ಮಾಹೇಶ್ವರನ ಭಕ್ತಸ್ಥಲ - ಮನಸ್ಸು
ಬಾಲಾಭ್ಯಾಸವ ಮಾಡಹೋದರೆ ಎನ್ನ ಸುರಿಗೆ ಎನ್ನನಟ್ಟಿತ್ತು:
ಎಂತಯ್ಯಾ ಕಲಿಯೊಡನೆ ಶ್ರವವ ಮಾಡುವೆನು?
ರಾಯ ರಾಜಗುರು ಜಗದ ಬಿನ್ನಾಣಿಯ ತೊಡಕ ಬಿಡಿಸಬಾರದು:
ಸರಿಸದ ಮೇಲೆ ಹಿಡಿಯ ಹೋದರೆ
ಚದುರಂಗದ ಮೇಲೆ ಮಸಿಯ ತೋರಿದ
ಕೂಡಲಸಂಗಮದೇವ.
Transliteration Bālābhyāsava māḍahōdare enna suragi enna naṭṭittu:
Entayyā kaliyoḍane śravava māḍuvenu?
Rāya rājaguru jagada binnāṇiya toḍaka biḍisabāradu:
Sarisada mēle hiḍiya hōdare
caduraṅgada mēle masiya tōrida
kūḍalasaṅgamadēva.
Manuscript
English Translation 2 In doing my childish exercise,
I prick myself with my own sword:
How, then, could I
Make practice with a warrior?
It is not possible to dodge a move
Made by the sharpest trickster in the world-
The King, preceptor of Kings:
Should one attempt to catch him
On equal terms, Lord Kūḍala Saṅgama
Will smudge with soot the chequerboard!
Translated by: L M A Menezes, S M Angadi
Hindi Translation बालाभ्यास करने जाने पर
मेरा खङ्ग मुझे ही चुभता है ।
मैं योद्धा के साथ कैसे लडूँगा?
राजा, राजगुरु और जगत के चतुर की
समस्या को सुलझाना कठिन है ।
समानता पर उन्हें पकडने जाऊँ,
तो शतरंज पर मसि डालते हैं, कूडलसंगमदेव॥
Translated by: Banakara K Gowdappa
Telugu Translation బాలాభ్యాసము సేయగ నా కత్తి నన్నే దాకెనయ్యా:
ఇక వీరునితో సాధన యెట్లయ్యా?
రాజరాజగురుని జగద్విన్నాణపు గంటు విప్పకాదు
సమస్థాయిని పట్టచూడ చదరంగముపై మసిబోసె సంగయ్య
Translated by: Dr. Badala Ramaiah
Tamil Translation ஆரம்பப் பயிற்சியை மேற்கொண்ட பொழுது
என் கத்தி என்னைக் குத்தும்
வீரனுடன் எப்படி ஐயனே போராடுவேன்?
மேலான அரச குரு உலகின் திறலோனின்
சிக்கலிலிருந்து விடுபடவியலாது
எதிர்க்க முயற்சி செயின்
ஆட்டத்தைக் கெடுப்பான் கூடலசங்கமதேவன்.
Translated by: Smt. Kalyani Venkataraman, Chennai
Marathi Translation
तलवार चालविण्यास शिकण्यास गेलो तर माझी तलवार माझ्यात घुसली
वीराची बरोबरी मी कशी करणार ?
सृष्टीचे रहस्य जाणणे सोपे नाही. सृष्टीकर्त्याचे मर्म जाणणे सोपे नाही.
निष्ठेने भक्ती करु लागता त्याचे मर्म
तुम्हीच दाखवाल कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಚಕ್ರವರ್ತಿಯನ್ನು ಯುದ್ಧದಿಂದ ಅಥವಾ ಉಪಾಯಾಂತರದಿಂದ ಗೆಲ್ಲಲ್ಲು ಹವಣಿಸಿದ ಮಾಂಡಲಿಕನೊಬ್ಬನ ದುರಂತಸೆಣಸಾಟದ ಒಂದು ರಾಜಕೀಯಪ್ರತಿಮೆಯ ಮೂಲಕ-ಭಕ್ತನು ಇಷ್ಟಲಿಂಗೋಪಾಸನೆಯ ಹಂತದಲ್ಲೇ ಸ್ಥಗಿತಗೊಂಡಾಗ ಜಂಗಮದಾಸೋಹ ಸಿದ್ಧಿಸದೆ ಶಿವಸಾಯುಜ್ಯ ದೂರವೇ ಉಳಿಯಿತೆಂಬುದನ್ನು ವ್ಯಂಜಿಸಲಾಗಿದೆ ಈ ವಚನದಲ್ಲಿ.
ನಾನೆಂದರೆ ಭಕ್ತ, ಬಾಲಾಭ್ಯಾಸವೆಂದರೆ ಕ್ರಿಯಾಮಾರ್ಗ, ಸುರಗಿಯೆಂದರೆ ಇಷ್ಟಲಿಂಗ, ಕಲಿಯೆಂದರೆ ಜಂಗಮ, ರಾಯ ರಾಜಗುರು ಜಗದ ಬಿನ್ನಾಣಿಯೆಂದರೆ ಸೃಷ್ಟಿಕರ್ತ ಶಿವ, ತೊಡಕೆಂದರೆ ಲಿಂಗವಾಗಬೇಕಾದ ಅಂಗದ ಜಂಜಡ, ಸರಸದ ಮೇಲೆ ಹಿಡಿಯುವುದೆಂದರೆ ನಿಃಕ್ರಿಯಾಜ್ಞಾನಮಾರ್ಗ, ಚದುರಂಗವೆಂದರೆ ಮನ-ಬುದ್ಧಿ-ಚಿತ್ತ-ಅಹಂಕಾರವೆಂಬ ಅಂತಃಕರಣ ಚತುಷ್ಟಯ, ಮಸಿಯ ತೋರಿದನೆಂದರೆ ಅಜ್ಞಾನ ಕಾಳಿಕೆಯನ್ನು ಉಂಟುಮಾಡಿದ (ವ್ಯಾಖ್ಯಾನದಿಂದ).
ತಾತ್ಪರ್ಯ : ಇಷ್ಟಲಿಂಗೋಪಾಸನೆಯನ್ನು ಹಿಡಿದರೆ ಅಲ್ಲಿಯೇ ಅನುರಕ್ತನಾದೆನು. ಇನ್ನು ನಾನು ಜಂಗಮದಾಸೋಹದಲ್ಲಿ ವಿಜಯ ಹೊಂದುವುದು ಹೇಗೆ? ಸೃಷ್ಟಿಕರ್ತನ ಶಿವನು ಕೊಟ್ಟ ಈ ದೇಹದ ತೊಡಕನ್ನು ಬಿಡಿಸಿಕೊಳ್ಳುವುದು ಅಸದಳ. ಕ್ರಿಯಾಮಾರ್ಗದ ಈ ಲಿಂಗೋಪಾಸನೆಯನ್ನು ಬಿಟ್ಟು ನಿಃಕ್ರಿಯಾ(ಜ್ಞಾನ)ಮಾರ್ಗವನ್ನೇ ಹಿಡಿದು ಹೋದಾಗಲಂತೂ ನನ್ನ ಅಂತರಂಗವನ್ನೆಲ್ಲಾ ಆ ಶಿವಮಾಯೆಯ ಅಹಂತೆಯ ಕತ್ತಲು ಕವಿಯಿತು. ನನ್ನ ಸಾಧನೆಯ ಗತಿಯಿನ್ನೇನು?-ಎಂದು.
ಈ ಪ್ರಶ್ನೆಗೆ ಉತ್ತರ : ಕ್ರಿಯಾಮಾರ್ಗ ಜ್ಞಾನಮಾರ್ಗಗಳೆರಡನ್ನೂ ಮೀರಿದ ದಾಸೋಹಮಾರ್ಗವೊಂದೇ ಅಂಗವನ್ನು ಲಿಂಗೈಕ್ಯಮಾಡುವ ಸುವರ್ಣಮಧ್ಯಮಮಾರ್ಗ ಎಂಬುದೆ ಆಗಿದೆ ಈ ವಚನದ ಬೆಡಗಿನ ಇಂಗಿತ ಕೂಡ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು