banakara K Gowdappa
Telugu Translation పేగులు ముడివడ పెనగెదరే కాని; చావ పోరెదరే? వీరులు దాత యధీనమై యుండు సర్వంబు స్వామీ, నీ చేసినట్లే పోవుగాని నేను నా మనోధన కాయముల వంచన తలతునా! కొడికెక్కవయ్యా! Translated by: Dr. Badala Ramaiah
Tamil Translation வீரன் குடலைப் பற்றியவாறு போராடவேண்டுமன்றி மரணம் வரினும் போரை நிறுத்துவதையும் முடிவு செய்வது உடையனன்றோ? கூடல சங்கமதேவனே, நீ செய்வதனையதாம் உடல், மனம், செல்வத்தில் வஞ்சனையை நான் விரும்புவதில்லை ஐயனே. Translated by: Smt. Kalyani Venkataraman, Chennai
Marathi Translation वीर हातात प्राण घेऊन लढू शकतो. लढत मरण्याचा आदेश देत नाही. तह करण्याचा निर्णय घेऊ शकत नाही. हे सर्व स्वामीच्या आधीन आहे. कूडलसंगमदेवा, तुमचा निर्णय शेवटचा देवा. तनमनधन अर्पण करण्यात वंचना केलीतर माझी इच्छा पूर्ण होईल? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಜೀತಕ್ಕಾಗಿ ದಣಿಯ ಸೇನೆಗೆ ಸೇರಿದ ಮೇಲೆ-ಹೋರಾಡುತ್ತ-ಹೊಟ್ಟೆ ಸೀಳಿಹೋಗಿ ಕರುಳು ಹೊರ ಚೆಲ್ಲುತ್ತಿದ್ದರೂ ಹೋರಾಟವನ್ನು ಮುಂದುವರಿಸುವುದು ಭಟನ ಕರ್ತವ್ಯ. ಅವನು ಸಾಯುವವರೆಗೂ ಕಾದಲೆಂಬುದಾಗಲಿ, ಘಾಯಗೊಂಡಿದ್ದಾನೆ ಹಿಮ್ಮೆಟ್ಟಿ ಬರಲಿ ಎಂಬುದಾಗಲಿ ದಣಿಯ ನಿರ್ಣಯಕ್ಕೇ ಬಿಟ್ಟುದು. ಶಿವಭಕ್ತನಾದ ಮೇಲೆ ತನು ಮನ ಧನಕ್ಕೆ ಧಕ್ಕೆಯಾದೀತೆಂದು ಮಧ್ಯಂತರದಲ್ಲಿ ದಾಸೋಹವನ್ನು ಬಿಡಲಾಗದು. ಶಿವನು (ಕೈಲಾಸಕ್ಕೆ) ಕರೆಸಿಕೊಳ್ಳುವವರೆಗೆ ಧರ್ಮಕಾರ್ಯ ನಿರ್ವಂಚನೆಯಿಂದ ನಡೆಯುತ್ತಲೇ ಇರಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು