ಮಾಹೇಶ್ವರನ ಭಕ್ತಸ್ಥಲ - ಭಕ್ತಿನಿಷ್ಟೆ
ಅಟ್ಟಾಟಿಕೆಯ ಮಾತನಾಡಲದೇಕೋ?
ಮುಟ್ಟಿ ಬಂದುದಕ್ಕಂಜಲದೇಕೋ?
ಕಾದಿದಲ್ಲದೆ ಮಾಣೆನು: ಓಡಿದರೆ ಭಂಗ ಹಿಂಗದಾಗಿ,
ಕೂಡಲಸಂಗಮದೇವಾ, ಎನ್ನ ಭಂಗ ನಿಮ್ಮದಾಗಿ!
Transliteration Aṭṭāṭikeya mātanāḍaladēkō?
Muṭṭi bandudakkan̄jaladēkō?
Kādidallade māṇenu: Ōḍidare bhaṅga hiṅgadāgi,
kūḍalasaṅgamadēvā, enna bhaṅga nim'madāgi!
Manuscript
English Translation 2 What need to speak these bragging words?
What need to fear one come to assail?
I cannot do but fight-
Because
There's no escaping a defeat by flight;
Because, O Kūḍala Saṅgama Lord,
Even my defeat is Thine!
Translated by: L M A Menezes, S M Angadi
Hindi Translation पौरुष की बात क्यों करें?
आक्रमण करने पर भयभीत क्यों होऊँ?
बिना लडे नहीं छोडूँगा,
भागूँ तो पराजय से मुक्ति नहीं
मेरी पराजय तुम्हारी है कूडलसंगमदेव ॥
Translated by: Banakara K Gowdappa
Telugu Translation అట్టహాసము లాడనేటికో? ముట్టవచ్చిన వేఱ పేటికో?
పెనగకే విడువను, ఓడినచో భంగపడను
సంగమదేవా! నా భంగము నీదేనయ్యా!
Translated by: Dr. Badala Ramaiah
Tamil Translation ஆடம்பரமாக, பகட்டாக உரைப்பது ஏன்?
வந்ததைக் கண்டு அஞ்சுவது எதற்கோ?
போரிடாது விடேன், ஓடினால் பங்கம் அகலுமோ?
கூடல சங்கமதேவனே, என்பங்கம் உன்னுடையதன்றோ!
Translated by: Smt. Kalyani Venkataraman, Chennai
Marathi Translation
आडंबराच्या गोष्टी करु? विपत्तीला घाबरुन का जाऊ?
लढल्याशिवाय राहणार नाही, पळालो तर कलंक लागेल.
कूडलसंगमदेवा, माझा कलंक तुम्हालाही लागणार,
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭವಿಷ್ಯದ ರೇರಾಜ್ಯದ ಕನಸು ಕಂಡ ಬೆಚ್ಚಿಬೀಳುವುದಕ್ಕಿಂತ, ಭವಿಷ್ಯದ ಘಟ್ಟಿಪಿಂಡವನ್ನು ಗರ್ಭೀಕರಿಸಿಕೊಂಡಿರುವ ವರ್ತಮಾನವನ್ನು ಕಾಪಾಡಿಕೊಳ್ಳಲು ಉದ್ಯಮಿಸುವೆನೆಂಬುದು ಈ ವಚನದ ಅಭಿಪ್ರಾಯ.
ಬಾರುದುದಕ್ಕೆ ಬೆನ್ನುಹತ್ತಿ ಹಂಬಲಿಸುವುದೇಕೆ ? ಬಂದುದಕ್ಕೆ ಹೆದರಿ ಓಡುವುದೇಕೆ ? ಏನೇ ಬರಲಿ ಎದುರಿಸಿ ಹೋರಾಡುತ್ತೇನೆ. ಅಲ್ಲದಿದ್ದರೆ ಅದಕ್ಕಿಂತ ಅವಮಾನ ಇನ್ನೊಂದಿಲ್ಲ. ಮತ್ತು ನಾನು ಶಿವಭಕ್ತನಾದುದರಿಂದ-ನನಗಾದ ಅವಮಾನ ಶಿವನಿಗೇ ಆದ ಅವಮಾನವೆಂದು -ಹೇಡಿಯಾಗದೆ ವರ್ತಮಾನದೊಡನೆ ಕಾದಾಡುತ್ತೇನೆ-ಬರುವ ಭವಿಷ್ಯವು ಶಿವಚಿತ್ತಾನುಸಾರಿಯೆಂದು ಬಲವಾಗಿ ನಂಬಿದ್ದೇನೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು