•  
  •  
  •  
  •  
Index   ವಚನ - 738    Search  
 
ಮಾಹೇಶ್ವರನ ಪ್ರಾಣಲಿಂಗಿಸ್ಥಲ - ನಿರ್ಭೀತಿ
ಬಂದಹೆನೆಂದು ಬಾರದೆಯಿದ್ದರೆ, ಬಟ್ಟೆಗಳ ನೋಡುತ್ತ ಇದ್ದೇನಯ್ಯಾ. ಇನ್ನಾರನಟ್ಟುವೆ, ಇನ್ನಾರ ಪಾದವ ಹಿಡಿವೆನಯ್ಯಾ? ಕೂಡಲಸಂಗಮನ ಶರಣರು ಬಾರದಿದ್ದರೆ ಅಟ್ಟುವೆನೆನ್ನ ಪ್ರಾಣವನು!
Transliteration Bandahenendu bārade iddaḍe, baṭṭegaḷa nōḍuttiddēnayyā. Innāranaṭṭuve, innāra pādava hiḍivenayyā? Kūḍalasaṅgana śaraṇaru bāradiddare aṭṭuvenenna prāṇavanu!
Manuscript
English Translation 2 If he says he will come and does not come, I wait, looking this way and that. Whom can I send, to whom Shall I abase myself? If Kūḍala Saṅgama's Śaraṇās fail to come, I send my life in search of him! Translated by: L M A Menezes, S M Angadi
Hindi Translation आने का वचन देकर नहीं आये, तो बाट जोहता रहता हूँ। मैं और किसे भेजूँ, और किसके चरण पकडूँ? कूडलसंगमेश के शरण नहीं आयें, तो अपने प्राणों को भेजूँगा। Translated by: Banakara K Gowdappa
Telugu Translation వచ్చెదనని రాకయున్న దారుల నెదురెదురు చూచితినయ్యా ఇక యెవ్వని బంపుదు నెవరికాళ్ళ బడుదునయ్యా: శరణుల రాకయున్న నా ప్రాణమునే పంపింతునయ్యా Translated by: Dr. Badala Ramaiah
Tamil Translation வருகிறேனென வாராதிருப்பின், வழியை நோக்கிக் கொண்டிருந்தேன் ஐயனே யாரைப் பின்பற்றுவேன், யாரைப்பின்பற்றுவேன் யாருடைய திருவடியைப் பற்றுவேன் ஐயனே கூடல சங்கனின் அடியார் வாராதிருப்பின் என் உயிரைப் பின் தொடர்வேன் ஐயனே. Translated by: Smt. Kalyani Venkataraman, Chennai
Marathi Translation येतो म्हणून आला नाही तर तुमची वाट पाहतो देवा. कोणाला बोलविण्यास पाठवू, कोणाला पाठवू, कोणाचे चरण धरावे देवा ? कूडलसंगाचे शरण आले नाही तर माझ्या प्राणाला पाठवितो. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬುರುವೆನೆಂದು ಸಕಾಲಕ್ಕೆ ಬಾರದ ಶರಣರ ಬರವಿಗಾಗಿ ನಿರೀಕ್ಷಿಸುವುದೆಂದರೆ ಬಸವಣ್ಣನವರಿಗೆ ಬಿಟ್ಟ ಉಸಿರು ಮರಳಿ ಬಾರದ ಪರಿ. ಪ್ರೇಮ ಪ್ರಪಂಚದಲ್ಲಿ ಪ್ರೇಯಸಿಯು ಪ್ರೇಮಿಯ ವಿರಹದಿಂದ ಪಡಬಾರದ ಪಾಡುಗಳಿಗೆ ಒಳಗಾಗಿ-ಕೊನೆಗೆ ದೂತಿಯರನ್ನು ಪ್ರಾಣಕಾಂತನಲ್ಲಿಗೆ ಮೇಲೆ ಮೇಲೆ ಕಳಿಸಿ-ಬರುವುದು ತಡವಾದರೆ ಸಾಯುತ್ತಿದ್ದ ಮುಗುದೆಯರ ಕಥೆಗಳುಂಟು. ಇಲ್ಲಿ ಬಸವಣ್ಣನವರು ತಮಗೆ ಪ್ರಾಣಪ್ರಿಯರಾದ ಶರಣರನ್ನು ಅಗಲಿದರೆ-ಅವರನ್ನು ಕರೆತರಲು ಯಾರನ್ನಾದರೂ ಕಳಿಸುವ ಉಪಚಾರಕ್ಕಿಂತ –ತಮ್ಮ ಪ್ರಾಣವನ್ನೇ ಕಳಿಸುವೆನೆನ್ನುತ್ತಿರುವರು. ಶಿವಮುಗ್ಧರಾದ ಬಸವಣ್ಣನವರು ಬಿಡಿಸಿಟ್ಟ ಜಾಜಿಯ ಹೂವಿನಂತೆ ಕ್ಷಣಾರ್ಧದಲ್ಲಿ ಬಾಡುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು