ಮಾಹೇಶ್ವರನ ಪ್ರಸಾದಿಸ್ಥಲ - ಭಕ್ತಿಮಾರ್ಗ
ಹುಟ್ಟಿದ ಮಕ್ಕಳೆಲ್ಲಾ ಅರ್ಥ ಪ್ರಾಣಭಿಮಾನಕ್ಕೆ
ಒಡೆಯರಾದ ಪರಿಯ ನೋಡಾ:
ಅಟ್ಟಡಿಗೆಯ ವಿಷವನು ನಿಮಗೆ ಕೊಟ್ಟಲ್ಲದೆ ಉಣ್ಣೆನೆಂಬ ಭಾಷೆ!
ಕೂಡಲಸಂಗಮದೇವಯ್ಯಾ, ನಿನಗೆಂದಟ್ಟಡಿಗೆಯ
ನೀಡ ಕಲಿಸಿದಾತ ಕೆಂಬಾವಿಯ ಭೋಗಯ್ಯಾ.
Transliteration Huṭṭida makkaḷellā artha prāṇābhimānakke
oḍeyarāda pariya nōḍā:
Aṭṭaḍigeya viṣavanu nimage koṭṭallade uṇṇenemba bhāṣe!
Kūḍalasaṅgamadēvayya, ninagendaṭṭaḍigeya
nīḍa kalisidāta kembāviya bhōgayyā.
Manuscript
English Translation 2 Look, how the children born of you
Come to possess all that you have and are:
Their pledge that they will never eat
That poison of cooked food
Unless it is first served to you!
It is Kembhāvi Bhōgayya who taught
How to serve food prepared for you,
O Kūḍala Saṅgama Lord!
Translated by: L M A Menezes, S M Angadi
Hindi Translation देखो, सभी उत्पन्न बाल-बच्चे किस प्रकार
अर्थप्राणाभिमान के मालिक बने
उनकी प्रतिज्ञा है कि पकाया हुआ विषाक्त भोजन
तुम्हें अर्पित किये बिना न खायेंगे ।
कूडलसंगमदेव, तुम्हारे लिए पकाया भोजन
परोसना सिखाया केंभावी भोगय्या ने॥
Translated by: Banakara K Gowdappa
Telugu Translation పుట్టిన బిడ్డలందరూ; అర్థ ప్రాణాభిమానములకు
ప్రభువులై పోవు వైఖరి చూడుమా?
వండిన విషవంటకమును నీకు పెట్టకయే తిననను బాస!
దేవా, నీకు వండిన వంట నీకు పెట్ట నేర్పినవాడు కెంభావిభోగయ్య
Translated by: Dr. Badala Ramaiah
Tamil Translation பிறந்த குழந்தைகள் அனைவரும்
செல்வம், உயிர், அபிமானததிற்கு
உடையராகிய முறையைக் காணாய்
சமைத்த உணவை, நஞ்சை உமக்கு
அளிக்காது உண்ணேன் எனும் சூளுரை!
கூடல சங்கமதேவனே, உமக்கென்று
சமைத்த உணவை அளிக்கக் கற்பித்தவன்
கெம்பாவி எனும் ஊரைச் சார்ந்த போகய்யனன்றோ!
Translated by: Smt. Kalyani Venkataraman, Chennai
Marathi Translation
जन्मलेली मुले अर्थ-प्राण-अभिमानाचे मालक झाल्याची रीत पहा.
केलेल्या स्वयंपाकाचे विष तुम्हाला अर्पण.
केल्याविना न खाण्याची भाषा!
कूडलसंगमदेवा, तुमच्यासाठी स्वयंपाक
करुन अर्पण करण्यास शिकविले केंभावी भोगव्याने.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮಕ್ಕಳು ತಂದೆಯ ಹಣ ಹಸು ಎತ್ತು ಮತ್ತು ಕುಲಗೌರವಕ್ಕೆ ಹಕ್ಕುದಾರರಾಗುವಂತೆ – ಎಲೆ ಶಿವನೇ, ನಿನ್ನ ಮಗನಾದ ನಾನು ನಿನ್ನ ಚಂದ್ರಕಲಾ ಅಮೃತಕ್ಕೂ ಶ್ರೀಕಂಠವಿಷಕ್ಕೂ ಹಕ್ಕುದಾರನೇ ಆಗಿದ್ದೇನೆ. ಬಂದ ಸುಖದುಃಖವೆರಡನ್ನೂ ಪ್ರಸಾದವೆಂದು ಸ್ವೀಕರಿಸುತ್ತೇನೆ. ನನ್ನನ್ನು ಸತ್ಕರಿಸಲು ಅಟ್ಟ ರುಚಿಕರವಾದ ಅಡಿಗೆಯನ್ನಾಗಲಿ ನನಗೆ ಕೊಟ್ಟ ವಿಷವನ್ನಾಗಲಿ ನಿನ್ನೊಡನೆ ಹಂಚಿ ತಿನ್ನುತ್ತೇನೆ. ಇದು ನನ್ನ ಪ್ರತಿಜ್ಞೆ.
ಇಂಥ ಪ್ರತಿಜ್ಞೆಯನ್ನು ಮಾಡಲು ನನಗೆ ಮೇಲ್ಪಂಕ್ತಿಯಾದವನು ಕೆಂಭಾವಿ ಭೋಗಯ್ಯ. (ಈ ಸಂಬಂಧವಾದ ವಿವರ ಗೊತ್ತಿಲ್ಲ.) ಈ ಕೆಂಭಾವಿ ಭೋಗಯ್ಯನು ಲಿಂಗನೈವೇದ್ಯಕ್ಕೆಂದು ಮಾಡಿದ್ದ ಅಡಿಗೆಯನ್ನು ಮನೆಗೆ ಬಂದ ಅಸ್ಪೃಶ್ಯ(ಶಿವಭಕ್ತ)ನಿಗೂ ನೀಡಿ ಪ್ರಸಾದ ಸ್ವೀಕರಿಸುತ್ತಾನೆಂಬುದು ಮಾತ್ರ ಗೊತ್ತು. ಕೆಂಭಾವಿ ಭೋಗಯ್ಯನ ಬಳಿಗೆ ಬಂದ ಆ ಭಕ್ತನು –ವೇಷಧರಿಸಿ ಬಂದ ಶಿವನೇ ಆಗಿದ್ದನೆಂದು ಪುರಾಣ ಹೇಳುತ್ತದೆ.
ಈ ವಚನಲ್ಲಿ ಕೆಂಭಾವಿಭೋಗಯ್ಯನ ಪ್ರಸ್ತಾಪವಿರುವ ವಾಕ್ಯಪ್ರಕ್ಷಿಪ್ತವೆನಿಸುತ್ತದೆ. ಇಲ್ಲದಿದ್ದರೆ ತಾನು ಲಿಂಗಾರ್ಥ ಸಿದ್ಧಪಡಿಸಿದ ವಿಷವನ್ನೂ ಮನೆಗೆ ಬಂದ ಭಕ್ತನಿಗೆ ಕೊಡಬೇಕೆಂದಾದೀತು !
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು