•  
  •  
  •  
  •  
Index   ವಚನ - 726    Search  
 
ಮಾಹೇಶ್ವರನ ಭಕ್ತಸ್ಥಲ - ಜಂಗಮ
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು, ಶಿವಚಿತ್ತವೆಂಬ ಕೂರಲಗ ಕೊಂಡು, ಶರಣಾರ್ಥಿಯೆಂಬ ಶ್ರವವ ಕಲಿತರೆ, ಆಳುತನಕ್ಕೆ ದೇಸಿಯಪ್ಪೆ , ನೋಡಾ. ಮಾರಂಕ ಜಂಗಮ ಮನೆಗೆ ಬಂದಲ್ಲಿ ಇದಿರೆದ್ದು ನಡೆವುದು; ಕೂಡಲಸಂಗಮದೇವನನೊಲಿಸುವೊಡಿದು ಚಿಹ್ನ!
Transliteration Samacittavemba nēmada halageya hiḍidu, śivacittavemba kūralaga koṇḍu, śaraṇārthiyemba śravava kalitare, āḷutanakke deseyappe, nōḍā. Māraṅka jaṅgama manege bandalli idireddu naḍevudu; kūḍalasaṅgamadēvananolisuvoḍidu cihna!
Manuscript
English Translation 2 A vow of equanimity for my shield, The Śiva-Consciousness for my sharp-edged sword, Surrender for my fencing exercise, Behold, I am not qualified For servanthood: when a Jaṅgama , That rival warrior, comes up to my door, I must run out to encounter him: This is the trick to please Lord Kūḍala Saṅgama! Translated by: L M A Menezes, S M Angadi
Hindi Translation समचित्त रूपी नियम का ढाल और शिवचित्त रूपी क्रूर शर धारण कर, शरणार्थी रूपी शारीरिक श्रम सीखूँ, तो मैं दासवृत्ति के योग्य बनूँगा। प्रति द्वंद्वी जंगम के घर आने पर उसका सामना करूँगा, कूडलसंगमदेव को प्रसन्न करने का यह लक्षण है॥ Translated by: Banakara K Gowdappa
Telugu Translation సమచిత్తమను నియమపు పలకబట్టి; శివచిత్తమను కత్తినెత్తి శరణార్డియను సాము నేర్వ బంటుతనము పక్వమగురా! ప్రతి భటుడు జంగముడిరటికి రాగ ఎదురౌచు నడచుటే సంగయ్యను కొల్చు ననుటకు సాక్ష్యమురా! Translated by: Dr. Badala Ramaiah
Tamil Translation சமச்சித்தம் என்னும் நியமத்தின் பலகையைப் பற்றி சிவச்சித்தம் என்னும் கூரான கத்தியைக் கொண்டு தஞ்சம் என்னும் சாதனையை மேற்கொண்டால் தொண்டு செய்யும் தகுதியைப் பெறுவேன், காணாய் எதிராளி ஜங்கமன் இல்லத்திற்கு வரின் அவரை எதிர்கொண்டு முறையாக செய்வது கூடல சங்கமதேவனின் அன்பைப் பெறுவதின் அடையாளமாம் ஐயனே. Translated by: Smt. Kalyani Venkataraman, Chennai
Marathi Translation प्रेक्षका समोर, काठी फिरवीला कला दाखविला, शुरत्वाची दिसताचि शत्रु, काठी ती गळाली वीरता कळाली, बेगडी तो उदारतेच्या गप्पा, सोपे वाटे मारता जंगम दारी येता, तेव्हा कळे जैसा तो सोनार, गोड त्याचे बोलणे हडपतो सोने, उपायाने पडतील थोटके, शब्दातील गोडी पडते उघडी, ऐनवेळी कूडलसंगमदेवा! जंगम येता दारी समर्पणाची खरी परीक्षा ती अर्थ - जन समूहात लाठी चालविण्यात कौशल्य दाखवून पटाईत म्हणून घेणे सोपे आहे. पण प्रत्यक्ष लढाईच्या मैदानात कौशल्य दाखवून बहादूर म्हणून घेणे अवघड बाब आहे. कारण तीच खरी कसोटी होय. तेथे जीवन मरणाचा प्रश्न असतो. त्याचप्रमाणे जीवनातही खऱ्या कसोटीला उतरल्याशिवाय परमेश्वर प्राप्त करुन घेता येणार नाही. नुसते गोड गोड बोलून मोठमोठ्या गप्पा मारून चालणार नाही. ज्याप्रमाणे सोनार गोड गोड बोलून सोने हडप करतो तशी तुमची गत होईल. वाणीप्रमाणे आचरण असले पाहिजे. तुमने धन जंगम सेवेत खर्ची पडावयास हवे. धन लपविता कामा नये. धन हे मद्य तर सेवा हे अमृत आहे अशी भावना व त्यानुसार आचरण करतो तो खरा शिवभक्त होय. अशांचीच परमेश्वर काळजी वाहत असतो, त्यांचे रक्षण करीत असतो. कारण अशावरच तो सदैव प्रसन्न असतो. Translated by Rajendra Jirobe, Published by V B Patil, Hirabaug, Chembur, Mumbai, 1983 समचित्तरूपी नेमाची ढाल धरुन, शिवचित्तरूपी तलवार हाती घेतली. शरणार्थीरुपी साधना केली तर सेवा करण्यास योग्य होईन पहा. वीर योध्या जंगम घरी येता त्याचे स्वागत करणे, कूडलसंगमदेवाचा अनुग्रह मिळविण्याचे साधन आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಜಂಗಮದಾಸೋಹವೇ ಶಿವನನ್ನು ಒಲಿಸುವ ಮಾರ್ಗವೆಂಬುದು ಈ ವಚನದ ಆಶಯ. ವೀರಶಿವಭಕ್ತನಿಗೆ ಸಮಚಿತ್ತಕ್ಕೆ ಸಮಸಾಟಿಯಾಗಿ ನಿತ್ಯನೇಮ ಬೇಕು. ಶಿವಕೃಪೆಯೆಂಬ ಶಿವಚಿತ್ತವೂ ಅವನ ಮೇಲೆ ಇರಬೇಕು. ಆ ಸಮಚಿತ್ತದ ಗುರಾಣಿ ಹಿಡಿದು ಶಿವಚಿತ್ತದ ಖಡ್ಗ ಹಿಡಿದು ಶರಣಾಗತಿಯ ಸಾಧನೆ ಮಾಡಿದರೆ ಆ ಭಕ್ತನು ಧರ್ಮವೀರನಾಗುತ್ತಾನೆ. ಅಂಥವನು ಮಾತ್ರ ಜಂಗಮವು ಮನೆಗೆ ಮುತ್ತಿಗೆ ಹಾಕಿದಾಗ – ಅವನಿಗೆ ಉಚಿತ ರೀತಿಯಲ್ಲಿ ಎದುರುಬಿದ್ದು ಹೋಗಿ ತನ್ನ ತನು ಮನ ಧನಗಳ ಘಟ್ಟಿತನವನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಹೀಗೆ ಖಡ್ಗಯುದ್ಧದ ವರಸೆಯಲ್ಲಿರುವ ಒಂದು ಬೆಡಗಿನ ವಚನವಿದು. ಸಮಚಿತ್ತವೆಂದರೆ-ಬಂದ ಆಪತ್ತುವಿಪತ್ತುಗಳನ್ನು ಎದುರಿಸಿ ಸೈರಿಸುವ ಸಾಮರ್ಥ್ಯ-ಈ ಸಾಮರ್ಥ್ಯವನ್ನು ಹಿಡಿದ ಗುರಾಣಿಗೆ ಹೋಲಿಸಲಾಗಿದೆ. ಈ ಗುರಾಣಿಯನ್ನು ತಪ್ಪಿಸಿ ಮೇಲೆರಗುವ ಖಡ್ಗಾಹತಿಯನ್ನು ದೈವೇಚ್ಛೆಗೆ ಹೋಲಿಸಲಾಗಿದೆ. ಈ ಉಪಮಾ ಕೌಶಲ್ಯವು ಬಸವಣ್ಣನವರ ವೀರಶ್ರೀ ಭಕ್ತಿಶ್ರೀಗಳಿಗೆ ಸಾಕ್ಷಿಯಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು