ಮಾಹೇಶ್ವರನ ಪ್ರಸಾದಿಸ್ಥಲ - ತನುಮನ
ಹಲ್ಲು ಹತ್ತಿ ನಾಲಗೆ ಹೊರಳದಿದ್ದಲ್ಲಿ
ಮನವೆರಡಾದರೆ ಆಣೆ, ನಿಮ್ಮಾಣೆ!
ಮಾಡುವ ನೇಮಕ್ಕೆ ಛಲವಿಲ್ಲದಿದ್ದರೆ ಆಣೆ, ನಿಮ್ಮಾಣೆ!
ಕೂಡಲಸಂಗಮದೇವ ಎನ್ನ ಮನವ ನೋಡಲೆಂದಟ್ಟಿದರೆ
ಪ್ರಸಾದವನಲ್ಲದೆ ಕೊಂಡರೆ ಆಣೆ, ನಿಮ್ಮಾಣೆ !
Transliteration Hallu hatti nālage horaḷadiddalli
manaveraḍādare āṇe, nim'māṇe!
Māḍuva nēmakke chalavilladiddare āṇe, nim'māṇe!
Kūḍalasaṅgamadēva enna manava nōḍalendaṭṭare
prasādavanallade koṇḍare āṇe, nim'māṇe!
Manuscript
English Translation 2 A curse on me, Thy curse,
Should I, when teeth are clenched and tongue is still,
Display a double mind!
A curse on me, Thy curse,
Should I show lack of steadfastness
In my vow to worship Thee!
O Kūḍala Saṅgama Lord, shouldst Thou pursue
And test my heart, and I should eat
Aught but the offering blessed by Thee,
A curse on me, Thy curse!
Translated by: L M A Menezes, S M Angadi
Hindi Translation जुडे दाँतों से जीभ न हिलने पर
मन दो हो, तो सौगंध है, तव सौगंध ।
व्रत में दृढता न हो, तो सौगंध है, तव सौगंध ।
कूडलसंगमदेव, तुम मेरे मन की परीक्षार्थ के लिए पीछा करो
और प्रसाद के सिवा अन्य कुछ लूँ
तो सौगंध है, तव सौगंध॥
Translated by: Banakara K Gowdappa
Telugu Translation పల్లుగఱచి నాలుక పొరలని వేళయందైన;
మనసు రెండయ్యెనా ఆన నీయాన!
పట్టిన వ్రతమున పట్టు లేదేని ఆన! నీయాన సంగా!
నా మనసు పంపి ప్రసాదము విడి వేరుగొన్న ఆన నీయాన!
Translated by: Dr. Badala Ramaiah
Tamil Translation பல்லால் கடிபட்டு நாக்கு பிரளாதிருக்கையில்
மனம் இரண்டு ஆயின், ஆணை, உம்மாணை
செய்யும் நியமத்தில் உறுதி இல்லை எனின் உம்மாணை
கூடல சங்கமதேவன் என் மனத்தைப் பரிசீலிப்பின்
பிரசாதமன்றி கொண்டேன் எனின் ஆணை உம்மாணை
Translated by: Smt. Kalyani Venkataraman, Chennai
Marathi Translation
दातखिळी बसून, बोलता आले नाही
तरीही मनात द्विधा भाव आला तर तुमची शपथ.
करावयाच्या नेमात भंग केला तर तुमची शपथ.
कूडलसंगमदेवा,
माझे मन पारखत असता प्रसादाविना दुसरे काही स्वीकारले तर
तुमची शपथ, तुमची शपथ !
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸಾವು ಸಮೀಪಿಸಿ -ಅದರ ಭಯದಿಂದಲೋ ಎಂಬಂತೆ -ಹಲ್ಲುಗಳೆಲ್ಲಾ ಗಿಂಜಿಕೊಂಡು ನಾಲಗೆ ಮುರುಟಿದರೂ –ಅದುವರೆಗೆ ಛಲದಿಂದ ಮಾಡಿಕೊಂಡು ಬಂದಿದ್ದ ಶಿವಕಾರ್ಯಗಳನ್ನು ನಾನು ಮಾಡಬಾರದಾಗಿತ್ತು, ಮಾಡಿದ್ದರಿಂದ ಈ ಗತಿಯಾಯಿತೆಂದು ಎರಡು ಬಗೆಯುವುದಿಲ್ಲ. ನಾನು ಮಾಡಿದ್ದೆಲ್ಲವನ್ನೂ ಅರಿತೇ ಮಾಡಿದೆ, ಕುರಿತೇ ಮಾಡಿದೆ-ಪಶ್ಚಾತ್ತಾಪವಿಲ್ಲ ಎಂಬ ನಿಲುವು ಬಸವಣ್ಣನವರದು.
ಭಕ್ತನ ಜನ್ಮವು ಶಿವನಟ್ಟಿದ ಅವತಾರವಾಗಬೇಕು. ಅದರಲ್ಲಿ ಅವನು ಶಿವನ ಪರೀಕ್ಷೆಗೆ ಒಳಗಾಗಿ ಪ್ರಸನ್ನದರ್ಜೆಯಲ್ಲಿ ತೇರ್ಗಡೆಯಾಗಬೇಕು. ಅಂದರೆ ಶಿವನಿಗಾಗಿ ಶಿವಶರಣರಿಗಾಗಿ ಮಾಡಿದ್ದಾದ ಮೇಲೆ-ಬಂದದ್ದೆಲ್ಲಾ ಪ್ರಸಾದವೆಂಬ ತೃಪ್ತಿ ಅಳವಡಬೇಕು ಎನ್ನುತ್ತಿರುವರು ಬಸವಣ್ಣನವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು