•  
  •  
  •  
  •  
Index   ವಚನ - 735    Search  
 
ಮಾಹೇಶ್ವರನ ಪ್ರಸಾದಿಸ್ಥಲ - ಲಿಂಗಜಂಗಮ
ಬತ್ತೀಸಾಯುಧದಲ್ಲಿ ಅಭ್ಯಾಸವ ಮಾಡಿದರೇನು, ಹಗೆಯ ಕೊಲುವರೆ, ಒಂದಲಗು ಸಾಲದೆ? ಲಿಂಗವ ಗೆಲುವರೆ, `ಶರಣಸತಿ ಲಿಂಗವತಿ'ಯೆಂಬುದೊಂದಲಗು ಸಾಲದೆ? ಎನಗೆ ನಿನಗೆ ಜಂಗಮಪ್ರಸಾದವೆಂಬಲಗು ಸಾಲದೆ ಕೂಡಲಸಂಗಮದೇವಾ?
Transliteration Battīsāyudhadalli abhyāsava māḍidarēnu, hageya koluvare, ondalagu sālade? Liṅgava geluvare, `śaraṇasati liṅgavati'yembudondalagu sālade? Enage ninage jaṅgamaprasādavembalagu sālade kūḍalasaṅgamadēvā?
Manuscript
English Translation 2 What if you exercise With two-and-thirty weapons? To kill a foe, will not one weapon suffice? And to win Liṅga , will not one weapon do- The bride's devotion to her Lord? Will not, O Kūḍala Saṅgama Lord, This weapon do: the Jaṅgama 's grace? Translated by: L M A Menezes, S M Angadi
Hindi Translation बत्तीस शस्त्रों का अभ्यास करने से क्या लाभ? शत्रृ को मारने के लिए एक शस्त्र पर्याप्त नहीं? लिंग को जीतने के लिए ‘शरण सति लिंग पति’ नामक एक शस्त्र पर्याप्त नहीं? मुझे और तुम्हें जंगम प्रसाद रूपी अस्त्र पर्याप्त नहीं कूडलसंगमदेव ॥ Translated by: Banakara K Gowdappa
Telugu Translation వచ్చెదనని రాకయున్న దారుల నెదురెదురు చూచితినయ్యా ఇక యెవ్వని బంపుదు నెవరికాళ్ళ బడుదునయ్యా: శరణుల రాకయున్న నా ప్రాణమునే పంపింతునయ్యా! Translated by: Dr. Badala Ramaiah
Tamil Translation பலவகை ஆயுதங்களில் பயிற்சி செயின் என்ன? பகையைக் கொல்வதற்கு ஒரு கத்தி போதாதோ? இலிங்கத்தை வெல்வதற்கு “சரணஸதி லிங்கபதி” என்றும் ஒரு கத்தி போதாதா? எனக்கும், உனக்கும் ஜங்கமபிரசாதம் எனும் ஒரு கத்தி போதாதோ கூடல சங்கமதேவனே? Translated by: Smt. Kalyani Venkataraman, Chennai
Marathi Translation कासया बत्तीस, आयुध प्रयोग धारदार खड्ग, पुरे एक तैसेचे लिंगैक्य साधण्यासि देख शुद्ध भाव एक ऐक्यत्वासि शरणसती लिंगपति, शुद्ध हाचि भाव सिद्ध एकमेव उद्धारार्थ कूडलसंगमदेवा ! जंगमप्रसाद मिटवाया भेद, मी तू पण अर्थ - बत्तीस आयुषापेक्षा एक खड्ग, शत्रु संहारास पुरे बाहे. तसेच शरणसती लिंगपति हा भाव देव आणि भक्त यातील मी तू पण नष्ट करण्यासाठी पुरे होय. हे कूडलसंगमदेवा ! तुझ्या जंगम प्रसादाने मी तू पण भाव पूर्ण नष्ट होईल यावर माझा पूर्ण विश्वास आहे व हाच एकमेव लिंगैक्य होण्यास पुरे होय. Translated by Rajendra Jirobe, Published by V B Patil, Hirabaug, Chembur, Mumbai, 1983 बत्तीस हत्यारे चालविण्याचा अभ्यास करण्याचे प्रयोजन? शत्रूला मारण्यास एक तलवार पुरेशी नाही? लिंगकृपेसाठी `शरणसती लिंगपती` ही एकच एकच हत्यार पुरे नाही का? मला ही, तुम्हाला ही जंगमप्रसादरुपी हत्यार पुरेसे नाही का कूडलसंगमदेवा ? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಷಟ್ಸ್ಥಲ, ಏಕೋತ್ತರ ಶತಸ್ಥಲ, ಷೋಡಶೋತ್ತರ ದ್ವಿಶತಸ್ಥಲಗಳು, ಅಷ್ಟಾವರಣ ಪಂಚಾಚಾರ ಅರುವತ್ತುನಾಲ್ಕು ಶೀಲಗಳು, ನವಲಿಂಗಗಳು, ಕಾಯಾರ್ಪಣ ಕರಣಾರ್ಪಣ ಭಾವರ್ಪಣ ಭರಿತಾರ್ಪಣಗಳು, ಶಿವಯೋಗ ಲಿಂಗಾರ್ಚನೆ ಶಿವಮಂತ್ರಜಪಗಳು -ಭಕ್ತನೊಬ್ಬನ ಪಾಲಿಗೆ ಎಷ್ಟೊಂದು ವಿಧಿವಿಧಾನಗಳು ? ಈ ಆಚರಣೆಗಳ ದಟ್ಟಾರಣ್ಯದಲ್ಲಿ ನಿರಪಾಯ ನೇರಮಾರ್ಗ ಯಾವುದು ? ಸ್ವಭಾವವನ್ನು ಸರಳಗೊಳಿಸಿಕೊಂಡು ಸುತ್ತಿನ ಜಗತ್ತಿನೊಡನೆ ಸಮರಸವಾಗಿ ಬಾಳುವ-ಮಾರ್ಗ ಯಾವುದು ? ಈ ತುರ್ತು ಪ್ರಶ್ನೆಗೆ ಉತ್ತರವನ್ನೇ ಕುರಿತಿದೆ ಈ ವಚನ : ಯೋಧನು -ಬಿಲ್ಲು ಬಾಣ ಗದೆ ಸುರಗಿ ಕುಂತ ಭಲ್ಲೆ ಖಡ್ಗ ಎಂದು ಮುಂತಾದ ಮೂವತ್ತೆರಡು ಆಯುಧಗಳ ಪ್ರಯೋಗ ಪರಿಚಯಮಾಡಿಕೊಂಡಿರುವನಾದರೂ-ಶತ್ರುವನ್ನು ಕೊಲ್ಲುವ ಘಳಿಗೆ ಬಂದಾಗ ಒಂದು ಆಯುಧದಿಂದಲೇ ಹೊರತು ಕಲಿತ ಮೂವತ್ತೆರಡೂ ಆಯುಧಗಳನ್ನು ಬಳಸಿಯಲ್ಲ ! ಹೀಗೆ ಹಗೆಯನ್ನು ಕೊಲ್ಲುವುದಕ್ಕೆ ಒಂದಲಗು ಸಾಕಾದರೆ –ಇವನನ್ನು ಗೆಲ್ಲುವುದಕ್ಕೆ ಬೇಕಾದ ಬಲವಾದ ಒಂದು ಆಯುಧ ಯಾವುದು? ಅದು -ಶರಣಸತಿ ಲಿಂಗಪತಿಯೆಂಬ ಮಧುರಭಾವ ಬಿಲ್ಲಿಗೆ ಹೂಡಿದ ಜಂಗಮ ಸೇವೆಯೆಂಬ ದಿವ್ಯಬಾಣವೇ ಆಗಿದೆ ! ಧರ್ಮದ ಹೆಸರಿನಲ್ಲಿ ನೂರಾರು ಪ್ರಕ್ರಿಯೆಗಳಿದ್ದರೂ-ದಿವ್ಯವಿರಹ ಮತ್ತು ಮಾನವ ಸೇವೆಯೆಂಬರಡರಲ್ಲಿಯೇ ಅವೆಲ್ಲವೂ ಅಡಗುತ್ತವೆಯೆಂಬುದು ಬಸವಣ್ಣನವರ ಸಂದೇಶ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು