ಮಾಹೇಶ್ವರನ ಪ್ರಸಾದಿಸ್ಥಲ - ಸಂದೇಹ
ಅಂಕ ಕಂಡಾ: ಕೋಲಾಸೆ ಮತ್ತೇಕಯ್ಯಾ ?
ಲೆಂಕ ಕಂಡಾ: ಪ್ರಾಣದಾಸೆ ಮತ್ತೇಕಯ್ಯಾ?
ಭಕ್ತ ಕಂಡಾ: ತನುಮನಧನದಾಸೆ ಮತ್ತೇಕಯ್ಯಾ?
ನಿಮ್ಮ ಅಂಕೆಗೆ ಝಂಕೆಗೆ ಶಂಕಿಸಿದೆನಾದರೆ
ಎನ್ನ ಲೆಂಕತನಕ್ಕೆ ಹಾನಿ, ಕೂಡಲಸಂಗಮದೇವಾ!
Transliteration Aṅkakaṇḍa: Kōlāse mattēkayya?
Lēṅka kanda: Prāṇadāse mattēkayya?
Bhakta kaṇḍa: Tanumanadhanadāse mattēkayya?
Nim'ma Aṅkege shaṅkitanādare
enna leṅkatanakke hani, kūṭalasaṅgamadēva!
Manuscript
English Translation 2 Say I'm a hero: what need then
To play with a stick?
Say I'm a servant: what need then
To cling to life?
Say I'm a servant: what need then
To cling to body, mind and wealth?
Should I but question
Both your commands and threats
It is my servanthood that takes a blow,
O Kūḍala Saṅgama Lord!
Translated by: L M A Menezes, S M Angadi
Hindi Translation मैं भट हूँ न, फिर बाण की आशा क्यों?
मैं भृत्यु हूँ न, फिर प्राणों की आशा क्यों?
मैं भक्त हूँ न, फिर तन, मन, धन की आशा क्यों?
तव आज्ञा या धमकी की शंका करूँ,
तो मेरे दासत्व की हानि है, कूडलसंगमदेव ॥
Translated by: Banakara K Gowdappa
Telugu Translation వీరుడై న వెనుక సామేటికో? దాసుడై నంత ప్రాణముపై తీపియేటికో?
భక్తుడైన వెనుక తనుమనధనముల పై తగులమేటికో?
మీ యాజ్ఞాతంకముల శంకించినట్లేన
నా లెంకతనమునకు హాని కూడల సంగమదేవా!
Translated by: Dr. Badala Ramaiah
Tamil Translation மாகாசுவர பிரசாதித்தலம்
வீரன் கண்டாய் அம்பை எய்யாது விரும்புவதேனோ?
உயிரை ஈவோன் கண்டாய், பிறகு உயிரின் மீது ஆசை எதற்கோ?
பக்தன் கண்டாய், பிறகு உடல், மனம், செல்வத்தின்மீது ஆசை எதற்கோ?
உம் ஆணையில், ஒழுக்க விதியில் ஐயம் இருப்பின்
அது என் தொண்டுத்தனத்திற்கு கேடன்றோ
கூடல சங்கம தேவனே.
Translated by: Smt. Kalyani Venkataraman, Chennai
Marathi Translation
वीराला शस्त्राची आशा कशाला ?
सेवकाला प्राणाची आशा कशाला ?
भक्ताला तनमनधनाची आशा कशाला?
तुमच्या वीरत्त्वावर-सेवेवर शंका घेतली तर
माझा सेवाभाव नष्ट होईल कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಿಜವಾದ ಯೋಧನಾದರೆ ಶತ್ರು ಎದುರಾದಾಗ ಬಾಣಬಿಡಲು ಹಿಂಜರಿಯುವುದಿಲ್ಲ. ನಿಜವಾದ ಲೆಂಕನಾದರೆ-ಒಡೆಯನು ಸತ್ತಾಗ ಜೊತೆಯಲ್ಲಿ ಪ್ರಾಣಬಿಡಲು ಹಿಂಜರಿಯುವುದಿಲ್ಲ. ಹಾಗೆಯೇ ನಿಜವಾದ ಭಕ್ತನಾದರೆ ತನ್ನ ತನು-ಮನ-ಧನ ಈ ಮೂರರ ಮೇಲಣ ಮಮತೆಯನ್ನು ತೊರೆದು ಅವನ್ನು ಗುರುಲಿಂಗ ಜಂಗಮಕ್ಕೆ ಸಮರ್ಪಿಸಲು ಹಿಂಜರಿಯುವುದಿಲ್ಲ.
ಭಕ್ತನು ತನ್ನ ಈ ಕರ್ತವ್ಯವನ್ನು ಪರಿಪಾಲಿಸುವಲ್ಲಿ ಅಡ್ಡಿಯಾಗಿ ಶಿವನೇನೇ ಕಷ್ಟವನ್ನು ಕೊಡಲಿ-ಅದಕ್ಕೆ ಶಿವಭಕ್ತನು ಹೆದರುವುದಿಲ್ಲ-ಕರ್ತವ್ಯಚ್ಯುತಿಯಾಗಗೊಡುವುದಿಲ್ಲ-(ವಚನ 701 ನೋಡಿ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು