ಮಾಹೇಶ್ವರನ ಪ್ರಸಾದಿಸ್ಥಲ - ತನುಮನ
ನೀನಿರಿಸಿದ ಮನದಲ್ಲಿ ನಾನಂಜೆನಯ್ಯಾ:
ಮನವು ಮಹಾಘನಕ್ಕೆ ಶರಣಾಗತಿವೊಕ್ಕುದಾಗಿ.
ನೀನಿರಿಸಿದ ಧನದಲ್ಲಿ ನಾನಂಜೆನಯ್ಯಾ:
ಧನವು ಸತಿಸುತ ಮಾತಾಪಿತರಿಗೆ ಹೋಗದಾಗಿ.
ನೀನಿರಿಸಿದ ತನುವಿನಲ್ಲಿ ನಾನಂಜೆನಯ್ಯಾ:
ತನುವು ಸರ್ವಾರ್ಪಿತದಲ್ಲಿ ನಿಯತಪ್ರಸಾದಭೋಗಿಯಾಗಿ.
ಇದು ಕಾರಣ, ವೀರಧೀರಸಮಗ್ರಾಹಕನಾಗಿ,
ನಿಮಗಾನಂಜೆ, ಕೂಡಲಸಂಗಮದೇವಾ!
Transliteration Nīnirisida manadalli nānan̄jenayyā:
Manavu mahāghanakke śaraṇāgativokkudāgi.
Nīvirisida dhanadalli nānan̄jenayya:
Dhanavu satisutamātāpitarige hōgadāgi.
Nīnirisida tanuvinalli nānan̄jenayyā:
Tanuvu sarvārpitadalli niyataprasādabhōgiyāgi.
Idu kāraṇa, vīradhīrasamagrāhakanāgi,
nimagānan̄je, kūḍalasaṅgamadēvā!
Manuscript
English Translation 2 I fear not for my mind, O Lord,
In which you've set me up,
Because my mind, is all surrendered
To the Great Absolute.
I fear not for my wealth, O Lord,
In which you've set me up,
Because my wealth no more will go
Unto my parents, wife and son.
I fear not for my body, O Lord.
In which you've set me up,
Because my body enjoys its daily grace
In all my offerings.
Therefore, because I'm strong and resolute
And take all things as mine,
I do not fear you, Lord
Kūḍala Saṅgama!
Translated by: L M A Menezes, S M Angadi
Hindi Translation तुमसे निहित मन से मैं नहीं डरता,
क्योंकि मन उन महामहिम की शरण में है।
तुमसे निहित धन से मैं नहीं डरता,
क्योंकि धन पत्नी, सुत, माता, पिता को प्राप्त नहीं जाता।
तुमसे निहित तन से मैं नहीं डरता,
क्योंकि तन सर्वार्पण में नियत प्रसाद भोगता है।
मैं धीर, वीर एवं समग्राहक हूँ।
तुमसे मैं नहीं डरता, कूडलसंगमदेव॥
Translated by: Banakara K Gowdappa
Telugu Translation నీ నిల్పిన మనసున నేనుందునయ్యా వెఱవక
మనసు మహాఘనతకు శరణాగతి నందుటచే
నీ విచ్చు సిరులకు నే వెఱువనయ్యా; ఆ ధనము
మాతాపిత సుతులకు చేరమిచే
నీ యిచ్చు తనువునకు నే వెఱవనయ్యా, దేవా
తనువు సర్వార్పితమున నియత ప్రసాద భోగియగుటచే
వీర ధీర సమగ్రాహకుడనై నీకు నే వెఱవను సంగయ్య
Translated by: Dr. Badala Ramaiah
Tamil Translation நீ அளித்தள்ள மனதிற்கு நான் அஞ்சேன் ஐயனே
ஏனெனில் மனம் பரத்தில் தோய்ந்துள்ளது
நீ அளித்துள்ள செல்வத்திற்கு நான் அஞ்சேன் ஐயனே
செல்வம் மனைவி, மகன், பெற்றோருக்காகக் கரையாது
நீ அளித்துள்ள உடலிற்கும் நான் அஞ்சேன் ஐயனே
ஏனெனில் இவ்வுடல் அர்ப்பிக்கப்பட்ட பிரசாதத்தை துய்க்கின்றது
எனவே, வீரம், தீரம் நிறைந்தவனாகி
உமக்கு நான் அஞ்சேன், கூடலசங்கமதேவனே.
Translated by: Smt. Kalyani Venkataraman, Chennai
Marathi Translation
तुम्हाला तन अर्पित झाल्याने मी आशंकित नाही देवा.
तन समर्पिताने केल्याने, नियमीत प्रसाद भोगी झाल्याने
तुम्हाला मन अर्पित झाल्याने मी आशंकित नाही देवा.
मन महाघनात शरणागत होण्यासाठी,
तुम्हाला धन अर्पित झाल्याने मी आशंकित नाही देवा.
धन, सती-मुले, माता-पिता यांना न झिजविल्याने
वीरधीर समग्राहक झाल्याने तुला भित नाही कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತಮ್ಮದೆಂಬ ಮನ-ಧನ-ತನುವೆಲ್ಲ-ಲೋಕಹಿತಕ್ಕಾಗಿ ಶಿವನು ತಮ್ಮಲ್ಲಿ ನ್ಯಾಸವಾಗಿರಿಸಿದ ಶಿವಸ್ವತ್ತೆಂಬುದನ್ನು ದೃಢವಾಗಿ ನಂಬಿದ್ದರು ಬಸವಣ್ಣನವರು. ಆದುದರಿಂದಲೇ ಅವರು ತಮ್ಮ ಮನಸ್ಸನ್ನು ಶಿವನಿಗೇ ಶರಣಾಗತಿವೊಗಿಸಿದರು, ಧನವನ್ನು ರೂಢಿಯಂತೆ ಹೆಂಡತಿ ಮಕ್ಕಳು ತಾಯಿತಂದೆಗಳಿಗೆ ವರ್ಗಾವಣೆಯಾಗದಂತೆ ಮಾಡಿದರು, ಸಕಲೇಂದ್ರಿಯವಿಷಯಗಳನ್ನೂ ಆಚಾರದಿ ಲಿಂಗಕ್ಕೆ ಅರ್ಪಿಸಿ ಬಂದ ಗಂಧಾದಿಪ್ರಸಾದದಿಂದಲೇ ದೇಹವನ್ನು ಭರಿಸಿದರು.
ಹೀಗೆ ತಮ್ಮ ತನುವನ್ನು ಶಿವಪ್ರಸಾದಿಂದ ಪರಿಶುದ್ಧ ಮಾಡಿ, ಧನವನ್ನು ತ್ರಿವಿಧದಾಸೋಹಕ್ಕೆ ಮೀಸಲಾಗಿರಿಸಿ ಮನವನ್ನು ಶಿವನ ಆಜ್ಞಾನುವರ್ತಿಯಾಗಿ ಇಟ್ಟಮೇಲೆ ಬಸವಣ್ಣನವರಿಗೆ ಯಾರ ಭಯವೇನಿದೆ ? ಅವರು ಶಿವನ ಸ್ವತ್ತನ್ನು ಶಿವಕ್ಕೆ ಅರ್ಪಿಸಿದರಾಗಿ ಆ ಶಿವನಿಗೂ ಅವರು (ಋಣಿಯಲ್ಲವಾಗಿ) ಹೆದರುವ ಪ್ರಮೇಯವಿರಲಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು