•  
  •  
  •  
  •  
Index   ವಚನ - 736    Search  
 
ಮಾಹೇಶ್ವರನ ಪ್ರಾಣಲಿಂಗಿಸ್ಥಲ - ಸದಾಚಾರ
ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ, ಒಲ್ಲೆನಯ್ಯಾ ಪರಸತಿಯರ ಸಂಗವ: ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ! ಬಳ್ಳದ ಬಾಯಂತೆ ಒಂದೇ ಮನವ ಮಾಡಿ ನಿಲ್ಲೆಂದು ನಿಲ್ಲಿಸಯ್ಯಾ, ಕೂಡಲಸಂಗಮದೇವಾ.
Transliteration Kollenayyā prāṇigaḷu, mellenayyā bāyi āykege, ollenayyā parasatiyara saṅgava: Ballenayya munde toḍakuṇṭembuda! Baḷḷada bāyante om'me manava māḍi nillendu nillisayyā, kūḍalasaṅgamadēvā.
Manuscript
English Translation 2 No living creature will I slay, O Lord, Nor eat for pleasure of the tongue; Nor will I speak adulterous love: I know there is a snag ahead! Make me be steadfast, Lord Kūḍala Saṅgama, with single mind, Even as a purse's mouth. Translated by: L M A Menezes, S M Angadi
Hindi Translation प्रभो, प्राणि-वध न करूँगा, जिह्वा स्वादार्थ न खाऊँगा, परस्त्री संग न चाहूँगा, जानता हूँ, आगे क्लेश होगा । मापक के मुँह सा एक मन से निश्चल बनाये रखो कूडलसंगमदेव ॥ Translated by: Banakara K Gowdappa
Telugu Translation చంపనయ్యా ప్రాణుల; చవిచూడనయ్యా నోటిరుచికి ఒల్ల నయ్యా పరసతీ సంగమము; ముందుముప్పని తెలిసితి ముంత మూతిరీతినొకే మనసుచేసి నిలువుమని నన్ను నిల్పుమయ్యా కూడల సంగమదేవా! Translated by: Dr. Badala Ramaiah
Tamil Translation மாஹேசுவரனின் பிராணலிங்கித்தலம் பிராணிகளைக் கொல்லேன், வாய்ச் சுவைக்காக மெல்லேன் ஐயனே பிறன்மனைத் தொடர்பை விரும்பேன் ஐயனே பிறகு சிக்குவேன் என்பதை வல்லேன் ஐயனே உழக்கின் வாயனைய ஒரே மனமாகச் செய்து நில்லென்று நிறுத்துவாய் கூடல சங்கமதேவனே. Translated by: Smt. Kalyani Venkataraman, Chennai
Marathi Translation मारणार नाही प्राण्यांना, खाणार नाही जीभेच्या इच्छेसाठी, नको देवा परसतीचा संग, जाणतो देवा यामुळे होणारी हानी. मापाच्या तोंडासम एक मन करून स्थिर करावे कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಬಾಯಿ ಚಪಲಕ್ಕೆ ಸಿಕ್ಕಿದ್ದನ್ನೆಲ್ಲ ಸಿಕ್ಕಾಬಟ್ಟೆ ತಿನ್ನುವುದಿಲ್ಲ, ತನ್ನ ಹೆಂಡಿರಲ್ಲದೆ ಅನ್ಯರಲ್ಲಿ ರತಿಸುವುದಿಲ್ಲ –ಈ ಹಿಂಸೆ ಲೋಭ ಲಾಂಪಟ್ಯಗಳಿಂದ ಒಳ್ಳೆಯದಾಗುವುದಿಲ್ಲವೆಂಬುದನ್ನು ನಾನು ಚೆನ್ನಾಗಿ ಬಲ್ಲೆ. ಆದ್ದರಿಂದ ಎಲೆ ದೇವರೇ, ನನ್ನ ಬಲ್ಲತನಕ್ಕೆ ತಕ್ಕ ನಡೆವಳಿಯನ್ನು ಕೊಟ್ಟು ಪರಿಪಾಲಿಸು. ಅಳೆದರೆ ಹಿಗ್ಗದೆ, ಸುರಿದರೆ ಕುಗ್ಗದೆ ಏಕಪ್ರಕಾರದಲ್ಲಿರುವ ಕೊಳಗದ ಬಾಯಂತೆ ನನ್ನ ಮನವನ್ನು ಅಳತೆಯಲ್ಲಿರಿಸು. ಮತ್ತು ಅಳೆದು ಸುರಿಯುವ ಈ ಕೊಳಗದ ಬಾಯಂತೆ ನನ್ನ ಮನಸ್ಸು ಈ ಲೋಕ ವಿಷಯವನ್ನ ಅಳೆದು –ಇಷ್ಟೇನೇ ಎಂದು ಹೊರಸುರಿಯಲಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು