ಮಾಹೇಶ್ವರನ ಭಕ್ತಸ್ಥಲ - ಭಕ್ತಿನಿಷ್ಟೆ
ಲಿಂಗಕ್ಕಲ್ಲದೆ ಮಾಡೆನೀ ಮನವನು,
ಜಂಗಮಕ್ಕಲ್ಲದೆ ಮಾಡೆನೀ ಧನವನು,
ಪ್ರಸಾದಕ್ಕಲ್ಲದೆ ಮಾಡೆನೀ ತನುವನು.
'ಲಿಂಗ ಜಂಗಮದ ಪ್ರಸಾದಕ್ಕಲ್ಲದೆ ಬಾಯ್ದೆರೆ'ಯೆನೆಂಬುದೆನ್ನ ಭಾಷೆ.
ಅನರ್ಪಿತವಾದರೆ ತಪ್ಪೆನ್ನದು,
ಮೂಗ ಕೊಯಿ, ಕೂಡಲಸಂಗಮದೇವಾ.
Transliteration Liṅgakkallade māḍenī manavanu,
jaṅgamakkallade māḍenī dhanavanu,
prasādakkallade māḍenī tanuvanu.
'Liṅgajaṅgamaprasādakkallade bāydere'yenembudenna bhāṣe.
Anarpitavādare tappennadu,
mūga koyi, kūḍalasaṅgamadēvā.
Manuscript
English Translation 2 Except to Liṅga I will not give
My mind;
Except to Jaṅgama I will not give
My wealth;
Except for Prasāda I will not give
My body.
For if my pledge: never to open my mouth
Except for the grace of Liṅga and Jaṅgama,
Should be an unworthy offering,
It sure shall be my fault.
Then may you cut my nose,
O Kūḍala Saṅgama Lord!
Translated by: L M A Menezes, S M Angadi
Hindi Translation लिंग के सिवा यह मन किसीको न दूँगा,
जंगम के सिवा यह धन किसीको न दूँगा,
प्रसाद के सिवा यह तन किसीको न दूँगा,
मेरी प्रतिज्ञा है, लिंग-जंगम के प्रसादार्थ
अपना मुँह खोलूँ अन्यथा नहीं,
अर्पण अनर्पित हो, तो दोष मेरा है
मेरी नाक काटो, कूडलसंगमदेव॥
Translated by: Banakara K Gowdappa
Telugu Translation నా మనసు లింగము పై బోవు; నా ధనము జంగమునకే చేరు;
నా తనువు ప్రసాదమునకే తగులు; లింగజంగమ ప్రసాదములకేగాని;
నోర్విప్ప ననుటయే నా బాస, ఇవి అనర్పితమయ్యెనా
తప్పునాది ముక్కు కోయుమా కూడల సంగమదేవా!
Translated by: Dr. Badala Ramaiah
Tamil Translation இலிங்கத்திற்கன்றி மனத்தை அர்ப்பிப்பதோ
ஜங்கமருக்கன்றி செல்வத்தை ஈவதோ
பிரசாதத்திற்கன்றி உடல் ஈர்க்குமோ
இலிங்க, ஜங்கம, பிரசாதத்திற்கின்றி
வாய் திறவேன் என்பது என் சூளுரையாம்
அர்ப்பித்தேன் எனின் தவறு என்னுடையது
மூக்கைக் கொய்வாய், கூடல சங்கமதேவனே.
Translated by: Smt. Kalyani Venkataraman, Chennai
Marathi Translation
लिंगार्पित कर तू मनाला,
जंगमार्पित कर तू धनाला.
प्रसादार्पित कर तू तनाला.
लिंगजंगमप्रसादाविना तोंड उघडणार नाही कशालाही.
ही माझी शपथ आहे.
कूडलसंगमदेवा,
अर्पित झाले नाही तर ती चूक माझी, नाक कापावे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ “ಲಿಂಗ ಮತ್ತು ಜಂಗಮದ ಪ್ರಸಾದಕ್ಕಲ್ಲದೆ ಬಾಯ್ದೆರೆಯೆ”ನೆಂಬುದು ಬಸವಣ್ಣನವರ ಪ್ರತಿಜ್ಞೆ. ಅದರ ಈಡೇರಿಕೆಗಾಗಿ ಅವರು ಪತ್ರಪುಷ್ಪದಿಂದ ಲಿಂಗವನ್ನು ಪೂಜಿಸಿದರು, ಜಂಗಮವನ್ನು ಧನಧಾನ್ಯದಿಂದ ಸತ್ಕರಿಸಿದರು. ಆ ಮೂಲಕ ಬಂದ ಮನಃಪ್ರಸನ್ನಪ್ರಸಾದವನ್ನೇ ತಮ್ಮ ದೇಹಧಾರಣೆಗೆ ಆಧಾರ ಮಾಡಿದರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು