•  
  •  
  •  
  •  
Index   ವಚನ - 745    Search  
 
ಮಾಹೇಶ್ವರನ ಶರಣಸ್ಥಲ - ಗೋತ್ರ
ಗೋತ್ರನಾಮವ ಬೆಸಗೊಂಡರೆ ಮಾತು ನೂಂಕದೆ ಸುಮ್ಮನಿದ್ದಿರಿದೇನಯ್ಯಾ? ತಲೆಯ ಕುತ್ತಿ ನೆಲನ ಬರೆಯುತ್ತಿದ್ದಿರಿದೇನಯ್ಯಾ? ಗೋತ್ರ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯನೆಂಬುದೇನು, ಕೂಡಲಸಂಗಯ್ಯಾ?
Transliteration Gōtranāmava besagoṇḍare mātu nūṅkade sum'maniddiridēnayyā? Taleya kutti nelana bareyuttiddiridēnayyā? Gōtra mādāra cennayya, dōhara kakkayyanembudēnu, kūḍalasaṅgayya?
Manuscript
English Translation 2 How is it, when they ask Your family name, you hold your peace And never venture a word? How is it that you bow your head And scribble upon the floor? O Kūḍala Saṅgama Lord, Does it mean anything to speak Of Mādāra Cennayya's lineage, or Ḍ'̔ōhara Kakkayya's? Translated by: L M A Menezes, S M Angadi
Hindi Translation गोत्र-नाम पूछने पर उत्तर न देकर मौन क्यों हो? सिर झुकाकर भूमिपर क्या लिख रहे हो? क्या यही गोत्र मातंग चन्नय्या और डोम कक्कय्या का है, कूडलसंगमदेव? Translated by: Banakara K Gowdappa
Telugu Translation గోత్రనామము ప్రశ్నింప మాటమార్చుచు పలుక రేటికయ్యా? తలనువంచి నేల వ్రాయుచుంటి రేటికయ్యా? గోత్రము మాదార చెన్నయ్యది, డోహర కక్కయ్యదన కీడేమి కలదో కూడల సంగామ దేవా? Translated by: Dr. Badala Ramaiah
Tamil Translation கோத்திரத்தின் பெயரைக் கேட்பின் பதில் கூறாது அமைதியாக இருப்பத ஏன்? தலையைத் தாழ்த்தி நிலத்தில் வரைவது ஏன்? கோத்திரத்தின் பெயர் சக்கிலி சென்னய்யன் சண்டாளன் கக்கய்யன் என்பதன்றோ கூடல சங்கம தேவனே. Translated by: Smt. Kalyani Venkataraman, Chennai
Marathi Translation गोत्र विचारले तर मौन का झाला देवा? मान झुकवून पायाने काय लिहिता देवा ? गोत्र नाम मादार चन्नय्या, डोहर कक्कय्या असे का सांगत नाही कूडलसंगमदेवा ? Translated by Shalini Sreeshaila Doddamani
Urdu Translation اگرتم سے کبھی پوچھے کوئی نام ونسب کیا ہے لگی رہنے نہ دو ہونٹوں پہ ہرگز مُہرِ خاموشی جھکا کے اپنے چہرہ کو پشیمانی کےعالم میں زمیں کو پاؤں کی انگشت سے کھرچو نہ تم ہرگز بتاؤ کون ہوکس کےگھرانے سے تعلق ہے کہو خاموش کیوں ہوساری دُنیا کو یہ بتلادو تمھارا سلسلہ ڈوہارککیّا سےملتا ہے تمھاراسلسلہ مادارچنیّا سےملتا ہے یہی فرما رہے ہیں میرے دیوا کوڈلا سنگم Translated by: Hameed Almas
ಕನ್ನಡ ವ್ಯಾಖ್ಯಾನ ಎಲ್ಲರಿಗೂ ಗೋತ್ರ ಸೂರ್ತಗಳುಂಟು ವೈಚಾರಿಕ ದುರ್ಬಲತೆ, ಕುಲೀನರ ದುರ್ಬೋಧೆ ಇವೇ ಮೊದಲಾದ ಕಾರಣಗಳಿಂದ ಕೆಳಗೆ ನೂಕಲ್ಪಟ್ಟಿದ್ದ ಜನರನ್ನು ಮಾನವತೆಯ ಸಹಜ ಸ್ಥಿತಿಗೆ ತರಬೇಕಾಗಿತ್ತು. ಅದು ಅಷ್ಟೊಂದು ಸುಲಭದ ಕಾರ್ಯವಾಗಿರಲಿಲ್ಲ. ಬಹುಕಾಲದಿಂದಲೂ ಜನರಲ್ಲಿ ತುಂಬಿದ್ದ ತಪ್ಪುಕಲ್ಪನೆಗಳೂ, ಅಂಧ ವಿಶ್ವಾಸಗಳೂ ಸುಲಭದಲ್ಲಿ ಅಳಿಯುವಂತಿರಲಿಲ್ಲ. ಅವನ್ನು ನಿರ್ಮೂಲನಗೊಳಿಸುವುದಕ್ಕಾಗಿ ಬಸವಣ್ಣನವರು ದಿನದಿನವೂ ಹೊಸ ಹೊಸ ವಿಚಾರಗಳನ್ನು ತುಂಬಿ ಜನರನ್ನು ವಿಚಾರಶೀಲರನ್ನಾಗಿ ಮಾಡುತ್ತಿದ್ದರು. ಹೀಗೆ ಜನರು ವಿಚಾರವಂತರಾಗುವುದೆಂದರೆ ಕುಲೀನರ ಸಂಕುಚಿತ ಸ್ವಾರ್ಥ ಪ್ರತಿಷ್ಠೆಗಳಿಗೆ ಒಂದು ದೊಡ್ಡ ಕುಠಾರಾಘಾತವೇ ಸರಿ. ಆದ್ದರಿಂದ ಜನರನ್ನು ಮೌಢ್ಯದ ಮಡುವಿನಲ್ಲಿ ಮುಳುಗಿಸಲು ಕುಲೀನರು ಪುನಃ ಯತ್ನಿಸಿದರು. ತಮ್ಮ ಕಾಶ್ಯಪಗೋತ್ರವನ್ನೋ, ಭಾರದ್ವಾಜಗೋತ್ರವನ್ನೋ, ವಾಶಿಷ್ಠಗೊತ್ರವನ್ನೋ ಮುಂದುಮಾಡಿಕೊಂಡು ಅವಾವುವೂ ನಿಮ್ಮಲ್ಲಿಲ್ಲವೆಂದು ಹೆದರಿಸತೊಡಗಿದರು. ಊರಗೌಡನ ಹೆಸರನ್ನು ಹೇಳಿ ತಳವಾರನು ಜನರನ್ನು ಬೆದರಿಸುವಂತೆ! ಈ ರೀತಿ ಗೋತ್ರದ ಹೆಸರನ್ನು ಕೇಳಿದಾಗ ಇನ್ನೂ ವಿಚಾರ ಪರಿಪಕ್ವಗೊಳ್ಳದ ಜನರಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಅವರ ಬಾಯಿಂದ ಮಾತೇ ಹೊರಡದೆ ಮೌನ ಆವರಿಸಿತು. ಬಸವಣ್ಣನವರಿಗೆ ಇದನ್ನು ಕಂಡು ತುಂಬಾ ಕಸಿವಿಸಿ. ‘ಗೋತ್ರನಾಮವ ಬೆಸಗೊಂಡರೆ ಮಾತು ನೂಂಕದೆ ಸುಮ್ಮನಿದ್ದಿರಿದೇನಯ್ಯಾ? ತಲೆಯ ಕುತ್ತಿ ನೆಲನ ಬರೆಯುತೆ ಇದ್ದಿರಿದೇನಯ್ಯಾ...?’ ತಮಗೆ ಹೇಳಲು ಯಾವ ಗೋತ್ರವೂ ಇಲ್ಲವೆಂದೇ ಭಾವಿಸಿ ಲಜ್ಜೆಯಿಂದ ತಲೆಯನ್ನು ತಗ್ಗಿಸಿದಿರೇಕೆ? ಹೆಬ್ಬೆರಳಿನಿಂದ ನೆಲವನ್ನು ಕೆರೆಯುತ್ತಾ ಮೂಕರಾಗಿ ನಿಂತಿರೇಕೆ? ಎಂದು ಆಶ್ಚರ್ಯದಿಂದ ಕೇಳುತ್ತಾರೆ. ಹಾಗಾದರೆ ನಮಗೂ ಅವರಂತೆ ಗೋತ್ರ ಇರುವುದು ನಿಜವೇ. ಎಂದರೆ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ ಎಂಬುದೇನು? ತಮ್ಮದು ಕಾಶ್ಯಪಗೋತ್ರ ಎಂದು ಕುಲೀನರು ಹೇಳಿಕೊಂಡು ನಮ್ಮ ಗೋತ್ರವನ್ನು ಕೇಳಿದರೆ ನೀವೇಕೆ ನಮ್ಮದು ಮಾದಾರ ಚೆನ್ನಯ್ಯ ಗೋತ್ರ, ಡೋಹಾರ ಕಕ್ಕಯ್ಯ ಗೋತ್ರ ಎಂದು ಹೇಳಿಕೊಳ್ಳಬಾರದು? ಮಾದಾರ ಚೆನ್ನಯ್ಯನಾಗಲೀ, ಡೋಹಾರ ಕಕ್ಕಯ್ಯನಾಗಲೀ ತಮ್ಮ ನಡೆ ನುಡಿಗಳಲ್ಲಿ ಕಶ್ಯಪ, ವಸಿಷ್ಠರಿಗಿಂತ ಏನು ಕಡಿಮೆ? ಹೀಗಿರುವಾಗ ಅವರ ಹೆಸರನ್ನು ತಮ್ಮ ಗೋತ್ರವೆಂದು ಹೇಳಿಕೊಳ್ಳುವುದರಲ್ಲಿ ಆತಂಕವೇನಿದೆ? ಎಂದು ಅಣ್ಣನವರು ಜನರನ್ನು ಹುರಿದುಂಬಿಸಿ ಅವರಲ್ಲಿ ವೈಚಾರಿಕ ಹೊಂಗಿರಣ ಪ್ರಕಾಶಿಸುವಂತೆ ಮಾಡುತ್ತಾರಲ್ಲದೆ ಜಾತಿಯಿಂದ ಕೀಳಾಗಿದ್ದರೂ ಆಚರಣೆಯಿಂದ ಕುಲಜರಾಗಿದ್ದ ಕಕ್ಕಯ್ಯ ಚನ್ನಯ್ಯಗಳನ್ನು ವಸಿಷ್ಠ ಕಶ್ಯಪರಂತೆ ಗೌರವಿಸುತ್ತಾರೆ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.