•  
  •  
  •  
  •  
Index   ವಚನ - 734    Search  
 
ಮಾಹೇಶ್ವರನ ಪ್ರಸಾದಿಸ್ಥಲ - ಶರಣಪಥ
ಅಂಗದ ಮೇಲಣ ಲಿಂಗವ ಹಿಂಗಿ ಬಂದ ಸುಖವನಾರಿಗರ್ಪಿಸುವೆ? ಹಿಂಗಲಾಗದು ಭಕ್ತಿಪಥಕ್ಕೆ ಸಲ್ಲದಾಗಿ, ಹಿಂಗಲಾಗದು ಶರಣಪಥಕ್ಕೆ ಸಲ್ಲದಾಗಿ. ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ!
Transliteration Aṅgada mēlaṇa liṅgava hiṅgi banda sukhavanārigarpisuve? Hiṅgalāgadu bhaktipathakke salladāgi, hiṅgalāgadu śaraṇapathakke salladāgi. Kūḍalasaṅgamadēvara hiṅgi nuṅgiduguḷu kilbiṣa!
Manuscript
English Translation 2 Discarding the Liṅga on your body, to whom Shall I offer the reward there-from? It's unbefitting devotion's way; Never discard it, for, It's unbefitting the Śaraṇās way. Even the spit you swallow turns To poison if you forsake Lord Kūḍala Saṅgama! Translated by: L M A Menezes, S M Angadi
Hindi Translation अंग पर शिवलिंग न हो तो प्राप्त सुख किसे अर्पित करोगे? मत त्यागो वह भक्ति-पथ के योग्य नहीं है। मत त्यागो वह शरण-पथ के योग्य नहीं है। कूडलसंगमदेव को छोड निबाला हुआ थूक विष है॥ Translated by: Banakara K Gowdappa
Telugu Translation అంగముపై గల లింగమునవచ్చు సుఖమెవ్వరికి నివేదింతు? భక్తి పథమునకు చెల్లదు కాన లింగమును విడరాదు; శరణుపథమునకు చెల్లదు కాన విడరాదు సంగని విడిచి మ్రింగిన యెంగిలి మంగలమై పోవురా! Translated by: Dr. Badala Ramaiah
Tamil Translation உடலின் மீது இலிங்கம் விலகி வரும் இன்பத்தை யாருக்கு அர்ப்பிப்பது? அகலலாகாது, பக்தி நெறியில் செல்லாது அகலலாகாது, சரண நெறியில் செல்லாது கூடல சங்கமதேவனின்றி விழுங்கிய கவளமும் நஞ்சன்றோ. Translated by: Smt. Kalyani Venkataraman, Chennai
Marathi Translation अंगावरील इष्टलिंग काढून टाकले तर मिळालेली तृप्ती कोणाला अर्पण करणार? अर्पण होत नाही, भक्ती पथावर हे चालत नाही. अर्पण होणारा नाही, शरणपथावर हे चालत नाही. कूडलसंगमदेवा, इष्टलिंगाविना थुंकीही किल्मिष. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿ ಲಿಂಗಕ್ಕರ್ಪಿಸದೆ ಉಣ್ಣುವುದನ್ನು ನಿಷೇಧಿಸಿದ್ದರೆ–ಈ ವಚನದಲ್ಲಿ ಮೈಮೇಲೆ ಲಿಂಗ ಧರಿಸದಿರುವುದನ್ನು ನಿಷೇಧಿಸಲಾಗಿದೆ. ಅಂಗದ ಮೇಲೆ ಲಿಂಗವಿಲ್ಲದಿದ್ದರೆ ಭಕ್ತನು ಅರ್ಪಿಸುವುದು ಯಾರಿಗೆ ? ಅರ್ಪಿಸದೆ ಲಿಂಗಪ್ರಸಾದವೆಲ್ಲಿದೆ ಎಂಬುದು ವಾದ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು