ಮಾಹೇಶ್ವರನ ಶರಣಸ್ಥಲ - ಭಕ್ತಿಮಾರ್ಗ
ಹರಿಯಜ ಮುನಿಗಳೆಲ್ಲರೂ ನಿಜ,ನಿಮ್ಮ ಬಾಗಿಲ ಕಾಯ್ದಿಹರು,
ಏನು ಕಾರಣ ನೀವು ಬಾಣನ ಬಾಗಿಲ ಕಾಯ್ದಿರಿ?
ಡಿಂಗರಿಗನ ಮನೆಗೆ ಅಂಗಜಾವಹಕ್ಕೆ ಹೋಗಿದ್ದವರೊಳರೆ
ಕೂಡಲಸಂಗಮದೇವಾ?
Transliteration Hariyaja munigaḷellaru nicca,nim'ma bāgila kāydiharu,
ēnu kāraṇa nīvu bāṇana bāgila kāydiri?
Ḍiṅgarigana manege aṅgajāhavakke hōgiddavaroḷare
kūḍalasaṅgamadēvā?
Manuscript
English Translation 2 To be sure, Hari, the Unborn and all the sages
Are guarding your gate; but then,
Why did you stand guard at Bana's door?
O Kūḍala Saṅgama Lord, is there a man
Who went to guard a servant's house?
Translated by: L M A Menezes, S M Angadi
Hindi Translation सच है, हरि, अज सब मुनि
तव द्वार पर पहरा देते हैं ।
तुमने बाण के द्वार पर क्यों पहरा दिया?
कूडलसंगमदेव, कोई ऐसा है
जो सेवक के घर पहरा देने गये हो?
Translated by: Banakara K Gowdappa
Telugu Translation అజహరి మునిముఖ్యులెల్లా; నిజము నీ వాకిట కావలిగాండ్రు
కాని నీవుమాత్రము బాణుని వాకిలి గాతు వేటికో !
భటునింట భటుడవై పోవుట పాడియే నీకు దేవా?
Translated by: Dr. Badala Ramaiah
Tamil Translation திருமால், அயன் முனிவர் அனைவரும் உண்மையாக
நாள்தோறும் உம் வாயிலில் காத்திருந்தனர்
பாணனின் வாயிலில் நீர் காத்திருந்தது எதற்கோ?
ஊழியனின் இல்லத்திற்கு மன்மதனிற்காக ஏகினை
கூடல சங்கம தேவனே.
Translated by: Smt. Kalyani Venkataraman, Chennai
Marathi Translation
हरि-ब्रह्म-मुनी सर्व तुमचे द्वारपाल झाले.
तुम्ही बाणचे द्वारपाल होण्याचे कारण काय?
डिंगरीगाच्या घरी अंगरक्षक म्हणून का राहिला कूडलसंगमदेवा ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿ ಬಸವಣ್ಣನವರು ಶಿವನಿಗೆ-“ಗರ್ವ ಬೇಡ ನಿನಗೆ” ಎಂದು ಮತ್ತೆ ಮತ್ತೆ ಹೇಳಿದ್ದರೂ-ಪರಮಾರ್ಥವಾಗಿ ಆ ಶಿವನಿಗೆ ಗರ್ವವಿಲ್ಲವೆಂಬುದನ್ನೇ ಈ ವಚನದಲ್ಲಿ ಒತ್ತಿ ಹೇಳುತ್ತಿರುವರು.
ಶಿವನಿಗೆ ಗರ್ವವಿಲ್ಲವಾಗಿಯೇ ಅವನು ಸಹಸ್ರಾಕ್ಷನಾಗಿ ಸಹಸ್ರಮುಖವಾಗಿ ನಮ್ಮನ್ನು ನೋಡುತ್ತಿರುವನು, ನೋಡಿಕೊಳ್ಳುತ್ತಿರುವನು : ಶಿವನಿಗೆ ಗರ್ವ ಪಡಲೆಂದರೆ ಕಾರಣವಿಲ್ಲದಿಲ್ಲ-ವಿಷ್ಣುಬ್ರಹ್ಮಾದಿ ದೇವತೆಗಳೂ ಮುನಿಗಳೂ ದರ್ಶನವಾದೀತೇ ಎಂದು ಅವನ ಮನೆಯ ಬಾಗಿಲಲ್ಲಿ ಕಾದು ನಿಂತಿರುವನು. ಅಂಥಾ ದೇವಾಧಿದೇವನು ತನ್ನ ಸೇವಕನಾದ ಬಾಣನ ಮನೆಯ ಬಾಗಿಲಲ್ಲಿ ಪಹರೆ ಕಾಯುವವನಾಗಿ ನಿಂತಿದ್ದನೆಂದರೆ ಅವನಿಗೆ ತನ್ನ ಭಕ್ತರ ಮೇಲಣ ಮಮತೆ ಅಷ್ಟಿಷ್ಟಲ್ಲ.
ಸ್ತುತಿಪರವಾದ ಇಂಥ ವಚನಗಳಿಂದ ಬಸವಣ್ಣನವರು-ಶಿವನು ತನ್ನನು ರಕ್ಷಿಸಲು ಸಮರ್ಥನೆಂದೂ ಸದಯನೆಂದೂ, ರಕ್ಷಿಸದೆ ಕೈಬಿಡನೆಂದೂ ಭರವಸೆತಾಳುತ್ತಿರುವರು (ಅಂಗಜಾವ ಎಂದರೆ ಪಹರೆ).